ನವದೆಹಲಿ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರನ್ನು 2023ರ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಭಾರತಕ್ಕೆ ಹಲವಾರು ಪ್ರಥಮಗಳನ್ನು ಈ ಜೋಡಿ ಸಾಧಿಸಿದೆ. 'ಖೇಲ್ ರತ್ನ' ದೇಶದ ಅತಿದೊಡ್ಡ ಕ್ರೀಡಾ ಗೌರವವಾಗಿದೆ ಮತ್ತು ವಿಶ್ವದ ಎರಡನೇ ಶ್ರೇಯಾಂಕದ ಬ್ಯಾಡ್ಮಿಂಟನ್ ಜೋಡಿಯು ಈ ಪ್ರಶಸ್ತಿಗೆ ಆಯ್ಕೆ ಆಗುವ ಮಟ್ಟದ ಪ್ರದರ್ಶನ ನೀಡಿದೆ.
ಚಿರಾಗ್ - ಸಾತ್ವಿಕ್ ಪಯಣ:2022 ರಿಂದ ಇವರಿಬ್ಬರು ಐದು ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಜನವರಿ 2022ರಲ್ಲಿ ಇಂಡಿಯನ್ ಓಪನ್ ಪ್ರಶಸ್ತಿ ಜಯದೊಂದಿಗೆ ಪ್ರಾರಂಭವಾಯಿತು, ಇದರಲ್ಲಿ ಅವರು ಇಂಡೋನೇಷ್ಯಾದ ಮೊಹಮ್ಮದ್ ಅಹ್ಸಾನ್ ಮತ್ತು ಹೆಂಡ್ರಾ ಸೆಟಿಯಾವಾನ್ ಅವರನ್ನು 21-16, 26-24 ರಿಂದ ಸೋಲಿಸಿದರು.
2023 ರಲ್ಲಿ ಅವರು ಸ್ವಿಸ್ ಓಪನ್, ಇಂಡೋನೇಷ್ಯಾ ಓಪನ್ ಮತ್ತು ಕೊರಿಯಾ ಓಪನ್ ಗೆದ್ದರು. ಇಂಡೋನೇಷ್ಯಾ ಓಪನ್ ಪ್ರಶಸ್ತಿ ಗೆಲುವು ವಿಶೇಷವಾಗಿತ್ತು, ಅವರು ಎರಡನೇ ಶ್ರೇಯಾಂಕದ ಮಲೇಷಿಯಾದ ಜೋಡಿ ಆರೋನ್ ಚಿಯಾ ಮತ್ತು ವೂಯಿ ಯಿಕ್ ಸೋಹ್ ಅವರನ್ನು 21-17, 21-18 ರಿಂದ ಸೋಲಿಸಿ ಭಾರತದ ಮೊದಲ ಬಿಡಬ್ಲ್ಯುಎಫ್ ಸೂಪರ್ 1000 ವರ್ಲ್ಡ್ ಟೂರ್ ಪ್ರಶಸ್ತಿ ಗೆದ್ದ ಆಟಗಾರರಾದರು.
ಥಾಮಸ್ ಕಪ್ ಗೆದ್ದ ಜೋಡಿ: ಅವರು ಭಾರತಕ್ಕೆ ಐತಿಹಾಸಿಕ ಥಾಮಸ್ ಕಪ್ ಗೆಲುವಿನ ಭಾಗವಾಗಿದ್ದರು. 1949 ರಿಂದ ನಡೆದ ವಿಶ್ವದ ಅಗ್ರ ಪುರುಷರ ತಂಡ ಚಾಂಪಿಯನ್‌ಶಿಪ್‌ನಲ್ಲಿ ಭಾರತವು ಮೊದಲ ಬಾರಿಗೆ ಟ್ರೋಫಿ ವಶಪಡಿಸಿಕೊಂಡಿತು. 14 ಬಾರಿ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ್ದ ಇಂಡೋನೇಷ್ಯಾವನ್ನು ಫೈನಲ್‌ನಲ್ಲಿ 3-0 ಅಂತರದಿಂದ ಈ ಜೋಡಿ ಮಣಿಸಿತ್ತು.