ಕರ್ನಾಟಕ

karnataka

ETV Bharat / sports

Pro Kabaddi League: ತಮಿಳ್​ ತಲೈವಾಸ್​ ವಿರುದ್ಧ ಬೆಂಗಳೂರು ಬುಲ್ಸ್​​ಗೆ ಜಯ - ತಮಿಳ್ ತಲೈವಾಸ್​ ವರ್ಸಸ್​ ಬೆಂಗಳೂರು ಬುಲ್ಸ್​​

ಪ್ರೋ ಕಬಡ್ಡಿ ಲೀಗ್​ನ ಓಪನಿಂಗ್​ ಪಂದ್ಯದಲ್ಲಿ ಸೋಲು ಕಂಡಿದ್ದ ಬೆಂಗಳೂರು ಬುಲ್ಸ್​ ತಂಡ ಇಂದಿನ ಪಂದ್ಯದಲ್ಲಿ ಗೆಲುವು ದಾಖಲು ಮಾಡಿದ್ದು, ಈ ಮೂಲಕ 8ನೇ ಆವೃತ್ತಿಯಲ್ಲಿ ಜಯದ ಖಾತೆ ಓಪನ್ ಮಾಡಿದೆ.

Bengaluru Bulls Beat Thalaivas
Bengaluru Bulls Beat Thalaivas

By

Published : Dec 24, 2021, 10:04 PM IST

ಬೆಂಗಳೂರು: 8ನೇ ಆವೃತ್ತಿ ಪ್ರೋ ಕಬಡ್ಡಿ ಲೀಗ್​​ನ ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಬೆಂಗಳೂರು ಬುಲ್ಸ್​ ತಂಡ ಜಯದ ಖಾತೆ ತೆರೆದಿದೆ. ಮೊದಲಾರ್ಧಲ್ಲಿ ಉಭಯ ತಂಡದ ಸ್ಕೋರ್​ 25-25 ಆಗಿದ್ರೂ, ದ್ವೀತಿಯಾರ್ಧದಲ್ಲಿ ಬುಲ್ಸ್​​​ ಅಬ್ಬರಿಸಿ ಗೆಲುವಿನ ನಗೆ ಬೀರಿದೆ.

ತಮಿಳ್​ ತಲೈವಾಸ್​​ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ 38 - 30 ಅಂಕಗಳಿಂದ ಗೆಲುವು ಸಾಧಿಸಿರುವ ಪವನ್​ ಕುಮಾರ್​ ನೇತೃತ್ವದ ಬುಲ್ಸ್​​​​​ ಒಟ್ಟು 19 ರೇಡ್​​ ಪಾಯಿಂಟ್​​​ ಗಳಿಕೆ ಮಾಡಿದ್ದು, 14 ಟ್ಯಾಕಲ್​ ಪಾಯಿಂಟ್​ ಗಳಿಕೆ ಮಾಡಿತು. ಇದರ ಜೊತೆಗೆ​ 4 ಆಲ್​ಔಟ್​ ಹಾಗೂ ಒಂದು ಹೆಚ್ಚುವರಿ ಪಾಯಿಂಟ್​ ಗಳಿಕೆ ಮಾಡಿತು.

ತಮಿಳ್​ ತಲೈವಾಸ್​ ವಿರುದ್ಧ ಬೆಂಗಳೂರು ಬುಲ್ಸ್​​ಗೆ ಜಯ

ತಂಡದ ಪರ ನಾಯಕ ಪವನ್​ ಕುಮಾರ್​​ 9 ಅಂಕಗಳಿಕೆ ಮಾಡಿದ್ರೆ, ಚಂದ್ರನ್​ ರಜಿಂತ್​​ 7 ಪಾಯಿಂಟ್​ಗಳಿಕೆ ಮಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಉದ್ಘಾಟನಾ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಸೋಲು ಕಂಡಿದ್ದ ಬೆಂಗಳೂರು ಬುಲ್ಸ್​​ ತಂಡ ಇಂದಿನ ಪಂದ್ಯದಲ್ಲಿ ಭರ್ಜರಿ ಕಮ್​​ಬ್ಯಾಕ್​ ಮಾಡುವ ಮೂಲಕ ಗೆಲುವಿನ ಖಾತೆ ತೆರೆದಿದೆ. ವಿಶೇಷ ಎಂದರೆ ತಮಿಳ್​ ವಿರುದ್ಧ ಬುಲ್ಸ್​ ಆಡಿರುವ 9 ಪಂದ್ಯಗಳ ಪೈಕಿ 8ರಲ್ಲಿ ಗೆಲುವು ಸಾಧಿಸಿದೆ.

ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ವಿರುದ್ಧ ದಬ್ಬಾಂಗ್​ ಡೆಲ್ಲಿ ತಂಡ 31-27 ಅಂಕಗಳ ಅಂತರದಿಂದ ಗೆಲುವು ದಾಖಲು ಮಾಡಿದೆ.

ABOUT THE AUTHOR

...view details