ಭೂಪಾಲ್: ಉತ್ತರಖಂಡ್ನ ಆಥ್ಲೀಟ್ ರೇಷ್ಮಾ ಪಟೇಲ್ 20ರ ವಯೋಮಿತಿಯೊಳಗಿನ 10,000 ಮೀಟರ್ ರೇಸ್ ವಾಕ್ನಲ್ಲಿ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ವಿಶೇಷವೆಂದರೆ ಇದೇ ಅವರ ವೃತ್ತಿ ಜೀವನ್ ಮೊದಲ ರೇಸ್ ಆಗಿದೆ.
ಮಂಗಳವಾರ ಭೂಪಾಲ್ನಲ್ಲಿ ನಡೆದ ರೇಸ್ ವಾಕ್ನಲ್ಲಿ ರೇಷ್ಮಾ ಚಿನ್ನದ ಪದಕ ಪಡೆದಿದ್ದಾರೆ. 16 ವರ್ಷದ ಪಟೇಲ್ ಜೂನಿಯರ್ ಅಂಡರ್ 20 ಆಥ್ಲೆಟೆಕ್ಸ್ ಚಾಂಪಿಯನ್ಶಿಪ್ನ 2ನೇ ದಿನ 10 ಸಾವಿರ್ ಮೀಟರ್ ದೂರವನ್ನು 48 ನಿಮಿಷ 25.90 ಸೆಕೆಂಡ್ಗಳಲ್ಲಿ ಕ್ರಮಿಸುವ ಮೂಲಕ ದಾಖಲೆ ಬರೆದಿದ್ದಾರೆ.