ಟೋಕಿಯೋ: ಕುಸ್ತಿಯಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿರುವ ರವಿ ಕುಮಾರ್ ದಹಿಯಾ ತಮ್ಮ ಸಾಧನೆ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಆದರೆ, ಇದು ತಮಗೆ ತೃಪ್ತಿ ಕೊಟ್ಟಿಲ್ಲ, ಖಂಡಿತಾ ಮುಂದಿನ ಬಾರಿ ದೇಶ ಗರ್ವ ಪಡುವಂತೆ ಚಿನ್ನ ಗೆಲ್ಲಲು ಪ್ರಯತ್ನಿಸುವೆ ಎಂದು ತಿಳಿಸಿದ್ದಾರೆ.
ಗುರುವಾರ 57ಕೆಜಿ ವಿಭಾಗದಲ್ಲಿ ರಿವಿ ಕುಮಾರ್ ದಹಿಯಾ ರಷ್ಯನ್ ಒಲಿಂಪಿಕ್ ಸಮಿತಿಯ ಜೌರ್ ಉಗೆವ್ ವಿರುದ್ಧ 4-7ರ ಅಂತರದಲ್ಲಿ ರೋಚಕ ಸೋಲು ಕಂಡರು. ಆದರೆ ಭಾರತಕ್ಕೆ ಒಲಿಂಪಿಕ್ಸ್ನಲ್ಲಿ 5ನೇ ಪದಕ ಖಚಿತ ಪಡಿಸಿದರು. ಇದಲ್ಲದೇ ಒಟ್ಟಾರೆ ಕುಸ್ತಿಯಲ್ಲಿ ಬೆಳ್ಳಿ ಗೆದ್ದ 2ನೇ ಕುಸ್ತಿಪಟು ಎನಿಸಿಕೊಂಡರು. ಈ ಹಿಂದೆ 2012ರಲ್ಲಿ ಸುಶೀಲ್ ಕುಮಾರ್ ಲಂಡನ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಸಾಧನೆ ಮಾಡಿದ್ದರು.