ಹೈದರಾಬಾದ್:20 ಕಿ.ಮೀ ನಡಿಗೆ ಸ್ಪರ್ಧೆ ವಿಭಾಗದಲ್ಲಿ ಟೋಕಿಯೋ ಒಲಿಂಪಿಕ್ಸ್ಗೆ ಅಹರ್ತೆ ಪಡೆದುಕೊಂಡ ರಾಹುಲ್ ರೋಹಿಲ್ಲಾ ಅವರನ್ನು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅಭಿನಂದಿಸಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ರೋಹಿಲ್ಲಾ ಮತ್ತೊಂದು ಆಶಯವಾಗಿದ್ದಾರೆ. ಅವರು 20 ಕಿ.ಮೀ. ನಡಿಗೆಯಲ್ಲಿ 1:20:26 ಸಮಯದಲ್ಲಿ ತಲುಪಿ ಅಹರ್ತೆ ಗಿಟ್ಟಿಸಿಕೊಂಡಿದ್ದಾರೆ. ಆತನನ್ನು ಗೌರವಿಸುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಒಲಿಂಪಿಕ್ಸ್ ತಯಾರಿಕೆಯ ವೇಳೆ ಅವರಿಗೆ ನಮ್ಮ ಸಂಪೂರ್ಣ ಬೆಂಬಲವಿರಲಿದೆ ಎಂದು ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.