ನ್ಯೂಯಾರ್ಕ್ (ಯುಎಸ್): ಭಾರತ ಮತ್ತು ಆಸ್ಟ್ರೇಲಿಯಾದ ಜೋಡಿ ರೋಹನ್ ಬೋಪಣ್ಣ - ಮ್ಯಾಥ್ಯೂ ಎಬ್ಡೆನ್ ಅಮೆರಿಕನ್ ಓಪನ್ ಫೈನಲ್ನಲ್ಲಿ ವಿರೋಚಿತ ಸೋಲು ಕಂಡಿದ್ದಾರೆ. ವಿಶ್ವದ ಮೂರನೇ ರ್ಯಾಂಕಿಂಗ್ನ ಅಮೆರಿಕದ ರಾಜೀವ್ ರಾಮ್ ಮತ್ತು ಬ್ರಿಟನ್ನ ಜೋ ಸಾಲಿಸ್ ವಿರುದ್ಧ ಫೈನಲ್ನಲ್ಲಿ ಸೆಣಸಿದ ಬೋಪಣ್ಣ - ಎಬ್ಡೆನ್ 2-6, 6-3, 6-4 ಸೆಟ್‌ನಿಂದ ಸೋಲನುಭವಿಸಿದರು.
ರಾಜೀವ್ ರಾಮ್ ಮತ್ತು ಜೋ ಸಾಲಿಸ್‌ಬರಿ ಆರ್ಥರ್ ಜೋಡಿ ಮೂರನೇ ಬಾರಿಯ ಯುಎಸ್ ಓಪನ್ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಯಶಸ್ವಿಯಾಗಿ ಮುಡಿಗೇರಿಸಿಕೊಂಡಿದೆ. ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಸತತ ಮೂರು ಬಾರಿ ಗೆದ್ದ ಜೋಡಿ ಎಂಬ ಖ್ಯಾತಿಗೆ ರಾಮ್, ಆರ್ಥರ್ ಒಳಗಾಗಿದ್ದಾರೆ.
ಪುರುಷರ ಡಬಲ್ಸ್ ಫೈನಲ್ಸ್ ಎರಡು ಗಂಟೆ ಒಂದು ನಿಮಿಷದ ಸುದೀರ್ಘ ಪಂದ್ಯ ಏರ್ಪಟ್ಟಿತು. ಬೋಪಣ್ಣ ಪಂದ್ಯದಲ್ಲಿ ಖಾತೆಯನ್ನು ತೆರೆದರು. ಆರಂಭಿಕ ಸೆಟ್‌ನಲ್ಲಿ ಬೋಪಣ್ಣ - ಎಬ್ಡೆನ್ ಜೋಡಿ ತಮ್ಮ ಮುನ್ನಡೆಯನ್ನು ಕಾಯ್ದುಕೊಂಡರು. 40 ನಿಮಿಷ ನಡೆದ ಈ ಸೆಟ್‌ನಲ್ಲಿ ಕನ್ನಡಿಗನನ್ನು ಒಳಗೊಂಡ ಜೋಡಿ 6-2 ರಿಂದ ಮೊದಲ ಸೆಟ್ ವಶಪಡಿಸಿಕೊಂಡಿತು.
ಎರಡನೇ ಸೆಟ್‌ನಲ್ಲಿ ರಾಮ್ ಮತ್ತು ಆರ್ಥರ್ ಉತ್ತಮ ಪುನರಾಗಮನ ಮಾಡಿದರು. ಆರಂಭದಿಂದಲೇ ತಮ್ಮ ನಿಯಂತ್ರಣದ ಜೊತೆಗೆ ಹೊಂದಾಣಿಕೆ ಸಾಧಿಸಿದ ಅವರು ಭರ್ಜರಿ ಪೈಪೋಟಿ ನೀಡಿದರು. ಇದರಿಂದ ಎರಡನೇ ಸೆಟ್ನ್ನು ರಾಮ್ - ಆರ್ಥರ್ 6-3 ರಿಂದ ವಶಪಡಿಸಿಕೊಂಡರು. ಇದರಿಂದ ಮೂರನೇ ಸೆಟ್ಗೆ ಹಣಾಹಣಿ ಮುಂದುವರೆಯಿತು.
ರಾಮ್ ಮತ್ತು ಸಾಲಿಸ್‌ಬರಿ ಮೂರನೇ ಸೆಟ್‌ನಲ್ಲಿ ಸ್ಕೋರ್ ಅನ್ನು ಸಮಗೊಳಿಸಲು ತಮ್ಮ ಸರ್ವ್ ಅನ್ನು ಆರಾಮವಾಗಿ ನಡೆಸಿದರು. ಅಂತಿಮ ಸೆಟ್‌ನಲ್ಲಿ ಎರಡೂ ಕಡೆಯವರು ಅತ್ಯುತ್ತಮ ಪ್ರದರ್ಶನ ನೀಡುವುದರೊಂದಿಗೆ ನೆಕ್ ಟು ನೆಕ್ ಫೈಟ್ ಉಂಟಾಗಿತ್ತು. ಬೋಪಣ್ಣ-ಎಬ್ಡೆನ್ ಅವರು ರಾಮ್-ಸಾಲಿಸ್ಬರಿ ವಿರುದ್ಧ ನಿರ್ಣಾಯಕ ಸೆಟ್‌ನಲ್ಲಿ 4-6 ಸೋಲನುಭವಿಸಿದರು. ಇದರಿಂದ ಕೊನೆಯ ಎರಡು ಸೆಟ್ಗಳಲ್ಲಿ ಮುನ್ನಡೆ ಸಾಧಿಸಿದ ಅಮೆರಿಕದ ರಾಜೀವ್ ರಾಮ್ ಮತ್ತು ಬ್ರಿಟನ್ನ ಜೋ ಸಾಲಿಸ್ ಮೂರನೇ ಬಾರಿಗೆ ಪ್ರಶಸ್ತಿ ಗೆದ್ದರು.
ವಿಶ್ವ ದಾಖಲೆ ಬರೆದ ರೋಹನ್ ಬೋಪಣ್ಣ: ಭಾರತದ ರೋಹನ್ ಬೋಪಣ್ಣ 2023ರ ಯುಎಸ್ ಓಪನ್‌ನ ಪುರುಷರ ಡಬಲ್ಸ್ ಫೈನಲ್ಗೆ ಪ್ರವೇಶ ಪಡೆಯುವ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ. ಗ್ರ್ಯಾಂಡ್ ಸ್ಲಾಮ್‌ನ ಫೈನಲ್ ತಲುಪಿದ ಅತ್ಯಂತ ಹಿರಿಯ ವ್ಯಕ್ತಿ ಬೋಪಣ್ಣ. ಕರ್ನಾಟಕ ಮೂಲದವಾರದ ರೋಹನ್ ಬೋಪಣ್ಣ ತಮ್ಮ 43 ವಯಸ್ಸಿನಲ್ಲೂ ಪಂದ್ಯಗಳನ್ನು ಆಡುತ್ತಿದ್ದಾರೆ.
ಎರಡನೇ ಬಾರಿಗೆ ಕೈ ತಪ್ಪಿದ ಅಮೆರಿಕನ್ ಓಪನ್: 2010ರಲ್ಲಿ ರೋಹನ್ ಬೋಪಣ್ಣ ಯುಎಸ್ ಫೈನಲ್ಗೆ ಪ್ರವೇಶ ಪಡೆದುಕೊಂಡಿದ್ದರು. ತಮ್ಮ ಪಾಕಿಸ್ತಾನದ ಜೋಡಿ ಐಸಾಮ್-ಉಲ್-ಹಕ್ ಖುರೇಷಿಯೊಂದಿಗೆ ಫೈನಲ್ನಲ್ಲಿ ಸೆಣಸಿದ್ದರು. ಈ ಬಾರಿಯೂ ಫೈನಲ್ನಲ್ಲಿ ಪ್ರಶಸ್ತಿ ಕೈತಪ್ಪಿದೆ. ಬೋಪಣ್ಣ ತನ್ನ ವೃತ್ತಿಜೀವನದಲ್ಲಿ ಏಕೈಕ ಮಿಶ್ರ ಡಬಲ್ಸ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ. 2017ರ ಫ್ರೆಂಚ್ ಓಪನ್‌ನಲ್ಲಿ ಕೆನಡಾದ ಗೇಬ್ರಿಯೆಲಾ ದಬ್ರೊವ್ಸ್ಕಿ ಅವರ ಜೊತೆ ಪ್ರಶಸ್ತಿಗೆ ಮುತ್ತಿಕ್ಕಿದ್ದರು. ಈ ವರ್ಷದ ಆಸ್ಟ್ರೇಲಿಯನ್ ಓಪನ್‌ನ ಮಿಶ್ರ ಡಬಲ್ಸ್ ಫೈನಲ್ನಲ್ಲಿ ಸಾನಿಯಾ ಮಿರ್ಜಾ ಅವರೊಂದಿಗೆ ಆಡಿ ರನ್ನರ್ ಅಪ್ ಸ್ಥಾನ ಪಡೆದರು. ಈ ಟೂರ್ನಿಯ ನಂತರ ಸಾನಿಯಾ ಮಿರ್ಜಾ ನಿವೃತ್ತಿ ಪ್ರಕಟಿಸಿದರು.
ಇದನ್ನೂ ಓದಿ:US Open: ಹಾಲಿ ಚಾಂಪಿಯನ್ ಅಲ್ಕಾರಾಜ್ ಮಣಿಸಿದ ಮೆಡ್ವೆಡೆವ್: ಜೊಕೊವಿಕ್ ಜೊತೆಗೆ ಫೈನಲ್ನಲ್ಲಿ ಹಣಾಹಣಿ