ಕರ್ನಾಟಕ

karnataka

ETV Bharat / sports

ಫಿಲಿಪ್ಪಿನ್ಸ್​ನ ಜೋಮರಿ ಟೋರೆಸ್​ ವಿರುದ್ಧ ಗೆಲುವು: ಫ್ರೋ ಎಂಎಂಎನಲ್ಲಿ ರೀತು ಫೋಗಾಟ್ ಅಜೇಯ ಓಟ

ಸಿಂಗಾಪುರದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಒನ್​ ಚಾಂಪಿಯನ್​ಶಿಪ್​ ಪಂದ್ಯದಲ್ಲಿ 26 ವರ್ಷದ ಭಾರತದ ಫೈಟರ್​, ಫಿಲಿಪ್ಪಿನ್ಸ್ ನ ಜೋಮರಿ ಟೋರೆಸ್​ ವಿರುದ್ಧ ಮೊದಲ ಸುತ್ತಿನಲ್ಲೇ ನಾಕೌಟ್ ಮೂಲಕ ಜಯ ಸಾಧಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ರೀತು ಫೋಗಾಟ್
ರೀತು ಫೋಗಾಟ್

By

Published : Dec 5, 2020, 6:49 PM IST

ಸಿಂಗಾಪುರ್​: ಕುಸ್ತಿಯಿಂದ ಮಾರ್ಷಲ್​ ಆರ್ಟ್ಸ್​ ಫೈಟರ್ ಆಗಿ ಬದಲಾಗಿರುವ ಭಾರತದ ಖ್ಯಾತ ಕುಸ್ತಿಪಟು ರಿತು ಫೋಗಾಟ್ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್(ಎಂಎಂಎ)​ನಲ್ಲಿ ಸತತ 4ನೇ ಟೈಟಲ್ ಜಯಿಸಿದ್ದಾರೆ.

ಸಿಂಗಾಪುರದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಒನ್​ ಚಾಂಪಿಯನ್​ಶಿಪ್​ನಲ್ಲಿ 26 ವರ್ಷದ ಭಾರತದ ಫೈಟರ್​, ಫಿಲಿಪ್ಪಿನ್ಸ್​​ನ ಜೋಮರಿ ಟೋರೆಸ್​ ವಿರುದ್ಧ ಮೊದಲ ಸುತ್ತಿನಲ್ಲೇ ನಾಕೌಟ್ ಮೂಲಕ ಜಯ ಸಾಧಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಈ ಕುರಿತು ಪಂದ್ಯದ ಬಳಿಕ ಮಾತನಾಡಿದ ರಿತು ಫೋಗಾಟ್​ ಅವರು,"ನಾನು ನಿರಂತರವಾಗಿ ನನ್ನ ಗಡಿಗಳನ್ನು ವೃತ್ತದಲ್ಲಿ ತಳ್ಳುತ್ತಿದ್ದೇನೆ. ಇದಕ್ಕೆ ಜೋಮರಿಯೊಂದಿಗಿನ ಪಂದ್ಯ ಸಾಕ್ಷಿಯಾಗಿದೆ. ಟೋರ್ಸ್ ವಿರುದ್ಧ ಪಂದ್ಯ ನಿಜಕ್ಕೂ ಸುಲಭವಾಗಿರಲಿಲ್ಲ ಎಂದಿರುವ ಅವರೂ ಮುಂದೆಯೂ ಇದಕ್ಕಿಂತಲೂ ಕಠಿಣ ಸವಾಲುಗಳು ನನ್ನ ಮುಂದಿದೆ. ಅದಕ್ಕೆ ನಾನು ಮಾನಸಿಕವಾಗಿ ಸಿದ್ಧಗೊಂಡಿದ್ದೇನೆ ಎಂದಿದ್ದಾರೆ.

ಜೊತೆಗೆ ಒನ್ ವುಮೆನ್ ಅಟಾಮ್​ವೆಯ್ಟ್ ಗ್ರ್ಯಾಂಡ್ ಪ್ರಿಕ್ಸ್ ಟೂರ್ನಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಳ್ಳುವುದು ನನ್ನ ಮುಂದಿನ ಗುರಿಯಾಗಿದೆ. ಇದಕ್ಕಾಗಿ ನಾನು ಕಠಿಣ ಶ್ರಮ ಪಡುತ್ತಿದ್ದೇನೆ. ನನ್ನ ದೇಶಕ್ಕೆ ಪ್ರಶಸ್ತಿ ತೆಗೆದುಕೊಂಡು ಹೋಗಲು ಬಯಸಿದ್ದೇನೆ ಎಂದು ಫೋಗಾಟ್ ಹೇಳಿದ್ದಾರೆ.

ABOUT THE AUTHOR

...view details