ನವದೆಹಲಿ:ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರು ಬುಧವಾರ ತಮ್ಮ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಅವರು ಚೇತರಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಹೌದು, ರಿಷಭ್ ಪಂತ್ ಶೀಘ್ರವೇ ಗುಣಮುಖರಾಗುವ ಭರವಸೆಯಲ್ಲಿದ್ದಾರೆ. ಕಾರು ಅಪಘಾತದಲ್ಲಿ ಗಾಯಗೊಂಡ ಅವರು ಸದ್ಯ ವೇಗವಾಗಿ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅವರು ಶೀಘ್ರದಲ್ಲೇ ಫಿಟ್ ಆಗುತ್ತಾರೆ ಹಾಗೂ ಆದಷ್ಟು ಬೇಗನೇ ಮೈದಾನದಲ್ಲಿ ಪ್ರ್ಯಾಕ್ಟೀಸ್ ಮಾಡಲಿದ್ದಾರೆ ಎಂದು ಜನರು ಕೂಡಾ ಭಾವಿಸುತ್ತಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಏನು ಬರೆದಿದ್ದಾರೆ ಪಂತ್?: ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ರಿಷಭ್ ಪಂತ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ''ಕ್ರೀಡೆ ಪಾತ್ರವನ್ನು ನಿರ್ಮಿಸುವುದಿಲ್ಲ, ಅವರು ಅದನ್ನು ಬಹಿರಂಗಪಡಿಸುತ್ತಾರೆ. ಅಂದರೆ, ಕ್ರೀಡೆಗಳು ವ್ಯಕ್ತಿತ್ವ ನಿರ್ಮಿಸುವುದಿಲ್ಲ. ಆದರೆ, ಅದನ್ನು ಬಹಿರಂಗಪಡಿಸುವ ಸಾಧನವಾಗಿದೆ'' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಮೊಯಿನ್ ಅಲಿ ಹಿಡಿದ ಕ್ಯಾಚ್ ನೋಡಿ ಬೆರಗಾದ ಧೋನಿ!
ಫಿಸಿಯೊ ಥೆರಪಿಗೆ ಒಳಗಾದ ರಿಷಭ್ ಪಂತ್:ರಿಷಭ್ ಪಂತ್ ಉತ್ತರಾಖಂಡದ ತಮ್ಮ ಮನೆಗೆ ಹೋಗುತ್ತಿದ್ದಾಗ ಭೀಕರ ಅಪಘಾತ ಸಂಭವಿಸಿತ್ತು. ಆಗ ಸ್ಥಳದಲ್ಲಿದ್ದವರು, ರಿಷಭ್ ಪಂತ್ ಅವರನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆದೊಯ್ದು ಪ್ರಾಣ ಉಳಿಸಿದ್ದರು. ಈ ಅಪಘಾತದಲ್ಲಿ ರಿಷಭ್ ಪಂತ್ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಎರಡು ತಿಂಗಳ ಶಸ್ತ್ರಚಿಕಿತ್ಸೆಯ ನಂತರವೂ, ಪಂತ್ ಇನ್ನೂ ಮತ್ತೊಬ್ಬರ ಸಹಾಯದೊಂದಿಗೆ ಓಡಾಡುತ್ತಿದ್ದಾರೆ. ಪ್ರಸ್ತುತ ಅವರು ಫಿಸಿಯೊ ಥೆರಪಿಗೆ ಒಳಗಾಗುತ್ತಿದ್ದಾರೆ, ಇದು ಮುಂದಿನ ಕೆಲವು ತಿಂಗಳುಗಳಲ್ಲಿ ನಡೆಯಲು ಸಹಾಯ ಮಾಡುತ್ತದೆ.