ಕರ್ನಾಟಕ

karnataka

ETV Bharat / sports

ಏಷ್ಯನ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌: ಚಿನ್ನದ ಪದಕ ಗೆದ್ದ ರೊನಾಲ್ಡೊ ಸಿಂಗ್! - ಚಿನ್ನದ ಪದಕ ಗೆದ್ದ ರೊನಾಲ್ಡೊ ಸಿಂಗ್

ಏಷ್ಯನ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದು, ಪುರುಷರ ಜೂನಿಯರ್ ಕಿರೀನ್​ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಚಿನ್ನದ ಪದಕ ಗೆದ್ದ ರೊನಾಲ್ಡೊ ಸಿಂಗ್

By

Published : Oct 18, 2019, 11:08 PM IST

ನವದೆಹಲಿ: ದಕ್ಷಿಣ ಕೊರಿಯಾದ ಇಂಚಿಯಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಜೂನಿಯರ್ ಕಿರೀನ್​ ಸ್ಪರ್ಧೆಯಲ್ಲಿ ಭಾರತೀಯ ಸೈಕ್ಲಿಸ್ಟ್ ರೊನಾಲ್ಡೊ ಸಿಂಗ್ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಇದೇ ಪಂದ್ಯಾವಳಿಯಲ್ಲಿ ಜೇಮ್ಸ್ ಸಿಂಗ್ ಅವರು ಕಂಚಿನ ಪದಕ ಗೆದ್ದಿದ್ದಾರೆ. ಪುರುಷರ ಮತ್ತು ಮಹಿಳಾ ಜೂನಿಯರ್ ಸ್ಪ್ರಿಂಟ್ ತಂಡವು ಎರಡು ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಭಾರತೀಯ ಕ್ರೀಡಾ ಪ್ರಾಧಿಕಾರ 'ಏಷ್ಯನ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಜೂನಿಯರ್ ಕಿರೀನ್​ ಸ್ಪರ್ಧೆಯಲ್ಲಿ ರೊನಾಲ್ಡೊ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ. ಜೇಮ್ಸ್ ಸಿಂಗ್ ಕೂಡ ಕಂಚು ಪಡೆದಿದ್ದಾರೆ. ಪುರುಷರ ಮತ್ತು ಮಹಿಳೆಯರ ಜೂನಿಯರ್ ಸ್ಪ್ರಿಂಟ್ ತಂಡದಲ್ಲಿ ಭಾರತ 2 ಕಂಚಿನ ಪದಕಗಳನ್ನು ಗಳಿಸಿದೆ'. ಈ ಎಲ್ಲಾ ಆಟಗಾರರಿಗೆ ಅಭಿನಂದನೆಗಳು ಎಂದು ಶುಭಕೋರಿದೆ.

ABOUT THE AUTHOR

...view details