ನವದೆಹಲಿ: ಎರಡು ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಸೈನಾ ನೆಹ್ವಾಲ್ ಫಿಟ್‌ನೆಸ್ ಸಮಸ್ಯೆಯಿಂದಾಗಿ ಏಷ್ಯನ್ ಗೇಮ್ಸ್‌ನ ರಾಷ್ಟ್ರೀಯ ಬ್ಯಾಡ್ಮಿಂಟನ್ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸುತ್ತಿಲ್ಲ. ಭಾರತದ ಬ್ಯಾಡ್ಮಿಂಟನ್ ಅಸೋಸಿಯೇಷನ್ ಮೇ 4 ರಿಂದ 7 ರವರೆಗೆ ತೆಲಂಗಾಣದ ಜ್ವಾಲಾ ಗುಟ್ಟಾ ಅಕಾಡೆಮಿಯಲ್ಲಿ ಏಷ್ಯನ್ ಗೇಮ್ಸ್‌ಗೆ ತಂಡವನ್ನು ಆಯ್ಕೆ ಮಾಡಲು ಟ್ರಯಲ್ಸ್ ನಡೆಸಲಿದೆ.
ಏಷ್ಯನ್ ಗೇಮ್ಸ್ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 8 ರವರೆಗೆ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿದೆ. ಫಿಟ್‌ನೆಸ್ ಕಾರಣದಿಂದ ಸೈನಾ ನೆಹ್ವಾಲ್ ಭಾಗವಹಿಸುವುದಿಲ್ಲ ಎಂದು ಬ್ಯಾಡ್ಮಿಂಟನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಂಜಯ್ ಮಿಶ್ರಾ ತಿಳಿಸಿದ್ದಾರೆ. ಇದಲ್ಲದೇ ಕುಶಾಲ್ ರಾಜ್ ಮತ್ತು ಪ್ರಕಾಶ್ ರಾಜ್ ಕೂಡ ತಮ್ಮ ಹೆಸರನ್ನು ಟ್ರಯಲ್ಸ್ ನಿಂದ ಹಿಂಪಡೆದಿದ್ದಾರೆ.
ಸೈನಾ ಕೊನೆಯ ಬಾರಿ ಓರ್ಲಿಯನ್ಸ್ ಮಾಸ್ಟರ್ಸ್ ನಲ್ಲಿ ಆಡಿದ್ದರು. ಕೆಲ ಸಮಯದಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ವಿಶ್ವದ ಮಾಜಿ ನಂಬರ್ ಒನ್ ಆಟಗಾರ ಜನವರಿಯಲ್ಲಿ ನಡೆದ ಬ್ಯಾಡ್ಮಿಂಟನ್ ಏಷ್ಯಾ ಮಿಶ್ರ ತಂಡ ಚಾಂಪಿಯನ್‌ಶಿಪ್‌ನ ಟ್ರಯಲ್ಸ್‌ನಲ್ಲಿ ಭಾಗವಹಿಸಿರಲಿಲ್ಲ. ಕಳೆದ ವರ್ಷ ಕಾಮನ್‌ವೆಲ್ತ್ ಗೇಮ್ಸ್ ಟ್ರಯಲ್ಸ್‌ನಲ್ಲೂ ಭಾಗವಹಿಸಲು ಸೈನಾಗೆ ಸಾಧ್ಯವಾಗಿರಲಿಲ್ಲ.
ವಿಶ್ವ ಶ್ರೇಯಾಂಕದ ಆಧಾರದಲ್ಲಿ ಪಿವಿ ಸಿಂಧು (ವಿಶ್ವ ರ‍್ಯಾಂಕಿಂಗ್ 11), ಎಚ್‌ಎಸ್ ಪ್ರಣಯ್ (ವಿಶ್ವ ರ‍್ಯಾಂಕಿಂಗ್ 9), ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ (ವಿಶ್ವ ರ‍್ಯಾಂಕಿಂಗ್ 6) ಮತ್ತು ಮಹಿಳೆಯರ ಜೋಡಿ ತ್ರಿಷಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ (ವಿಶ್ವ ರ‍್ಯಾಂಕಿಂಗ್ 6) ಏಷ್ಯನ್ ಗೇಮ್ಸ್‌ಗೆ ನೇರ ಆಯ್ಕೆಯನ್ನು ಪಡೆದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ದುಬೈನಲ್ಲಿ ನಡೆದ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ಶಿಪ್ನಲ್ಲಿ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಚಿನ್ನದ ಪದಕ ಗೆದ್ದರು. ಭಾರತಕ್ಕೆ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನ ಎರಡನೇ ಚಿನ್ನದ ಪದಕ ಇದಾಗಿದ್ದು, ದಿನೇಶ್ ಖನ್ನಾ 1965ರಲ್ಲಿ ಪುರುಷರ ಸಿಂಗಲ್ಸ್ ಚಿನ್ನ ಗೆದ್ದಿದ್ದರು.
ಏಷ್ಯನ್ ಗೇಮ್ಸ್‌ಗೆ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸುವ ಆಟಗಾರರ ಪಟ್ಟಿ ಹೀಗಿದೆ: