ಕರ್ನಾಟಕ

karnataka

ETV Bharat / sports

ಏಷ್ಯನ್​ ಗೇಮ್ಸ್​ಗೆ ಆಯ್ಕೆ ಆದ ಮಹಿಳಾ ಎಸ್​ಪಿ.. ಮಮತಾ ಅವರ ಕ್ರೀಡಾ ಸಾಧನೆ ಹೀಗಿದೆ..! - ETV Bharath Kannada news

ಪೊಲೀಸ್​ ಮತ್ತು ಒಂದು ಮಗುವಿನ ತಾಯಿ ಆಗಿರುವ ಮಮತಾ ತಮ್ಮ ಕ್ರೀಡಾ ಪ್ರೇಮವನ್ನು ಬಿಡದೇ ವೃತ್ತಿಯ ಜೊತೆ ಫ್ಯಾಷನ್​ ಅನ್ನು ಫಾಲೋ ಮಾಡಿ ರಾಷ್ಟ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಏಷ್ಯಾನ್​ ಗೇಮ್ಸ್​ಗೆ ಆಯ್ಕೆ ಆದ ಮಹಿಳಾ ಎಸ್​ಪಿ
ಏಷ್ಯಾನ್​ ಗೇಮ್ಸ್​ಗೆ ಆಯ್ಕೆ ಆದ ಮಹಿಳಾ ಎಸ್​ಪಿ

By ETV Bharat Karnataka Team

Published : Sep 4, 2023, 10:34 PM IST

ಲೂಧಿಯಾನ (ಪಂಜಾಬ್​):ಏಷ್ಯಾನ್​ ಗೇಮ್ಸ್​ನಲ್ಲಿ ಭಾಗವಹಿಸುವ ಸಾಫ್ಟ್‌ಬಾಲ್ ತಂಡಕ್ಕೆ ಮಮತಾ ಮಿನ್ಹಾಸ್​ ಆಯ್ಕೆ ಆಗಿದ್ದಾರೆ. ಈಕೆ ಸದ್ಯ ಪೊಲೀಸ್​ ಇಲಾಖೆಯಲ್ಲಿ ಸಬ್ ಇನ್ಸ್‌ಪೆಕ್ಟರ್. ಕ್ರಿಡೆಯ ಮೇಲಿನ ಉತ್ಸಾಹದಿಂದ ಅವರು ತಮ್ಮ ಕೆಲಸ ಜೊತೆಗೆ ಆಟದಲ್ಲೂ ಮುಂದುವರೆದಿದ್ದಾರೆ. ಇದರಿಂದ ಅವರಿಗೆ ಏಷ್ಯನ್​ ಗೇಮ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದೆ. ಮಮತಾ ಮಿನ್ಹಾಸ್ ಪೋಲೀಸ್​ ಆಗಿರುವುದರ ಜೊತೆಗೆ ಒಂದು ಮಗುವಿನ ತಾಯಿಯೂ ಹೌದು.

ಮಮತಾ ಮಿನ್ಹಾಸ್

ಮಮತಾ ಒಂದಲ್ಲಿ ಹಲವು ಬಾರಿ ಉತ್ತಮ ಆಟಗಾರ್ತಿ ಪ್ರಶಸ್ತಿ ಗೆದ್ದಿದ್ದಾರೆ. ಅಲ್ಲದೇ 2011ರ ಏಷ್ಯನ್ ಗೇಮ್ಸ್, 2017ರ ಏಷ್ಯನ್ ಗೇಮ್ಸ್, 2016ರ ವಿಶ್ವಕಪ್‌ನಲ್ಲಿ ಮಮತಾ ಆಡಿದ್ದಾರೆ. ಪಂಜಾಬ್ ಪೊಲೀಸ್‌ನಲ್ಲಿ ಗೇಮ್ಸ್ ಮತ್ತು ನ್ಯಾಷನಲ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಕ್ಕಾಗಿ ಇತ್ತೀಚೆಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಮಮತಾ ಅವರನ್ನು ಗೌರವಿಸಿದ್ದಾರೆ.

ಮಮತಾ ಮಿನ್ಹಾಸ್

ಶಾಲಾ ಮಟ್ಟದಲ್ಲಿ ಅಥ್ಲೀಟ್​: ಸಬ್ ಇನ್ಸ್​​​​ಪೆಕ್ಟರ್ ಆಗುವ ಮುನ್ನ ಮಮತಾ ಕಾಲೇಜಿನಲ್ಲಿ ಅಥ್ಲೀಟ್ ಆಗಿದ್ದರು. ನಂತರ ಕಾಲೇಜಿನಲ್ಲಿ ಸಾಫ್ಟ್ ಬಾಲ್ ಆಡಲು ಆರಂಭಿಸಿದರು. ಮೊದಲು ಕಾಲೇಜು ಮಟ್ಟದಲ್ಲಿ, ನಂತರ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಆಟವಾಡಿ ಚಿನ್ನದ ಪದಕ ಗಳಿಸಿದ್ದಾರೆ. 2016ರಲ್ಲಿ ದೈಹಿಕ ಶಿಕ್ಷಣ ಶಿಕ್ಷಕನ್ನು ಮಮತಾ ವಿವಾಹವಾದರು. ಒಂದು ಮಗುವಿನ ತಾಯಿ ಆದ ಬಳಿಕ ಮತ್ತೆ ಕ್ರೀಡೆಯತ್ತ ಮನಸ್ಸು ಮಾಡಿದರು. ಕ್ರಿಡೆಯ ಜೊತೆಗೆ ಪಂಜಾಬ್ ಪೋಲಿಸ್‌ ಕೆಲಸವನ್ನು ಪಡೆದುಕೊಂಡರು. ಅಲ್ಲಿಂದ ಬಡ್ತಿ ಪಡೆದು ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಏರಿದ್ದಾರೆ.

ಕುಟುಂಬದ ಬೆಂಬಲ: ಮಮತಾ ಅವರು ಪೊಲೀಸ್​ ಕೆಲಸದ ಜೊತೆಗೆ ಕ್ರೀಡೆಯ ಬೇಕಾದ ಅಭ್ಯಾಸವನ್ನು ಮಾಡಲು ಕುಟುಂಬ ಬೆಂಬಲ ನೀಡುತ್ತಿದೆ. ದಿನದ ಎರಡು ಹೊತ್ತು ಅವರು ಕ್ರೀಡೆಗೆ ಬೇಕಾದ ಎಲ್ಲ ಅಭ್ಯಾಸಗಳನ್ನು ಮಾಡಿಕೊಳ್ಳುತ್ತಾರೆ. ಅಲ್ಲದೇ ಅವರು ಪೊಲೀಸ್​ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ. ಪೊಲೀಸರ ಕರ್ತವ್ಯದ ನಡುವೆಯೂ ಸೆ.16ರಂದು ಲುಧಿಯಾನ ಪಿಎಯುನಲ್ಲಿ ನಡೆಯಲಿರುವ ಪಂಜಾಬ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರು ಪಂಜಾಬ್ ತಂಡವನ್ನು ಮುನ್ನಡೆಸಲಿದ್ದಾರೆ. ಇವರ ಕ್ರೀಡೋತ್ಸಾಹಕ್ಕೆ ಪೊಲೀಸ್ ಕಮಿಷನರ್ ಹಾಗೂ ಇತರೆ ಪೊಲೀಸ್ ಅಧಿಕಾರಿಗಳೂ ಪ್ರೋತ್ಸಾಹಿಸುತ್ತಿದ್ದಾರೆ.

ಏಷ್ಯನ್ ಗೇಮ್ಸ್: ಮಮತಾ ಅವರು 2011 ಮತ್ತು 2017 ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುವ ಮೂಲಕ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಈ ಬಾರಿಯ ಏಷ್ಯನ್ ಗೇಮ್ಸ್​​ನಲ್ಲೂ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೇ 2016ರ ವಿಶ್ವ ಕ್ರೀಡಾಕೂಟದಲ್ಲೂ ಮಮತಾ ಮಿನ್ಹಾಸ್ ಆಡಿದ್ದಾರೆ. ಮಮತಾ ತನ್ನ ಸ್ಥಳೀಯ ಪಂಜಾಬ್‌ನ ಆಟಗಳಲ್ಲಿ ಸಹ ಭಾಗವಹಿಸುತ್ತಾರೆ. ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದಕ್ಕಾಗಿ ಪಂಜಾಬ್ ಮುಖ್ಯಮಂತ್ರಿ ಮಮತಾ ತಂಡಕ್ಕೆ 5 ಲಕ್ಷ ರೂಪಾಯಿ ಬಹುಮಾನ ನೀಡಿದ್ದರು.

ಸರ್ಕಾರದ ಮೆಚ್ಚುಗೆ: ಪಂಜಾಬ್ ಸರ್ಕಾರದ ಹೊಸ ಕ್ರೀಡಾ ನೀತಿಯನ್ನೂ ಮಮತಾ ಶ್ಲಾಘಿಸಿದ್ದಾರೆ. ನನ್ನ ಜೊತೆ ಆಡಿದ ಅನೇಕ ಹುಡುಗಿಯರಿಗೆ ಕೋಚ್ ಹುದ್ದೆ ಸಿಕ್ಕಿದೆ. ಇದಲ್ಲದೇ ರಾಷ್ಟ್ರೀಯ ಮತ್ತು ಏಷ್ಯನ್ ಗೇಮ್ಸ್​ನಲ್ಲಿ ತರಬೇತಿಗಾಗಿ ನೀಡುತ್ತಿದ್ದ ವಾರ್ಷಿಕ 8 ಸಾವಿರ ಭತ್ಯೆಯನ್ನು 16 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ಇದರಿಂದಾಗಿ ಈಗ ಕ್ರೀಡೆಗಳು ಪ್ರವರ್ಧಮಾನಕ್ಕೆ ಬರುತ್ತಿದ್ದು, ಪಂಜಾಬ್ ಆಟಗಾರರಿಗೆ ಇದು ಸಂತಸದ ಸಂಗತಿ ಎಂದು ಮಮತಾ ತಿಳಿಸಿದ್ದಾರೆ.

ಇದನ್ನೂ ಓದಿ:ಅಮೆರಿಕ​ ಓಪನ್​: 16ನೇ ಸುತ್ತಿನಲ್ಲಿ ಇಗಾ ಸ್ವಿಯಾಟೆಕ್​​ಗೆ ಸೋಲು.. ಡಬ್ಲ್ಯೂಟಿಎ ರ್‍ಯಾಂಕಿಂಗ್​ನಲ್ಲಿ ಅಗ್ರ ಸ್ಥಾನಕ್ಕೇರಿದ ಅರೀನಾ ಸಬಲೆಂಕಾ

ABOUT THE AUTHOR

...view details