ವಿಂಬಲ್ಡನ್: ವಿಂಬಲ್ಡನ್‌ನಲ್ಲಿ ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರು ಮಿಶ್ರ ಡಬಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ನೀಲ್ ಸ್ಕುಪ್‌ಸ್ಕಿ ಮತ್ತು ದೇಸಿರೆ ಕ್ರಾವ್‌ಜಿಕ್ ವಿರುದ್ಧ ಪರಾಭವಗೊಂಡಿದ್ದಾರೆ.
ಮಿರ್ಜಾ ಮತ್ತು ಅವರ ಕ್ರೊಯೇಷಿಯಾದ ಜೊತೆಗಾರ ಆರನೇ ಶ್ರೇಯಾಂಕದ ಮೇಟ್ ಪಾವಿಕ್ ಅವರು ಬುಧವಾರ ರಾತ್ರಿ ಎರಡು ಗಂಟೆ 16 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಗ್ರೇಟ್ ಬ್ರಿಟನ್‌ನ ಸ್ಕುಪ್ಸ್ಕಿ ಮತ್ತು ಅಮೆರಿಕನ್ ಕ್ರಾವ್ಜಿಕ್ ವಿರುದ್ಧ 6-4 5-7 4-6 ಅಂತರದಲ್ಲಿ ಸೋತಿದ್ದಾರೆ.
35 ವರ್ಷದ ಮಿರ್ಜಾ ಅವರು ಮೂರು ಮಿಶ್ರ ಡಬಲ್ಸ್ ಟ್ರೋಫಿಗಳನ್ನು ಒಳಗೊಂಡಂತೆ ಆರು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಭಾರತದ ಅತ್ಯಂತ ನಿಪುಣ ಮಹಿಳಾ ಟೆನ್ನಿಸ್ ಆಟಗಾರ್ತಿಯಾಗಿಯಾಗಿ ಹೆಸರು ಗಳಿಸಿದ್ದಾರೆ. ಈ ಮಿಶ್ರ ಡಬಲ್ಸ್ ಮೂಲಕ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಘೋಷಿಸುವುದಾಗಿ ಅವರು ಈ ಹಿಂದೆ ಹೇಳಿದ್ದರು.
2009 ರ ಆಸ್ಟ್ರೇಲಿಯನ್ ಓಪನ್ ಮತ್ತು 2012 ರ ಫ್ರೆಂಚ್ ಓಪನ್‌ನಲ್ಲಿ ಮಹೇಶ್ ಭೂಪತಿ ಮತ್ತು 2014 ರ ಯುಎಸ್ ಓಪನ್‌ನಲ್ಲಿ ಬ್ರೆಜಿಲಿಯನ್ ಬ್ರೂನೋ ಸೋರೆಸ್ ಅವರೊಂದಿಗೆ ಮಿಶ್ರ ಡಬಲ್ಸ್ ಪ್ರಶಸ್ತಿಗಳನ್ನು ಸಾನಿಯಾ ಗೆದ್ದಿದ್ದರು.
ಇದನ್ನೂ ಓದಿ:23 ಲಕ್ಷ ರೂ. ಸಂಬಳ ಮರಳಿಸಿದ ಪ್ರೊಫೆಸರ್; ವರ್ಗಾವಣೆ ನೀಡದ್ದಕ್ಕೆ ಗಾಂಧಿಗಿರಿ