ಹೈದರಾಬಾದ್:ಭಾರತದ ಈಜುಪಟು ಸಜನ್ ಪ್ರಕಾಶ್ ಹೊಸದೊಂದು ದಾಖಲೆ ನಿರ್ಮಾಣ ಮಾಡಿದ್ದು, ಮುಂಬರುವ ಟೋಕಿಯೋ ಒಲಂಪಿಕ್ನಲ್ಲಿ ಭಾಗಿಯಾಗುವ ಅರ್ಹತೆ ಪಡೆದುಕೊಂಡಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿರುವ ಮೊದಲ ಭಾರತೀಯ ಈಜುಪಟು ಎಂಬ ಹೆಗ್ಗಳಿಕೆಗೆ ಸಹ ಅವರು ಪಾತ್ರರಾಗಿದ್ದಾರೆ.
ರೋಮ್ನಲ್ಲಿ ನಡೆದ ಸೆಸ್ಟೆ ಕೊಲ್ಲಿ ಟ್ರೋಫಿಯಲ್ಲಿ ಪುರುಷರ 200 ಮೀಟರ್ ಬಟರ್ಫ್ಲೈ ಈಜು ಸ್ಪರ್ಧೆಯಲ್ಲಿ 1:56:38 ನಿಮಿಷದಲ್ಲಿ ಗುರಿ ಮುಟ್ಟುವ ಮೂಲಕ ಈ ಸಾಧನೆ ಮಾಡಿದ್ದಾರೆ. ಒಲಿಂಪಿಕ್ನಲ್ಲಿ ಅರ್ಹತೆ ಪಡೆದುಕೊಳ್ಳಬೇಕಾದರೆ ಅವರು ಈ ಗುರಿಯನ್ನ 1:56:48 ನಿಮಿಷದೊಳಗೆ ಮುಟ್ಟಬೇಕಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸ್ಫೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಟ್ವೀಟ್ ಮಾಡಿ ಮಾಹಿತಿ ನೀಡಿದೆ. ಜತೆಗೆ ಅವರಿಗೆ ಅಭಿನಂದನೆ ಸಲ್ಲಿಕೆ ಮಾಡಿದೆ.
ಭಾರತೀಯ ಈಜುಪಟು ಸಜನ್ ಪ್ರಕಾಶ್
27 ವರ್ಷದ ಸಾಜನ್ ಪ್ರಕಾಶ್ ಮೂಲತ ಕೇರಳದವರಾಗಿದ್ದು, ಕಳೆದ ಆರು ದಿನಗಳ ಹಿಂದೆ 200 ಮೀಟರ್ ಬೆನಾಗ್ರೇಡ್ ಟ್ರೋಫಿ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು.
ಇದನ್ನೂ ಓದಿರಿ: ಶೂಟಿಂಗ್ ವಿಶ್ವಕಪ್: 10 ಮೀ. ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ
ಇದಕ್ಕೂ ಮೊದಲು ನಡೆದಿದ್ದ FINA ಮಾನ್ಯತೆ ಪಡೆದ ಒಲಿಂಪಿಕ್ ಕ್ವಾಲಿಫೈಯರ್‌ನಲ್ಲಿ ಪುರುಷರ 200 ಮೀಟರ್ ಬಟರ್ಫ್ಲೈ ವಿಭಾಗದಲ್ಲಿ ಪ್ರಕಾಶ್ 1 ನಿಮಿಷ 56.96 ಸೆಕೆಂಡ್ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಪಡೆದು ಕೊಂಡರು. ಈ ಮೂಲಕ 2018ರಲ್ಲಿ ಒಂದು ನಿಮಿಷ 57.73 ಸೆಕೆಂಡುಗಳಲ್ಲಿ ಗುರಿ ತಲುಪಿ ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆಯನ್ನು ತಾವೇ ಬ್ರೇಕ್ ಮಾಡಿದರು. ಆದರೆ, 27 ವರ್ಷ ಈಜುಪಟು ಕೇವಲ 0.48 ಸೆಕೆಂಡ್ಗಳಲ್ಲಿ ಒಲಿಂಪಿಕ್ ಕೋಟಾ ತಪ್ಪಿಸಿಕೊಂಡಿದ್ದರು. ಆದರೆ. ಇದೀಗ ಅರ್ಹತೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.