ಮುಂಬೈ :ದೇಶಾದ್ಯಂತ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಸಿನಿಮಾ ನಟರು, ಬ್ಯುಸಿನೆಸ್ಮೆನ್ಗಳು, ಕ್ರೀಡಾಪಟುಗಳು ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪರಿಹಾರ ನಿಧಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ಇದೀಗ ಆ ಸಾಲಿಗೆ ಭಾರತ ಬ್ಯಾಡ್ಮಿಂಟನ್ನ ಮುಖ್ಯ ಕೋಚ್ ಪುಲ್ಲೇಲು ಗೋಪಿಚಂದ್ ಕೂಡ ಸೇರಿಕೊಂಡಿದ್ದಾರೆ.
ಈಗಾಗಲೇ ಭಾರತ ಕ್ರಿಕೆಟ್ ತಂಡದ ಹಾಲಿ ಹಾಗೂ ಮಾಜಿ ಕ್ರೀಡಾಪಟುಗಳು ದೇಣಿಗೆ ನೀಡಿ ಮಾನವೀಯತೆ ತೋರಿದ್ದರು. ಇದೀಗ ಬ್ಯಾಡ್ಮಿಂಟನ್ ದಿಗ್ಗಜ ಪುಲ್ಲೇಲು ಗೋಪಿಚಂದ್ ₹25 ಲಕ್ಷ ದೇಣಿಗೆ ನೀಡುವ ಮೂಲಕ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಗೋಪಿಚಂದ್ ಪ್ರಧಾನಮಂತ್ರಿ ಪರಿಹಾರ ನಿಧಿಗೆ ₹15 ಲಕ್ಷ, ತೆಲಂಗಾಣ ಹಾಗೂ ಆಂಧ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ ₹5 ಲಕ್ಷ ಸೇರಿದಂತೆ ಒಟ್ಟು 26 ಲಕ್ಷ ದೇಣಿಗೆ ನೀಡಿದ್ದಾರೆ.