ಚಂಡೀಗಢ (ಹರಿಯಾಣ):ನಾಳೆ (ಆಗಸ್ಟ್ 12) ನಡೆಯಬೇಕಿದ್ದ ಬಹುನಿರೀಕ್ಷಿತ ಭಾರತದ ಕುಸ್ತಿ ಒಕ್ಕೂಟದ ಚುನಾವಣೆಗೆ ಪಂಜಾಬ್-ಹರಿಯಾಣ ಹೈಕೋರ್ಟ್ ತಡೆ ನೀಡಿತು. ಪ್ರಕರಣದ ವಿಚಾರಣೆಯನ್ನು ಆಗಸ್ಟ್ 28ಕ್ಕೆ ಮುಂದೂಡಲಾಗಿದೆ. ಹರಿಯಾಣ ಕುಸ್ತಿ ಅಸೋಸಿಯೇಷನ್ ಹೂಡಿದ್ದ ದಾವೆಯ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್ ಈ ಆದೇಶ ಹೊರಡಿಸಿತು.
ವಿವಾದವೇನು?: ಹರಿಯಾಣ ಕುಸ್ತಿ ಅಸೋಸಿಯೇಷನ್ ಅನ್ನು ಭಾರತದ ಕುಸ್ತಿ ಫೆಡರೇಶನ್ ಗುರುತಿಸಿಲ್ಲ. ಆದರೆ ರಾಜ್ಯ ಒಲಿಂಪಿಕ್ ಅಸೋಸಿಯೇಷನ್ ಗುರುತಿಸಿದೆ. ಹರಿಯಾಣ ಅಮೆಚೂರ್ ವ್ರೆಸ್ಲಿಂಗ್ ಅಸೋಸಿಯೇಷನ್ ಭಾರತದ ಕುಸ್ತಿ ಫೆಡರೇಶನ್‌ನೊಂದಿಗೆ ಸಂಯೋಜಿತವಾಗಿದೆ. ಆದರೆ ಇದು ರಾಜ್ಯ ಒಲಿಂಪಿಕ್ ಅಸೋಸಿಯೇಷನ್‌ನೊಂದಿಗೆ ಸಂಯೋಜಿತವಾಗಿಲ್ಲ.
ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾವು ಹರಿಯಾಣ ರಾಜ್ಯ ಅಮೆಚೂರ್ ವ್ರೆಸ್ಲಿಂಗ್ ಅಸೋಸಿಯೇಷನ್ ಚುನಾವಣೆಗೆ ಮತದಾನದ ಹಕ್ಕು ನೀಡಿದೆ. ಆದರೆ ಕಾಂಗ್ರೆಸ್ ರಾಜ್ಯಸಭಾ ಸಂಸದ ದೀಪೇಂದರ್ ಹೂಡಾ ಅಧ್ಯಕ್ಷರಾಗಿರುವ ಹರಿಯಾಣ ಕುಸ್ತಿ ಅಸೋಸಿಯೇಷನ್‌ಗೆ ಮತದಾನದ ಹಕ್ಕು ನೀಡಿಲ್ಲ. ಈ ಸಂಬಂಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಕುರಿತ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಆಗಸ್ಟ್ 12ರಂದು, ನಾಳೆ ನಡೆಯಲಿರುವ ಚುನಾವಣೆಗೆ ತಡೆಯಾಜ್ಞೆ ನೀಡಿದೆ.
ಹರಿಯಾಣದಿಂದ ಕುಸ್ತಿ ಸಂಸ್ಥೆಗಳು ಡಬ್ಲ್ಯೂಎಫ್ಐ ಚುನಾವಣೆಗೆ ಇಳಿದಿವೆ. ಈ ಮೂಲಕ ಎರಡೂ ಸಂಸ್ಥೆಗಳು ಪರಸ್ಪರ ಮುಖಾಮುಖಿಯಾಗುತ್ತಿದ್ದು, ಮತದಾನದ ಹಕ್ಕು ಕೇಳುತ್ತಿವೆ. ಆದರೆ ನಿಯಮದಂತೆ ಚುನಾವಣಾ ಅಧಿಕಾರಿಗಳು ಒಂದು ಸಂಸ್ಥೆಗಷ್ಟೇ ಮಾನ್ಯತೆ ನೀಡಿದ್ದಾರೆ. ಚುನಾವಣಾಧಿಕಾರಿಯ ಈ ನಿರ್ಧಾರವನ್ನು ಕೋರ್ಟ್ನಲ್ಲಿ ಪ್ರಶ್ನಿಸಲಾಗಿದೆ. ಪ್ರಕರಣದಲ್ಲಿ ಭಾರತ ಸರ್ಕಾರವನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ. ಹಾಗಾಗಿ ನಾನು ನ್ಯಾಯಾಲಯಕ್ಕೆ ಹಾಜರಾಗಿದ್ದೇನೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಸತ್ಯಪಾಲ್ ಜೈನ್ ತಿಳಿಸಿದರು.