ಕರ್ನಾಟಕ

karnataka

ETV Bharat / sports

ಫಿಫಾ ವಿಶ್ವಕಪ್: ವೃತ್ತಿ ಜೀವನದ ಬಗ್ಗೆ ಮೆಸ್ಸಿ ಮಹತ್ವದ ಘೋಷಣೆ

ಐದನೇ ಫಿಫಾ ವಿಶ್ವಕಪ್​ ಆಡುತ್ತಿರುವ ಅರ್ಜೆಂಟೀನಾದ ಸ್ಟಾರ್ ಫುಟ್ಬಾಲ್ ಆಟಗಾರ, 35 ವರ್ಷ ವಯಸ್ಸಿನ ಲಿಯೋನೆಲ್ ಮೆಸ್ಸಿ ಡಿ.18ರಂದು ನಡೆಯುವ ಫೈನಲ್​ ಪಂದ್ಯವೇ ತಮ್ಮ ಅಂತಿಮ ವಿಶ್ವಕಪ್ ಟೂರ್ನಿ ಎಂದು ಪ್ರಕಟಿಸಿದ್ದಾರೆ.

Qatar final to be Messi's last FIFA World Cup game, confirms Argentine star
ಫಿಫಾ ವಿಶ್ವಕಪ್: ತಮ್ಮ ವೃತ್ತಿ ಜೀವನದ ಬಗ್ಗೆ ಮೆಸ್ಸಿ ಮಹತ್ವದ ಘೋಷಣೆ

By

Published : Dec 14, 2022, 8:24 PM IST

ಲುಸೈಲ್(ಕತಾರ್​):ಅರ್ಜೆಂಟೀನಾದ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ತಮ್ಮ ವೃತ್ತಿ ಜೀವನದ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ. ಕತಾರ್​ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್​ನ ಫೈನಲ್ ಪಂದ್ಯವೇ ತಮ್ಮ ಕೊನೆಯ ವಿಶ್ವಕಪ್ ಟೂರ್ನಿ ಎಂದು ಖಚಿತಪಡಿಸಿದ್ದಾರೆ.

ವಿಶ್ವಕಪ್​ ಟೂರ್ನಿಯಲ್ಲಿ ಅರ್ಜೆಂಟೀನಾ ಈಗಾಗಲೇ ಫೈನಲ್​ಗೆ ಲಗ್ಗೆ ಇಟ್ಟಿದೆ. ನಿನ್ನೆ ನಡೆದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಕ್ರೂವೇಷಿಯಾ ವಿರುದ್ಧದ 3-0 ಗೋಲಿಗಳಿಂದ ಗೆದ್ದು ಮೊದಲ ತಂಡವಾಗಿ ಫೈನಲ್​ ಪ್ರವೇಶಿಸಿದೆ. 35 ವರ್ಷ ವಯಸ್ಸಿನ ಮೆಸ್ಸಿ ಅವರಿಗೆ ಇದು ಐದನೇ ಫಿಫಾ ವಿಶ್ವಕಪ್​ ಆಗಿದ್ದು, ಇದೀಗ ಈ ಫೈನಲ್​ ಪಂದ್ಯವೇ ತಮ್ಮ ಕೊನೆಯ ವಿಶ್ವಕಪ್​​ ಎಂದು ಪ್ರಕಟಿಸಿದ್ದಾರೆ.

ಡಿಸೆಂಬರ್ 18ರಂದು ನನ್ನ ಕೊನೆಯ ಪಂದ್ಯವನ್ನು ಫೈನಲ್‌ನಲ್ಲಿ ಆಡುವ ಮೂಲಕ ನನ್ನ ವಿಶ್ವಕಪ್ ಪ್ರಯಾಣವನ್ನು ಪೂರ್ಣಗೊಳಿಸುತ್ತೇನೆ. ಇದನ್ನು ಸಾಧಿಸಲು ಸಾಧ್ಯವಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಮುಂದಿನ ವಿಶ್ವಕಪ್​ಗೆ ಹಲವು ವರ್ಷಗಳಿದ್ದು, ಮುಂದೆ ಮತ್ತೆ ಅದನ್ನು ಮಾಡಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ಈ ಫೈನಲ್​ ಮೂಲಕ ವಿಶ್ವಕಪ್​ ಜರ್ನಿ ಮುಗಿಸುವುದು ಅತ್ಯುತ್ತಮವಾಗಿದೆ ಎಂದು ಮೆಸ್ಸಿ ತಿಳಿಸಿದ್ದಾರೆ.

ಅರ್ಜೆಂಟೀನಾ ತಂಡ ಒಟ್ಟಾರೆ ಎರಡು ಬಾರಿ ವಿಶ್ವಕಪ್​ ಚಾಂಪಿಯನ್​ ಆಗಿದ್ದು, ಕೊನೆಯ ಬಾರಿಗೆ 1986ರಲ್ಲಿ ಟ್ರೋಫಿ ಗೆದ್ದುಕೊಂಡಿತ್ತು. ಜೊತೆಗೆ ಇದುವರೆಗೆ ಆರು ಬಾರಿ ಫೈನಲ್​ ಪ್ರವೇಶಿಸಿದೆ. ಎರಡನೇ ಸೆಮಿಫೈನಲ್​ ಪಂದ್ಯ ಫ್ರಾನ್ಸ್​ ಮತ್ತು ಮೊರಾಕ್ಕೊ ನಡುವೆ ಇಂದು ರಾತ್ರಿ ನಡೆಯಲಿದೆ. ಇಲ್ಲಿ ಗೆದ್ದ ತಂಡದ ವಿರುದ್ಧ ಅರ್ಜೆಂಟೀನಾ ಡಿ.18ರಂದು ನಡೆಯುವ ಫೈನಲ್​ನಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಹೋರಾಟ ನಡೆಸಲಿದೆ.

ಇದನ್ನೂ ಓದಿ:ಫಿಫಾ ವಿಶ್ವಕಪ್​: ಕ್ರೊವೇಷಿಯಾ ಸೋಲಿಸಿ ಫೈನಲ್​ ತಲುಪಿದ ಅರ್ಜೆಂಟೀನಾ, ಅಂತಿಮ ಕದನಕ್ಕೆ ರೆಡಿ

ABOUT THE AUTHOR

...view details