ಪ್ಯಾರಿಸ್:ಫ್ರೆಂಚ್ ಓಪನ್ ಗ್ರ್ಯಾನ್ಸ್ಲಾಂ ಟೆನ್ನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು 14ನೇ ಬಾರಿಗೆ ಸ್ಪೇನ್ನ ರಾಫೆಲ್ ನಡಾಲ್ ಗೆದ್ದು ಬೀಗಿದ್ದಾರೆ. ಫೈನಲ್ನಲ್ಲಿ ನಾರ್ವೆಯ ಯುವ ಆಟಗಾರ ಕ್ಯಾಸ್ಪರ್ ರೂಡ್ ವಿರುದ್ಧ ಭರ್ಜರಿ ಜಯ ದಾಖಲಿಸಿ 22ನೇ ಗ್ರ್ಯಾಂಡ್ ಸ್ಲಾಮ್ ಕಿರೀಟ ಜಯಿಸಿದ್ದಾರೆ.
ರೊಲ್ಯಾಂಡ್ ಗ್ಯಾರೋಸ್ನಲ್ಲಿ ಭಾನುವಾರ ನಡೆದ ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ಕೆಂಪು ಅಂಗಳದ ರಾಜ(clay court king) ಎಂದೇ ಹೆಸರುವಾಸಿಯಾಗಿರುವ ನಡಾಲ್, ಕ್ಯಾಸ್ಪರ್ ರೂಡ್ರನ್ನು 6-3, 6-3 ಹಾಗೂ ನೇರ ಸೆಟ್ಗಳಲ್ಲಿ ಮಣಿಸಿದರು. ನಡಾಲ್ 14ನೇ ರೋಲ್ಯಾಂಡ್ ಗ್ಯಾರೋಸ್ ಪ್ರಶಸ್ತಿ ಹಾಗೂ ಒಟ್ಟಾರೆ 22 ಗ್ರ್ಯಾಂಡ್ ಸ್ಲಾಮ್ ಟ್ರೋಫಿ ಗೆದ್ದ ಏಕೈಕ ಆಟಗಾರನಾಗಿದ್ದಾರೆ.
36 ವರ್ಷದ ಚಾಂಪಿಯನ್ ಆಟಗಾರ 22ನೇ ಗ್ರ್ಯಾಂಡ್ ಸ್ಲಾಮ್ ಕಿರೀಟದ ಮೂಲಕ ತಮ್ಮ ಸಮಕಾಲೀನ ದಿಗ್ಗಜ ಎದುರಾಳಿಗಳಾದ ನೊವಾಕ್ ಜೊಕೊವಿಕ್ ಮತ್ತು ರೋಜರ್ ಫೆಡರರ್ಗಿಂತ ಮತ್ತೊಂದು ಹೆಜ್ಜೆ ಮುಂದೆ ಸಾಗಿದಂತಾಗಿದೆ. ಸರ್ಬಿಯಾ ಮತ್ತು ಸ್ವಿಟ್ಜರ್ಲೆಂಡ್ ತಾರೆಯರು ತಲಾ 20 ಪ್ರಶಸ್ತಿ ಗೆದ್ದು ಸಮಬಲ ಹೊಂದಿದ್ದಾರೆ. ಅಲ್ಲದೆ, ಒಂದೇ ಋತುವಿನಲ್ಲಿ ನಡಾಲ್ ಆಸ್ಟ್ರೇಲಿಯನ್ ಓಪನ್ ಮತ್ತು ಫ್ರೆಂಚ್ ಓಪನ್ ಟ್ರೋಫಿ ಗೆದ್ದಿರುವುದು ಇದೇ ಮೊದಲಾಗಿದೆ.