ಹೈದರಾಬಾದ್: ಉದ್ದೀಪನ ಮದ್ದು ಸೇವನೆ ನಿಯಮಗಳನ್ನು ಮೀರಿದ್ದಕ್ಕಾಗಿ ರಷ್ಯಾವನ್ನು ಒಲಿಂಪಿಕ್ ಸೇರಿದಂತೆ ಎಲ್ಲಾ ಕ್ರೀಡೆಗಳಿಂದ ನಾಲ್ಕು ವರ್ಷಗಳ ಕಾಲ ವಾಡಾ (ವಿಶ್ವ ಉದ್ದೀಪನ ಮದ್ದು ಸೇವನೆ ತಡೆ ಏಜನ್ಸಿ) ನಿಷೇಧವೇರಿದೆ.
ಸೋಮವಾರ ಸ್ವಿಟ್ಜರ್ಲೆಂಡ್ನ ಲಾಸೆನ್ನೆದಲ್ಲಿ ನಡೆದ ಸಭೆಯಲ್ಲಿ ವಾಡಾ ರಷ್ಯಾವನ್ನು ವಿಶ್ವ ಸ್ಪೋರ್ಟ್ಸ್ನಿಂದ ನಿಷೇಧಿಸಿರುವುದಾಗಿ ಹಾಗೂ ಈ ಅವಧಿಯಲ್ಲಿ ಯಾವುದೇ ಕ್ರೀಡಾಕೂಟವನ್ನು ಆಯೋಜನೆ ಮಾಡುವುದನ್ನು ಕೂಡ ನಿಷೇಧಿಸಲಾಗಿದೆ ಎಂದು ವಾಡಾ ತಿಳಿಸಿದೆ.
ಒಲಿಂಪಿಕ್ ಸೇರಿದಂತೆ 4 ವರ್ಷಗಳ ಕಾಲ ಎಲ್ಲಾ ಕ್ರೀಡೆಗಳಿಂದ ರಷ್ಯಾಗೆ ನಿಷೇಧ - World Anti-Doping Agency
ಸೋಮವಾರ ಸ್ವಿಟ್ಜರ್ಲೆಂಡ್ನ ಲಾಸೆನ್ನೆದಲ್ಲಿ ನಡೆದ ಸಭೆಯಲ್ಲಿ ವಾಡಾ ರಷ್ಯಾವನ್ನು ವಿಶ್ವ ಸ್ಪೋರ್ಟ್ಸ್ನಿಂದ ನಿಷೇಧಿಸಿರುವುದಾಗಿ ಹಾಗೂ ಈ ಅವಧಿಯಲ್ಲಿ ಯಾವುದೇ ಕ್ರೀಡಾಕೂಟವನ್ನು ಆಯೋಜನೆ ಮಾಡುವುದನ್ನು ಕೂಡ ನಿಷೇಧಿಸಲಾಗಿದೆ ಎಂದು ವಾಡಾ ತಿಳಿಸಿದೆ.
Russia banned
ಉದ್ದೀಪನ ಮದ್ದು ಸೇವನೆಗೆ ಸಂಬಂಧಿಸಿದ ಪ್ರಯೋಗಾಲಯದ ವರದಿಗಳನ್ನು ತಿರುಚಿರುವ ಜೊತೆಗೆ ಸುಳ್ಳು ದಾಖಲಾತಿಗಳನ್ನು ಸಲ್ಲಿಸಿರುವ ಕಾರಣಕ್ಕೆ ವಿಶ್ವ ಉದ್ದೀಪನ ನಿಗ್ರಹ ಘಟಕ ಈ ತೀರ್ಮಾನ ಕೈಗೊಂಡಿದೆ. ಅಲ್ಲದೆ ರಷ್ಯಾ ತಂಡ ಸಾಮೂಹಿಕ2015ರಲ್ಲಿ ವಾಡಾ ನಿಯೋಜಿಸಿದ ಸಮಿತಿಯ ವರದಿಯ ಆಧಾರದಲ್ಲಿ ರಷ್ಯಾದ ಕ್ರೀಡಾಳುಗಳು ಸಾಮೂಹಿಕ ಮಾದಕದ್ರವ್ಯ ಸೇವಿಸಿರುವುದು ದಾಖಲೆ ಸಹಿತ ಬಹಿರಂಗವಾಗಿತ್ತು.
ವಾಡಾ ತೆಗೆದುಕೊಂಡಿರವ ನಿರ್ಧಾರದಿಂದ 2020ರ ಟೋಕಿಯೋ ಒಲಿಂಪಿಕ್ಸ್ ಹಾಗೂ 2022ರಲ್ಲಿ ಕತಾರ್ನಲ್ಲಿ ನಡೆಯಲಿರುವ ಫುಟ್ಬಾಲ್ ವರ್ಲ್ಡ್ ಕಪ್ನಲ್ಲಿ ರಷ್ಯಾದ ಆಟಗಾರರು ಭಾಗವಹಿಸುವಂತಿಲ್ಲ.
Last Updated : Dec 9, 2019, 6:46 PM IST