ಬೆಂಗಳೂರು:ಪ್ರೊ ಕಬಡ್ಡಿ ಲೀಗ್ನಲ್ಲಿ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಪವನ್ ಶೆರಾವತ್ ನೇತೃತ್ವದ ಬೆಂಗಳೂರು ಬುಲ್ಸ್ ಕಳೆದ ಕೆಲ ಪಂದ್ಯಗಳಲ್ಲಿ ದಿಢೀರ್ ಸೋಲು ಕಂಡಿದೆ. ಹೀಗಾಗಿ, ಇದೀಗ ಪ್ಲೇ-ಆಫ್ಗೇರುವ ಆಸೆ ಜೀವಂತವಾಗಿರಿಸಿಕೊಳ್ಳಬೇಕಾದರೆ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ.
8ನೇ ಆವೃತ್ತಿ ಕಬಡ್ಡಿ ಲೀಗ್ನಲ್ಲಿ ಬೆಂಗಳೂರು ತಂಡ ಇಲ್ಲಿಯವರೆಗೆ 19 ಪಂದ್ಯಗಳನ್ನಾಡಿದ್ದು, ಈ ಪೈಕಿ 9 ಪಂದ್ಯಗಳಲ್ಲಿ ಗೆಲುವು, 8 ಪಂದ್ಯಗಳಲ್ಲಿ ಸೋಲು ಹಾಗೂ ಎರಡು ಪಂದ್ಯಗಳಲ್ಲಿ ಡ್ರಾಗಳೊಂದಿಗೆ ಒಟ್ಟು 55 ಪಾಯಿಂಟ್ಗಳಿಕೆ ಮಾಡಿ ನಾಲ್ಕನೇ ಸ್ಥಾನದಲ್ಲಿದೆ.
ಇದನ್ನೂ ಓದಿರಿ:ಚಿನ್ನ ಖರೀದಿಸಲು ಬಂದು ಕಳ್ಳತನ.. ಕ್ಷಣಾರ್ಧದಲ್ಲಿ ಲಕ್ಷಾಂತರ ರೂ.ಮೌಲ್ಯದ ಆಭರಣ ಕದ್ದೊಯ್ದ ಮಹಿಳಾ ಗ್ಯಾಂಗ್
ಇಂದಿನ ಪಂದ್ಯದಲ್ಲಿ ಜೈಪುರ್ ಪಿಂಕ್ ಫ್ಯಾಂಥರ್ಸ್ ತಂಡವನ್ನ ಬೆಂಗಳೂರು ಬುಲ್ಸ್ ಎದುರಿಸಲಿದ್ದು, ತದನಂತರ ಪಾಟ್ನಾ ಪೈರೇಟ್ಸ್ ವಿರುದ್ಧ ಸೆಣಸಾಡಲಿದೆ. ಬೆಂಗಳೂರು ಬುಲ್ಸ್, ಯುಪಿ ಯೋಧಾ ಹಾಗೂ ಪಿಂಕ್ ಫ್ಯಾಂಥರ್ಸ್ ತಂಡಗಳ ಪಾಯಿಂಟ್ಗಳಲ್ಲಿ ಹೆಚ್ಚಿನ ಅಂತರವಿಲ್ಲ. ಹೀಗಾಗಿ, ಉಳಿದ ಮೂರು ಪಂದ್ಯಗಳಲ್ಲಿ ಬುಲ್ಸ್ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ. ಈ ಪಂದ್ಯಗಳಲ್ಲಿ ಗೆಲುವು ದಾಖಲು ಮಾಡದಿದ್ದರೆ ಬುಲ್ಸ್ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ.
ನಿನ್ನೆ ಪುಣೇರಿ ವಿರುದ್ಧ ನಡೆದ ಪಂದ್ಯದಲ್ಲಿ ಪಾಟ್ನಾ 43-26 ಪಾಯಿಂಟ್ಗಳಿಂದ ಜಯ ಸಾಧಿಸಿರುವ ಕಾರಣ ಮೊದಲ ತಂಡವಾಗಿ ಪ್ಲೇ-ಆಫ್ಗೆ ಲಗ್ಗೆ ಹಾಕಿದೆ. ಈ ತಂಡ ಆಡಿರುವ 18 ಪಂದ್ಯಗಳಿಂದ 13 ಗೆಲುವು, 4 ಸೋಲಿನೊಂದಿಗೆ 70 ಪಾಯಿಂಟ್ಗಳಿಕೆ ಮಾಡಿದೆ.