ಕರ್ನಾಟಕ

karnataka

ETV Bharat / sports

ರಾಣಿ, ಮರಿಯಪ್ಪನ್ ಸೇರಿ 5 ಒಲಿಂಪಿಕ್ಸ್​ ಸ್ಟಾರ್​ಗಳಿಗೆ ಪ್ರಮೋಷನ್ ನೀಡಿದ SAI - ಶರದ್ ಕುಮಾರ್​

ಸವಿತಾ ಪೂನಿಯಾ ಸಹಾಯಕ ಕೋಚ್​ ಸ್ಥಾನದಿಂದ ಕೋಚ್​ ಸ್ಥಾನಕ್ಕೆ, ರಾಣಿ ರಾಂಪಾಲ್​ ಮತ್ತು ದುಬೆ ಸೀನಿಯರ್​ ಕೋಚ್​ ಸ್ಥಾನಕ್ಕೆ ಬಡ್ತಿ ನೀಡಲಾಗಿದೆ. ರಾಣಿ ಮತ್ತು ಸವಿತ ಟೋಕಿಯೋ ಒಲಿಂಪಿಕ್ಸ್​ನಲ್ಲಿ 4ನೇ ಸ್ಥಾನ ಪಡೆದ ಮಹಿಳಾ ಹಾಕಿ ತಂಡದ ಸದಸ್ಯರಾಗಿದ್ದರು..

SAI gives out of turn promotion to 5 Tokyo stars
ಭಾರತೀಯ ಕ್ರೀಡಾ ಪ್ರಾಧಿಕಾರ

By

Published : Sep 28, 2021, 4:37 PM IST

Updated : Sep 28, 2021, 5:10 PM IST

ನವದೆಹಲಿ :ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಮತ್ತು ಗೋಲ್​ ಕೀಪರ್​ ಸವಿತ ಪೂನಿಯಾ ಹಾಗೂ ಪ್ಯಾರಾಲಿಂಪಿಕ್ಸ್​ ಪದಕ ವಿಜೇತರಾದ ಮರಿಯಪ್ಪನ್ ತಂಗವೇಲು ಮತ್ತು ಶರದ್​ ಕುಮಾರ್​ ಅವರು ಟೋಕಿಯೋ ಒಲಿಂಪಿಕ್ಸ್​ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದಕ್ಕಾಗಿ ಭಾರತೀಯ ಕ್ರೀಡಾ ಪ್ರಾಧಿಕಾರ ಪ್ರಮೋಷನ್​ ನೀಡಿದೆ.

ಇವರ ಜೊತೆಗೆ ಟೋಕಿಯೋದಲ್ಲಿ ಕಂಚಿನ ಪದಕ ಗೆದ್ದ ಹಾಕಿ ತಂಡದ ಕೋಚ್​ ಪಿಯೂಷ್ ದುಬೆ ಅವರಿಗೂ ಪ್ರಮೋಷನ್ ನೀಡುವುದಾಗಿ 55ನೇ SAI ಸಭೆಯಲ್ಲಿ ನಿರ್ಧರಿಸಲಾಗಿದೆ. ಸವಿತಾ ಪೂನಿಯಾ ಸಹಾಯಕ ಕೋಚ್​ ಸ್ಥಾನದಿಂದ ಕೋಚ್​ ಸ್ಥಾನಕ್ಕೆ, ರಾಣಿ ರಾಂಪಾಲ್​ ಮತ್ತು ದುಬೆ ಸೀನಿಯರ್​ ಕೋಚ್​ ಸ್ಥಾನಕ್ಕೆ ಬಡ್ತಿ ನೀಡಲಾಗಿದೆ. ರಾಣಿ ಮತ್ತು ಸವಿತ ಟೋಕಿಯೋ ಒಲಿಂಪಿಕ್ಸ್​ನಲ್ಲಿ 4ನೇ ಸ್ಥಾನ ಪಡೆದ ಮಹಿಳಾ ಹಾಕಿ ತಂಡದ ಸದಸ್ಯರಾಗಿದ್ದರು.

ಸತತ 2ನೇ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಪ್ಯಾರಾ ಹೈಜಂಪರ್​ ಮರಿಯಪ್ಪನ್ ಅವರನ್ನು ಸೀನಿಯರ್ ಕೋಚ್​ ಸ್ಥಾನದಿಂದ ಚೀಫ್ ಕೋಚ್​ ಸ್ಥಾನಕ್ಕೆ ಬಡ್ತಿ ನೀಡಲಾಗಿದೆ. ಕಂಚು ಗೆದ್ದಿದ್ದ ಶರದ್ ಕುಮಾರ್​ ಅವರನ್ನು ಕೋಚ್​ ಹುದ್ದೆಗೆ ಬಡ್ತಿ ನೀಡಲಾಗಿದೆ.

ಇನ್ನು, ತಮ್ಮ 42ನೇ ವಯಸ್ಸಿಗೆ ಲಿವರ್​ ಕ್ಯಾನ್ಸರ್​ನಿಂದ ಮೃತಪಟ್ಟ ಮಾಜಿ ಕಾಮನ್​ವೆಲ್ತ್​ ಚಿನ್ನದ ಪದಕ ವಿಜೇತ ಮತ್ತು ಅರ್ಜುನ ಅವಾರ್ಡ್​ ಪುರಸ್ಕೃತ ಡಿಂಕೊ ಸಿಂಗ್ ಅವರ ಕುಟುಂಬಕ್ಕೆ 6.87 ಲಕ್ಷ ರೂ.ಗಳನ್ನು ಗೌರವಾರ್ಥವಾಗಿ ನೀಡುವುದಕ್ಕೆ ಸಭೆಯಲ್ಲಿ ನಿರ್ಧರಿಸಲಾಗಿದೆ.

ಇದನ್ನು ಓದಿ:ಪ್ಯಾರಾಲಿಂಪಿಕ್ಸ್​ ಕಂಚು ವಿಜೇತ ಶರದ್​ಗೆ ಹೃದಯ ಸಂಬಂಧಿ ಸಮಸ್ಯೆ, AIIMSನಲ್ಲಿ ತಪಾಸಣೆ

Last Updated : Sep 28, 2021, 5:10 PM IST

ABOUT THE AUTHOR

...view details