ಕರ್ನಾಟಕ

karnataka

ETV Bharat / sports

ವಿಂಬಲ್ಡನ್ ಸಿಂಗಲ್ಸ್‌​ ಪ್ರಶಸ್ತಿ ವಿಜೇತ ಕಾರ್ಲೋಸ್​ ಅಲ್ಕರಾಜ್‌ಗೆ ಸಚಿನ್​ ತೆಂಡೂಲ್ಕರ್ ಸೇರಿ ಕ್ರೀಡಾಲೋಕದ ಅಭಿನಂದನೆ

ವಿಂಬಲ್ಡನ್​ ಸಿಂಗಲ್ಸ್ ಪ್ರಶಸ್ತಿ ವಿಜೇತ ಕಾರ್ಲೋಸ್​ ಅಲ್ಕರಾಜ್​ ಅವರನ್ನು ಕ್ರೀಡಾಲೋಕ ಅಭಿನಂದಿಸುತ್ತಿದೆ.

ಕಾರ್ಲೋಸ್​ಗೆ ಅಭಿನಂದಿಸಿದ ಸಚಿನ್​ ತೆಂಡೂಲ್ಕರ್​
ಕಾರ್ಲೋಸ್​ಗೆ ಅಭಿನಂದಿಸಿದ ಸಚಿನ್​ ತೆಂಡೂಲ್ಕರ್​

By

Published : Jul 17, 2023, 10:37 AM IST

ನವದೆಹಲಿ:ವಿಂಬಲ್ಡನ್​ 2023ರ ಪುರುಷರ ಸಿಂಗಲ್ಸ್​ ವಿಭಾಗದಲ್ಲಿ ಸ್ಪೇನ್​ ಆಟಗಾರ ಕಾರ್ಲೋಸ್​ ಅಲ್ಕರಾಜ್​ ಅವರು ಸರ್ಬಿಯಾದ 7 ಬಾರಿಯ ವಿಂಬಲ್ಡನ್​ ವಿಜೇತ ನೊವಾಕ್​ ಜೋಕೊವಿಚ್​ ಅವರನ್ನು ಮಣಿಸುವ ಮೂಲಕ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ. ಚೊಚ್ಚಲ ವಿಂಬಲ್ಡನ್​ ವಿಜೇತ ಅಲ್ಕರಾಜ್​ಗೆ ಕ್ರೀಡಾಲೋಕದ ಗಣ್ಯರು ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಕ್ರಿಕೆಟ್​ ದಂತಕಥೆ ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್​ ತಮ್ಮ ಟ್ವೀಟ್ ಮೂಲಕ ಅಲ್ಕರಾಜ್​ಗೆ ಅಭಿನಂದನೆ ತಿಳಿಸಿದ್ದು, "ಅದ್ಭುತವಾದ ಫೈನಲ್​ ಪಂದ್ಯ. ಇಬ್ಬರು ಕ್ರೀಡಾಪಟುಗಳ ನಡುವಿನ ಅತ್ಯುತ್ತಮ ಟೆನಿಸ್ ಪಂದ್ಯ. ಮುಂದಿನ ಟೆನಿಸ್‌ ಸೂಪರ್‌ಸ್ಟಾರ್‌ನ​ ಆಟಕ್ಕೆ ನಾವು ಸಾಕ್ಷಿಯಾಗಿದ್ದೇವೆ. ರೋಜರ್ ಫೆಡರರ್‌ ಅವರಂತೆ ಭವಿಷ್ಯದ 10-12 ವರ್ಷಗಳ ಕಾಲ ನಾನು ಕಾರ್ಲೋಸ್ ಅವರ ವೃತ್ತಿಜೀವನವನ್ನು ಅನುಸರಿಸುತ್ತೇನೆ. ಅಭಿನಂದನೆಗಳು" ಎಂದು ಬರೆದಿದ್ದಾರೆ.

ಪ್ರಸಿದ್ಧ ಕ್ರಿಕೆಟ್‌ ಕಾಮೆಂಟೇಟರ್ ಹರ್ಷದ ಭೋಗ್ಲೆ ಟ್ವೀಟ್​ ಮಾಡಿ, "ಅಲ್ಕರಾಜ್​ ಅಸಾಧಾರಣ ಯುವ ಆಟಗಾರ. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ​ ಡ್ರಾಪ್ ಶಾಟ್ಸ್​ ಅದ್ಭುತ. ಅವರು ಸ್ಪ್ಯಾನಿಷ್ ಭಾಷೆಯಲ್ಲಿ ಮಾತನಾಡುವುದನ್ನು ನಾನು ಬಯಸುತ್ತೇನೆ. ಆ ಭಾಷೆಯಲ್ಲಿ ಅವರು ತುಂಬಾ ಆರಾಮದಾಯಕವಾಗಿ ಮಾತನಾಡಬಲ್ಲರು" ಎಂದಿದ್ದಾರೆ. ​

ಭಾರತ ಕ್ರಿಕೆಟಿಗ ದಿನೇಶ್​ ಕಾರ್ತಿಕ್​ ಟ್ವೀಟ್​ ಮಾಡಿದ್ದು, "ಹೊಸ ಯುಗ ಪ್ರಾರಂಭವಾಗಿದೆ. ವೆಲ್ಡನ್​ ಕಾರ್ಲೋಸ್. ಜೋಕೊವಿಕ್​ ಅವರ ಒಳ್ಳೆಯ ಪ್ರಯತ್ನ" ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಸ್ಪೋಟಕ ಬ್ಯಾಟರ್​ ಎಬಿ ಡಿವಿಲಿಯರ್ಸ್​ ಟ್ವೀಟ್​ ಮಾಡಿ, "ಫೈನಲ್​ ಪಂದ್ಯಕ್ಕೆ ಸಾಕ್ಷಿಯಾಗಿರುವುದು ನನ್ನ ಅದೃಷ್ಟ. ವೆಲ್ಡನ್​ ಅಲ್ಕರಾಜ್. ಮುಂದಿನ ದಿನಗಳ ಪಂದ್ಯಕ್ಕಾಗಿ ಅಭ್ಯಾಸ ಮುಂದುವರೆಸಿ" ಎಂದು ತಿಳಿಸಿದ್ದಾರೆ.

ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ​ ಕಾರ್ಲೋಸ್ ಅಲ್ಕರಾಜ್ ಅವರು 1-6, 7-6 (6), 6-1, 3-6, 6-4 ಸೆಟ್‌​ಗಳಿಂದ ನೊವಾಕ್ ಜೊಕೊವಿಕ್ ಅವರನ್ನು ಮಣಿಸಿದರು. 4 ಗಂಟೆ 42 ನಿಮಿಷಗಳ ಕಾಲ ನಡೆದ ಪಂದ್ಯದ ಮೊದಲ ಸೆಟ್​ನಲ್ಲಿ ಜೊಕೊವಿಚ್ 5-1 ಅಂತರದಿಂದ ಮುನ್ನಡೆ ಸಾಧಿಸಿದರು. ಎರಡನೇ ಸೆಟ್‌ನಲ್ಲಿ ಅದ್ಭುತ ಕಮ್​ಬ್ಯಾಕ್​ ಮಾಡಿದ ಸ್ಪೇನಿಗ​ ಅಲ್ಕರಾಜ್​ ಟೈಬ್ರೇಕರ್‌ಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾದರು. ಟೈಬ್ರೇಕರ್‌ನಲ್ಲಿ ನೊವಾಕ್ ಮಾಡಿದ ತಪ್ಪುಗಳ ಲಾಭ ಪಡೆದ ಅಲ್ಕರಾಜ್ ಪಂದ್ಯದಲ್ಲಿ 1-1 ರಿಂದ ಸಮಬಲ ಸಾಧಿಸಿದರು. ಇದಾದ ಬಳಿಕ ಮೂರನೇ ಸೆಟ್‌ನಲ್ಲಿ 6-1 ಅಂತರದಲ್ಲಿ ಜಯಿಸಿ, ಪಂದ್ಯದಲ್ಲಿ 2-2 ರಲ್ಲಿ ಸಮಬಲ ಸಾಧಿಸಿದರು. ಕೊನೆಯ ಸೆಟ್​ನಲ್ಲಿ 6-4 ರಿಂದ ಗೆಲುವು ಸಾಧಿಸಿದರು.

ಇದನ್ನೂ ಓದಿ:ಚೊಚ್ಚಲ ವಿಂಬಲ್ಡನ್ ಸಿಂಗಲ್ಸ್‌ ಪ್ರಶಸ್ತಿ ಗೆದ್ದ ಅಲ್ಕರಾಜ್; 24ನೇ ಗ್ರ್ಯಾನ್‌ಸ್ಲಾಮ್ ಗೆಲ್ಲುವ ಜೊಕೊವಿಚ್ ಕನಸಿಗೆ ತಡೆಯೊಡ್ಡಿದ 20ರ ಯುವಕ!

ABOUT THE AUTHOR

...view details