ಟೋಕಿಯೊ: ಒಲಿಂಪಿಕ್ಸ್ ಜ್ಯೋತಿ ಯಾತ್ರೆಗೂ ಮುನ್ನ ಕೋವಿಡ್-19 ಸೋಂಕು ವಿರುದ್ಧ ಪ್ರತಿರೋಧಕವಾಗಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವುದು ಬಹಳ ಮುಖ್ಯ ಎಂದು ಟೋಕಿಯೊ 2020ರ ಅಧ್ಯಕ್ಷರು ಹೇಳಿದ್ದಾರೆ. ಇಂದಿನಿಂದ ಒಂದು ತಿಂಗಳು ಮಾರ್ಚ್ 25ರಂದು ರಿಲೇ ಪ್ರಾರಂಭವಾಗಲಿದ್ದು, ಜಪಾನ್‌ನಾದ್ಯಂತ 47 ಪ್ರಾಂತ್ಯಗಳನ್ನು ಸಂಪರ್ಕಿಸಲಿದೆ.
ಆರೋಗ್ಯ ಮೇಲ್ವಿಚಾರಣೆಯಂತಹ ಕೋವಿಡ್-19 ವಿರುದ್ಧದ ಕ್ರಮಗಳಿಗೆ ನಾವು ಮಾರ್ಗಸೂಚಿಗಳನ್ನು ರಚಿಸುತ್ತೇವೆ, ಸಿಬ್ಬಂದಿಯ ಆರೋಗ್ಯವನ್ನು ಸಂಪೂರ್ಣವಾಗಿ ನಿರ್ವಹಿಸುತ್ತೇವೆ. ರಸ್ತೆಯ ಉದ್ದಕ್ಕೂ ಪ್ರೇಕ್ಷಕರ ದಟ್ಟಣೆ ತಪ್ಪಿಸುತ್ತೇವೆ ಎಂದು ಸೀಕೊ ಹಶಿಮೊಟೊ ಹೇಳಿದರು.