ಮೆಲ್ಬೋರ್ನ್(ಆಸ್ಟ್ರೇಲಿಯಾ):ಸಾನಿಯಾ ಮಿರ್ಜಾ ಅವರು ತಮ್ಮ ವೃತ್ತಿಜೀವನದ ಅಂತಿಮ ಗ್ರ್ಯಾನ್‌ಸ್ಲಾಮ್‌ನಲ್ಲಿ, ರೋಹನ್ ಬೋಪಣ್ಣ ಅವರೊಂದಿಗೆ ಮಿಶ್ರ ಡಬಲ್ಸ್ ಈವೆಂಟ್‌ನಲ್ಲಿ ಮೂರನೇ ಶ್ರೇಯಾಂಕದ ಇಂಗ್ಲೆಂಡ್‌ನ ನೀಲ್ ಸ್ಕುಪ್ಸ್ಕಿ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಡಿಸೈರೆ ಕ್ರೌಜಿಕ್ ಅವರನ್ನು 7-6(5), 6-7(5), 10-6 ಸೆಟ್‌ಗಳಿಂದ ಸೋಲಿಸಿ ಫೈನಲ್ ತಲುಪಿದ್ದಾರೆ. ಒಂದು ಗಂಟೆ 52 ನಿಮಿಷಗಳ ಕಾಲ ನಡೆದ ಸೆಮಿಫೈನಲ್‌ನಲ್ಲಿ ಭಾರತದ ಜೋಡಿ ಗೆಲುವಿನ ನಗೆ ಬೀರಿದೆ.
ಮೊದಲ ಸೆಟ್‌ನಲ್ಲಿ ಭಾರತದ ಹಿಡಿತ:ಮೊದಲ ಸೆಟ್‌ನಲ್ಲಿ ಮೂರನೇ ರ್ಯಾಂಕಿಂಗ್ನ ನೀಲ್ ಮತ್ತು ಡಿಸೈರೆ ಕ್ರೌಜಿಕ್ ಅವರು ಭಾರತೀಯ ಜೋಡಿಗೆ ಸಮಬಲದ ಪೈಪೋಟಿ ನೀಡಿದರು. ಟೈ ಬ್ರೇಕರ್ನಲ್ಲಿ ಭಾರತದ ಸಾನಿಯಾ ಮಿರ್ಜಾ, ರೋಹನ್ ಬೋಪಣ್ಣ ಜೋಡಿ ಮುನ್ನಡೆ ಸಾಧಿಸಿತು. ಈ ಮೂಲಕ ಮೊದಲ ಸೆಟ್ ಅನ್ನು ಭಾರತೀಯ ಜೋಡಿ ತಮ್ಮದಾಗಿಸಿಕೊಂಡಿತು.
ಎರಡನೇ ಸೆಟ್ ಟೈ:ಎರಡನೇ ಸೆಟ್‌ನಲ್ಲಿ ಆಟ ಪೆಂಡಾಲಂಮ್ನಂತೆ ತೂಗಾಡತೊಡಗಿತು. ಭಾರತದ ಜೋಡಿ ತಮ್ಮ ಎದುರಾಳಿಗಳ ವಿರುದ್ಧ ಬ್ರೇಕ್ ನಂತರ 1-0 ಮುನ್ನಡೆ ಸಾಧಿಸಿದರು. ಸತತ ಆಡದಲ್ಲಿ ಮತ್ತೆ ಎರಡೂ ಜೊಡಿ ಟೈಯಲ್ಲಿ ಎರಡನೇ ಸೆಟ್ನ್ನು ಮುಗಿಸಿದರು. ಟೈ ಬ್ರೇಕರ್ನಲ್ಲಿ ಮೂರನೇ ಶ್ರೇಯಾಂಕದ ಜೋಡಿ ಮುನ್ನಡೆ ಸಾಧಿಸ 6-7ರಿಂದ ಸೆಟ್ ವಶ ಪಡಿಸಿಕೊಂಡರು.
ಕೊನೆಯ ಸೆಟ್‌ನಲ್ಲಿ ಸಾನಿಯಾ ಪಾರಮ್ಯ:ನಿರ್ಣಾಯಕ ಸೆಟ್‌ನಲ್ಲಿ ಸಾನಿಯಾ ಮತ್ತು ಬೋಪಣ್ಣ ಐದು ಪಾಯಿಂಟ್‌ಗಳ ಮುನ್ನಡೆ ಸಾಧಿಸಿದರು. ಆದರೆ, ಅವರ ಎದುರಾಳಿಗಳು ಭಾರತೀಯ ಜೋಡಿಯ ಮುನ್ನಡೆಯನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿದರು. ಐದು ಅಂತರವನ್ನು ಸತತ ಪ್ರಯತ್ನದಿಂದ 8-6ಕ್ಕೆ ತರುವ ಮೂಲಕ ಆಟಕ್ಕೆ ಟ್ವಿಸ್ಟ್ ನೀಡಿದರು. ಎದುರಾಳಿಗಳ ಈ ಏರಿಕೆಯ ನಂತರ ಬಿರುಸಿನ ಆಟಕ್ಕೆ ಮುಂದಾದ ಸಾನಿಯಾ ಅವಳಿ ಅಂಕಗಳನ್ನು ಗಳಿಸಿದರು. ಇದರಿಂದ 10-6 ರಿಂದ ಭಾರತದ ಜೋಡಿ ಮುನ್ನಡೆ ಸಾಧಿಸಿ ಫೈನಲ್‌ಗೆ ಏರಿತು.