ಹ್ಯಾಂಗ್‌ಝೌ (ಚೀನಾ): ಡೇವಿಸ್ ಕಪ್ ವರ್ಲ್ಡ್ ಗ್ರೂಪ್ II ಅನ್ನು ಗೆದ್ದಿದ್ದ ಭಾರತದ ರೋಹನ್ ಬೋಪಣ್ಣ ಮತ್ತು ಯೂಕಿ ಭಾಂಬ್ರಿ ಜೋಡಿ ಏಷ್ಯನ್ ಗೇಮ್ಸ್‌ನಲ್ಲಿ ಸ್ವರ್ಣ ಗೆಲ್ಲುವ ಫೇವ್ರೇಟ್ ಆಗಿದ್ದರು. ಆದರೆ ಇಂದು ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಕೆಳ ಶ್ರೇಯಾಂಕದ ಉಜ್ಬೇಕಿಸ್ತಾನ್‌ನ ಸೆರ್ಗೆ ಫೋಮಿನ್ ಮತ್ತು ಖುಮೊಯುನ್ ಸುಲ್ತಾನೊವ್ ಅವರಿಂದ ಸೋಲು ಕಂಡು ಮಿನಿ ಒಲಂಪಿಕ್ಸ್ನಿಂದ ಹೊರಬರಬೇಕಾಯಿತು.
ಭಾರತದ ಈ ಜೋಡಿ ಗೆಲುವಿನ ಫೇವ್ರೆಟ್ ಆಗಲು ಪ್ರಮುಖ ಕಾರಣ ಅವರ ಶ್ರೇಯಾಂಕ. ಬೋಪಣ್ಣ ಡಬಲ್ಸ್‌ನಲ್ಲಿ ಟಾಪ್-10 ಆಟಗಾರನಾಗಿದ್ದರೆ, ಭಾಂಬ್ರಿ ಕೂಡ ಅಗ್ರ-100ರೊಳಗೆ ಸ್ಥಾನ ಪಡೆದಿದ್ದಾರೆ. ಉಜ್ಬೇಕಿಸ್ತಾನ್‌ನ ಜೋಡಿ ಶ್ರೇಯಾಂಕದಲ್ಲಿ 300ರ ಶ್ರೇಯಾಂಕಿದಿಂದಲೂ ಕೆಳ ಸ್ಥಾನದಲ್ಲಿದ್ದಾರೆ. ಆದರೆ ಬೋಪಣ್ಣ ಮತ್ತು ಭಾಂಬ್ರಿ ವಿರುದ್ಧ ಉಜ್ಬೇಕಿಸ್ತಾನ್‌ನ ಜೋಡಿ 2-6, 6-3 (10-6) ರಿಂದ ಗೆದ್ದರು. ಮೊದಲ ಸುತ್ತಿನಲ್ಲಿ ಭಾರತದ ಜೋಡಿ ಮುನ್ನಡೆ ಸಾಧಿಸಿದರೆ, ಎರಡನೇ ಮತ್ತು ಟೈ ಬ್ರೇಕರ್‌ನಲ್ಲಿ ಉಜ್ಬೇಕಿಸ್ತಾನ್‌ನದ ಆಟಗಾರರ ಪ್ರಾಬಲ್ಯ ಮೆರೆದರು.
ಸುಲ್ತಾನೋವ್ ಅವರು ಮೊದಲಿನಿಂದಲೂ ಉತ್ತಮವಾದ ಸರ್ವ್‌ಗಳನ್ನು ಮಾಡಿಕೊಂಡು ಬಂದರು. ಮೂರು ಸೆಟ್ನಲ್ಲಿ ಅವರೇ ಸರ್ವ್ ಅನ್ನು ಮಾಡಿದರು. ಯಾವುದೇ ಸರ್ವ್ ಪಾಯಿಂಟ್ ಬಿಟ್ಟುಕೊಡಲಿಲ್ಲ. ಸೂಪರ್-ಟೈ ಬ್ರೇಕರ್‌ನಲ್ಲಿ ಉಜ್ಬೆಕಿಸ್ 3-0 ಮುನ್ನಡೆ ಸಾಧಿಸಿತು ಮತ್ತು ಭಾರತ 1 ಅಂಕ ಪಡೆಯುವಷ್ಟರಲ್ಲಿ 5ಕ್ಕೆ ಏರಿಕೆ ಕಂಡಿದ್ದರು. ಟೈಬ್ರೇಕರ್ನಲ್ಲಿ ಸತತ ಅಂಕ ಕಲೆಹಾಕಿದ ಉಜ್ಬೇಕಿಸ್ತಾನ್‌ನ ಜೋಡಿ 10-6 ರಿಂದ ಸೆಟ್ ಗೆದ್ದು ಸ್ಪರ್ದೆಯ ಮುಂದಿನ ಹಂತಕ್ಕೆ ಪ್ರವೇಶಿಸಿದರು.