ನವದೆಹಲಿ: ಮಾಜಿ ಚಾಂಪಿಯನ್ ಸೈನಾ ನೆಹ್ವಾಲ್ ವಿಶ್ವ ಚಾಂಪಿಯನ್ಶಿಪ್ ಕಂಚಿನ ಪದಕ ವಿಜೇತ ಲಕ್ಷ್ಯ ಸೇನ್ ಹಾಗೂ ಹೆಚ್.ಎಸ್.ಪ್ರಣಯ್ ಬುಧವಾರ ಇಂಡಿಯಾ ಓಪನ್ನ ಮೊದಲ ಸುತ್ತಿನಲ್ಲಿ ಜಯ ಸಾಧಿಸಿದ್ದಾರೆ.
ಗಾಯದ ಕಾರಣ ಹಲವು ಟೂರ್ನಿಗಳನ್ನು ಮಿಸ್ ಮಾಡಿಕೊಂಡಿದ್ದ ವಿಶ್ವದ ಮಾಜಿ ನಂಬರ್ 1 ಆಟಗಾರ್ತಿ ಸೈನಾ ಎದುರಾಳಿ ಆಟಗಾರ್ತಿ ಜೆಕ್ ಗಣರಾಜ್ಯದ ತೆರೆಸಾ ಸ್ವಾಬಿಕೋವಾ ಗಾಯಗೊಂಡು ನಿವೃತ್ತಿಯಾದ ಕಾರಣ ನಿರಾಯಾಸವಾಗಿ 2ನೇ ಸುತ್ತಿಗೆ ಪ್ರವೇಶ ಪಡೆದರು. ಇದಕ್ಕೂ ಮುನ್ನ ಅವರು 22-20ರ ರೋಚಕ ಕದನದಲ್ಲಿ ಜೆಕ್ ಶಟ್ಲರ್ಗೆ ಸೋಲುಣಿಸಿದ್ದರು.
ಸೈನಾ 2ನೇ ಸುತ್ತಿನಲ್ಲಿ ತಮ್ಮ ಸಹ ಶಟ್ಲರ್ ಸಮಿಯಾ ಇಮದ್ ಫಾರೂಕಿ ಅವರಿಗೆ 21-18, 21-9ರಲ್ಲಿ ಸೋಲುಣಿಸಿರುವ ಭಾರತದವರೇ ಆದ ಮಾಳವಿಕಾ ಬನ್ಸೂದ್ ಅವರನ್ನು ಎದುರಿಸಲಿದ್ದಾರೆ.
ವಿಶ್ವ ಚಾಂಪಿಯನ್ಶಿಪ್ನಲ್ಲಿ ಅಮೋಘ ಪ್ರದರ್ಶನ ತೋರಿ ಕ್ವಾರ್ಟರ್ಫೈನಲ್ ತಲುಪಿದ್ದ ಹೆಚ್.ಎಸ್. ಪ್ರಣಯ್ 21-14, 21-7ರಲ್ಲಿ ಸ್ಪೇನ್ನ ಪಬ್ಲೊ ಏಬಿಯನ್ ವಿರುದ್ಧ ಗೆಲುವು ಸಾಧಿಸಿದರು. 2ನೇ ಸುತ್ತಿನಲ್ಲಿ ಫ್ರಾನ್ಸ್ನ ಅರ್ನಾಡ್ ಮರ್ಕಲ್ ವಿರುದ್ಧ 21-16, 15-21, 21-10ರ ಕಠಿಣ ಹೋರಾಟ ನಡೆಸಿ ಗೆದ್ದಿರುವ ಭಾರತದ ಮಿಥುನ್ ಮಂಜುನಾಥ್ ವಿರುದ್ಧ ಸೆಣಸಾಡಲಿದ್ದಾರೆ.