ನವದೆಹಲಿ :ಭಾರತದ ಈಜುಗಾರ ಸಜನ್ ಪ್ರಕಾಶ್ ಅವರು ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ನಡೆದ ಡ್ಯಾನಿಶ್ ಓಪನ್ ಈಜು ಕೂಟದಲ್ಲಿ ಪುರುಷರ 200 ಮೀಟರ್ ಬಟರ್‌ಫ್ಲೈ ಚಿನ್ನವನ್ನು ಗೆಲ್ಲುವ ಮೂಲಕ ಗೆಲುವಿನ ತಮ್ಮ ಋತುವನ್ನು ಆರಂಭಿಸಿದ್ದಾರೆ.
ಶುಕ್ರವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ಸಜನ್ 200 ಮೀಟರ್ ಬಟರ್ಫೈನಲ್ಲ್ಲಿ 1 ನಿಮಿಷ 59.27 ಸೆಕೆಂಡ್ಗಳಲ್ಲಿ ತಲುಪುವ ಮೂಲಕ ಚಿನ್ನದ ಪದಕ ಪಡೆದುಕೊಂಡರು.
ಬಹುಭಾಷಾ ನಟ ಆರ್. ಮಾಧವನ್ ಮಗ ವೇದಾಂತ್ ಅವರು 1500 ಮೀಟರ್ ಫ್ರೀಸ್ಟೈಲ್ನಲ್ಲಿ 2ನೇ ಸ್ಥಾನ ಪಡೆದು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. 10 ಮಂದಿಯ ಫೈನಲ್ ಸುತ್ತಿನಲ್ಲಿ ವೇದಾಂತ್ 15 ನಿಮಿಷ 57.86 ಸೆಕೆಂಡ್ಗಳಲ್ಲಿ ತಲುಪಿ 2ನೇ ಸ್ಥಾನ ಪಡದುಕೊಂಡರು.
ಈ ಕುರಿತು ಟ್ವೀಟ್ ಮಾಡಿರುವ ನಟ ಮಾಧವನ್, ನಿಮ್ಮೆಲ್ಲರ ಆಶೀರ್ವಾದ ಮತ್ತು ದೇವರ ಕೃಪೆ, ಸಜನ್ ಪ್ರಕಾಶ್ ಮತ್ತು ವೇದಾಂತ್ ಮಾಧವನ್ಕೋಪನ್ಹೇಗನ್ನಲ್ಲಿ ನಡೆದ ಡ್ಯಾನಿಸ್ ಓಪನ್ನಲ್ಲಿ ಭಾರತಕ್ಕೆ ಚಿನ್ನ ಮತ್ತು ಬೆಳ್ಳಿ ತಂದುಕೊಟ್ಟಿದ್ದಾರೆ. ಕೋಚ್ ಪ್ರದೀಪ್ ಅವರಿಗೆ, ಸ್ವಿಮ್ಮಿಂಗ್ ಫೆಡರೇಷನ್ ಆಫ್ ಇಂಡಿಯಾ ಮತ್ತು ಎಎನ್ಎಸ್ಎಗೆ ಧನ್ಯವಾದಗಳು ಎಂದು ಬರೆದುಕೊಂಡು ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಕನ್ನಡಿಗ ಕೆಎಲ್ ರಾಹುಲ್ ಸಿಡಿಲಬ್ಬರದ ಶತಕ: ಮುಂಬೈ ಇಂಡಿಯನ್ಸ್ಗೆ 200 ರನ್ಗಳ ಗುರಿ