ನವದೆಹಲಿ: ಹಾಲಿ ಏಷ್ಯನ್ ಗೇಮ್ಸ್ ಚಿನ್ನದ ವಿಜೇತೆ ರಾಹಿ ಸರ್ನೋಬತ್ ಸೋಮವಾರ ಡಾ. ಕರ್ಣಿ ಸಿಂಗ್ ಶೂಟಿಂಗ್ ಶ್ರೇಣಿಯಲ್ಲಿ ನಡೆದ ನ್ಯಾಷನಲ್ ಸೆಲೆಕ್ಷನ್ ಟ್ರಯಲ್ಸ್ನ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಸರ್ನೋಬತ್ ಚಿನ್ನದ ಪದಕದ ಸುತ್ತಿನಲ್ಲಿ 26 ಅಂಕ ಪಡೆದರೆ, 22 ಅಂಕ ಪಡೆದ ಹರಿಯಾಣದ ವಿಭೂತಿ ಭಾಟಿಯಾ ಬೆಳ್ಳಿ ಮತ್ತು ಪಂಜಾಬ್ನ ರೂಬಿ ತೋಮರ್ ಕಂಚಿನ ಪದಕ ಪಡೆದರು.