ನವದೆಹಲಿ:ಕಾಮನ್ವೆಲ್ತ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ತ್ರಿವರ್ಣ ಧ್ವಜ ಹಿಡಿದು ಭಾರತ ತಂಡ ಮುನ್ನಡೆಸುವ ಅವಕಾಶವನ್ನ ಪಿವಿ ಸಿಂಧು ಪಡೆದುಕೊಂಡಿದ್ದಾರೆ. ಈ ಜವಾಬ್ದಾರಿ ದೊಡ್ಡ ಗೌರವ ನೀಡಲಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಕ್ರೀಡಾಕೂಟದಲ್ಲಿ ತ್ರಿವರ್ಣ ಧ್ವಜ ಹಿಡಿದು ತಂಡ ಮುನ್ನಡೆಸುವ ಅವಕಾಶವನ್ನ ಒಲಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಪಡೆದುಕೊಂಡಿದ್ದರು.
ಆದರೆ, ಗಾಯದಿಂದಾಗಿ ಅವರು ಟೂರ್ನಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ, ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಈ ಅವಕಾಶ ಪಡೆದುಕೊಂಡಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಭಾರತದ 164 ಅಥ್ಲೀಟ್ಗಳು ಭಾಗಿಯಾಗಲಿದ್ದು, ಒಟ್ಟು 215 ಕ್ರೀಡಾಪಟುಗಳು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಪ್ರತಿನಿಧಿಸಲಿದ್ದಾರೆ.
ಇದನ್ನೂ ಓದಿರಿ:Commonwealth Games -2022; ಪದಕಗಳನ್ನು ಗೆದ್ದು ತರಬಲ್ಲ ಪ್ರಮುಖ ಅಥ್ಲೀಟ್‌ಗಳ ಪಟ್ಟಿ ಇಲ್ಲಿದೆ
ತಮಗೆ ನೀಡಿರುವ ಜವಾಬ್ದಾರಿ ಕುರಿತು ಮಾತನಾಡಿರುವ ಸಿಂಧು, ತ್ರಿವರ್ಣ ಧ್ವಜ ಹಿಡಿದು ತಂಡ ಮುನ್ನಡೆಸುವುದು ದೊಡ್ಡ ಜವಾಬ್ದಾರಿ ಹಾಗೂ ಗೌರವ. ಇದರಿಂದ ತುಂಬಾ ಸಂತೋಷಗೊಂಡಿದ್ದೇನೆ. ಜೊತೆಗೆ ಕ್ರೀಡಾಕೂಟದಲ್ಲಿ ಭಾಗಿಯಾಗುತ್ತಿರುವ ಪ್ರತಿ ಅಥ್ಲೀಟ್ಸ್ಗಳಿಗೆ ಶುಭ ಹಾರೈಸುತ್ತೇನೆ. ಧ್ವಜಧಾರಿಯಾಗಿ ನನ್ನ ಆಯ್ಕೆ ಮಾಡಿದ್ದಕ್ಕಾಗಿ ಭಾರತೀಯ ಒಲಿಂಪಿಕ್ ಸಂಸ್ಥೆ(IOA)ಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ.ಆಗಸ್ಟ್ ತಿಂಗಳಲ್ಲಿ ಬರ್ಮಿಂಗ್ಹ್ಯಾಮ್ನಲ್ಲಿ 2022ರ ಕಾಮನ್ವೆಲ್ತ್ ಕ್ರೀಡಾಕೂಟ ಆರಂಭಗೊಳ್ಳಲಿದೆ.