ಬೆಂಗಳೂರು:ಸ್ಯಾಫ್ ಪುಟ್ಬಾಲ್ ಚಾಂಪಿಯನ್ಶಿಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ಭರ್ಜರಿ ಗೆಲುವು ದಾಖಲಿಸಿದೆ. ನಾಯಕ ಸುನಿಲ್ ಚೆಟ್ರಿ ಹ್ಯಾಟ್ರಿಕ್ ಗೋಲು ದಾಖಲಿಸಿದರು. ಭಾರತ 4-0 ಗೋಲುಗಳಿಂದ ಪಾಕಿಸ್ತಾನವನ್ನು ಮಣಿಸಿ ಟೂರ್ನಿಯಲ್ಲಿ ಅದ್ಭುತ ಆರಂಭ ಪಡೆಯಿತು.
ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿಂದು ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಶನ್ ಚಾಂಪಿಯನ್‌ಶಿಪ್‌ನ ಪಂದ್ಯ ನಡೆಯಿತು. ಪಂದ್ಯಾರಂಭದಿಂದಲೇ ಪಾಕಿಸ್ತಾನದ ಮೇಲೆ ಭಾರತ ತಂಡ ಪ್ರಾಬಲ್ಯ ಮೆರೆಯಿತು. ಸುನಿಲ್ ಚೆಟ್ರಿ ಅವರ ಹ್ಯಾಟ್ರಿಕ್ ಮತ್ತು ಬದಲಿ ಆಟಗಾರ ಉದಾಂತ ಸಿಂಗ್ ಗೋಲು ಆತಿಥೇಯರಿಗೆ ಭರ್ಜರಿ ಜಯ ತಂದುಕೊಟ್ಟಿತು.
ಪಂದ್ಯದ 10ನೇ ನಿಮಿಷದಲ್ಲೇ ಚೆಟ್ರಿ ಬಾರಿಸಿದ ಗೋಲಿನಿಂದ ಭಾರತ ಖಾತೆ ತೆರೆಯಿತು. ಇದಾದ ಆರು ನಿಮಿಷದಲ್ಲಿ, ಪಂದ್ಯದ 16ನೇ ನಿಮಿಷದಲ್ಲಿ ಚೆಟ್ರಿ ಎರಡನೇ ಬಾರಿಸಿದರು. ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸುವಲ್ಲಿ ಎಡವಿದರೂ ಚೆಟ್ರಿ, ಭಾರತಕ್ಕೆ 2-0 ಅಂತರದಿಂದ ಮುನ್ನಡೆ ತಂದುಕೊಟ್ಟರು.
ಸುನಿಲ್ ಚೆಟ್ರಿ ಪಂದ್ಯದ 31ನೇ ನಿಮಿಷದಲ್ಲಿ ಹ್ಯಾಟ್ರಿಕ್ ಗೋಲು ಸಿಡಿಸಲು ಯತ್ನಿಸಿದರು. ಆದರೆ, ಕಡಿಮೆ ಸ್ಟ್ರೈಕ್ನಿಂದ ಸ್ವಲ್ಪ ಅಂತರದಲ್ಲಿ ಗುರಿ ತಪ್ಪಿತು. ಹೀಗಾಗಿ ಭಾರತದ ಎರಡು ಗೋಲುಗಳ ಮುನ್ನಡೆಯೊಂದಿಗೆ ಮೊದಲ ಅವಧಿ ಮುಕ್ತಾಯವಾಯಿತು. ಮೊದಲ ಅವಧಿಯಲ್ಲಿ ಪಾಕಿಸ್ತಾನ ಆಟಗಾರರಿಗೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಎರಡನೇ ಅವಧಿಯಲ್ಲೂ ಭಾರತ ಪ್ರಾಬಲ್ಯ ಮೆರೆಯಿತು. ಪಂದ್ಯದ 73ನೇ ನಿಮಿಷದಲ್ಲಿ ಚೆಟ್ರಿ ಮತ್ತೊಂದು ಗೋಲು ಬಾರಿಸಿ ಹ್ಯಾಟ್ರಿಕ್ ಗೋಲು ಸಾಧನೆ ಮಾಡಿದರು.
ಇದರ ನಡುವೆ ನಿಖಿಲ್ ಪೂಜಾರಿ ಚೆಂಡು ಬಡಿದು ಗಾಯಗೊಂಡರು. ಇದರಿಂದ ಪಂದ್ಯವನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಲಾಯಿತು. ಬದಲಿ ಆಟಗಾರನಾಗಿ ಉದಾಂತ ಸಿಂಗ್ ಮೈದಾನಕ್ಕೆ ಇಳಿದರು. ಆಗ 81ನೇ ನಿಮಿಷದಲ್ಲಿ ಭಾರತಕ್ಕೆ ಮತ್ತೊಂದು ಗೋಲು ಉದಾಂತ ಸಿಂಗ್ ಯಶಸ್ವಿಯಾದರು. ಕೊನೆಯವರೆಗೆ ಪಾಕಿಸ್ತಾನಕ್ಕೆ ಗೋಲುಗಳ ಖಾತೆ ತೆರೆಯಲು ಭಾರತೀಯ ಆಟಗಾರರು ಅವಕಾಶವೇ ನೀಡಲಿಲ್ಲ. ಇದರಿಂದ 4-0 ಗೋಲು ಅಂತರದಿಂದ ಪಾಕ್ ಹೀನಾಯವಾಗಿ ಸೋಲು ಕಾಣಬೇಕಾಯಿತು.
ಮಳೆಯಲ್ಲಿ ಗೆಲುವಿನ ಖುಷಿ:ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದೂ ಕೂಡ ಮಳೆ ಸುರಿಯಿತು. ಮತ್ತೊಂದೆಡೆ, ಭಾರತ ಹಾಗೂ ಪಾಕಿಸ್ತಾನದ ಫುಟ್ಬಾಲ್ ಪಂದ್ಯವು ರೋಚಕತೆ ಪಡೆದಿತ್ತು. ಹೀಗಾಗಿ ಸುರಿಯುತ್ತಿದ್ದ ಮಳೆಯಲ್ಲೇ ಪಂದ್ಯ ನಡೆಯಿತು. ಜೊತೆಗೆ ಸಾಂಪ್ರದಾಯಿಕ ಎದುರಾಳಿಯನ್ನು ಬಗ್ಗು ಬಡಿದ ಖುಷಿಯಲ್ಲಿ ಮಳೆಯಲ್ಲೇ ಆಟಗಾರರು ಸಂಭ್ರಮಾಚರಣೆ ನಡೆಸಿದರು.
ಇದನ್ನೂ ಓದಿ:ಆ್ಯಶಸ್ ಮೊದಲ ಪಂದ್ಯದ ಗೆಲುವಿನ ರೂವಾರಿ ಪ್ಯಾಟ್ ಕಮಿನ್ಸ್ ಟೆಸ್ಟ್ ಕ್ರಿಕೆಟ್‌ನ 'ಹೊಸ ಮಿ.ಕೂಲ್': ವೀರೇಂದ್ರ ಸೆಹ್ವಾಗ್