ನವದೆಹಲಿ:ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ (ಐಒಎ) ಅಧ್ಯಕ್ಷ ಸ್ಥಾನಕ್ಕೆ ಮಾಜಿ ಓಟಗಾರ್ತಿ ಪಿಟಿ ಉಷಾ ಅವರು ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನನ್ನ ಸಹ ಕ್ರೀಡಾಪಟುಗಳು ಮತ್ತು ರಾಷ್ಟ್ರೀಯ ಒಕ್ಕೂಟಗಳ ಆತ್ಮೀಯರು ನನ್ನನ್ನು ಬೆಂಬಲಿಸಿದ್ದಾರೆ. ಹೀಗಾಗಿ ನಾನು ಅವರ ನಾಮನಿರ್ದೇಶವನ್ನು ವಿನಮ್ರದಿಂದ ಗೌರವಿಸಿ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಸ್ಥಾನದ ಚುನಾವಣಾ ಕಣಕ್ಕೆ ಧುಮುಕುವೆ ಎಂದು ಹೇಳಿದ್ದಾರೆ.
ಡಿಸೆಂಬರ್ 10 ರಂದು ಐಒಎಗೆ ಚುನಾವಣೆ ಘೋಷಿಸಲಾಗಿದೆ. ಭಾನುವಾರ(ನವೆಂಬರ್ 27) ನಾಮಪತ್ರ ಸಲ್ಲಿಸುವ ಅಂತಿಮ ದಿನವಾಗಿದೆ. ಒಂದು ದಿನದ ಮುಂಚೆ ಪಿಟಿ ಉಷಾ ಅವರು ಈ ಅಚ್ಚರಿಯ ನಿರ್ಧಾರವನ್ನು ಘೋಷಿಸಿದ್ದಾರೆ.
ಐಒಎ ಅಥ್ಲೀಟ್ಗಳ ಆಯೋಗ ಪಿಟಿ ಉಷಾ ಸೇರಿದಂತೆ 8 ಜನರನ್ನು ನಾಮ ನಿರ್ದೇಶನ ಮಾಡಿದ್ದರು. ಶುಕ್ರವಾರದಿಂದ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದರೂ ಯಾರೊಬ್ಬರೂ ಉಮೇದುವಾರಿಕೆ ಸಲ್ಲಿಸಿಲ್ಲ, ನಾಳೆ ಕಡೆಯ ದಿನವಾಗಿದೆ ಎಂದು ಐಒಎ ಚುನಾವಣಾಧಿಕಾರಿ ಉಮೇಶ್ ಸಿನ್ಹಾ ತಿಳಿಸಿದ್ದಾರೆ.
ಓದಿ:ಏಷ್ಯಾಕಪ್ ಆಡಲು ಪಾಕ್ಗೆ ಬರದಿದ್ರೆ, ವಿಶ್ವಕಪ್ ಆಡಲು ಭಾರತಕ್ಕೆ ಬರಲ್ಲ: ರಮೀಜ್ ರಾಜಾ