ಕರ್ನಾಟಕ

karnataka

ETV Bharat / sports

ಪ್ರೊ ಕಬಡ್ಡಿ ಲೀಗ್​​: ಬೆಂಗಳೂರು ಬುಲ್ಸ್​​ಗೆ ನಾಯಕನಾಗಿ ಪವನ್​! - ಪ್ರೋ ಕಬಡ್ಡಿ ಲೀಗ್ 2021

ಪ್ರಸಕ್ತ ಸಾಲಿನ ಪ್ರೊ ಕಬಡ್ಡಿ ಲೀಗ್​ನಲ್ಲಿ ಬೆಂಗಳೂರು ಬುಲ್ಸ್​ ತಂಡದ ನಾಯಕನಾಗಿ ಪವನ್ ಕುಮಾರ್​ ಶೆರಾವತ್​​​ ಆಯ್ಕೆಯಾಗಿದ್ದಾರೆ.

Bengaluru bulls appoint pawan captain
Bengaluru bulls appoint pawan captain

By

Published : Dec 15, 2021, 4:34 AM IST

ಬೆಂಗಳೂರು:ಡಿಸೆಂಬರ್​​ 22ರಿಂದ ಆರಂಭಗೊಳ್ಳಲಿರುವ 8ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್​​ನಲ್ಲಿ ಬೆಂಗಳೂರು ಬುಲ್ಸ್​​​ ತಂಡವನ್ನ ರೈಡರ್​ ಪವನ್​​​ ಶೆರಾವತ್​​ ಮುನ್ನಡೆಸಲಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಬುಲ್ಸ್​​​​ ತನ್ನ ಅಧಿಕೃತ ಟ್ವೀಟರ್​​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಕಳೆದ ಆವೃತ್ತಿಯಲ್ಲಿ ತಂಡದ ಕ್ಯಾಪ್ಟನ್​ ಆಗಿದ್ದ ರೋಹಿತ್ ಕುಮಾರ್​​ ಗಾಯಗೊಂಡಿದ್ದ ಕಾರಣ ಕೆಲವೊಂದು ಪಂದ್ಯಗಳಲ್ಲಿ ನಾಯಕನಾಗಿ ಪವನ್​ ತಂಡ ಮುನ್ನಡೆಸಿದ್ದರು. ಆದರೆ, ಈ ಸಲದ ಆವೃತ್ತಿಯಲ್ಲಿ ಪೂರ್ಣಾವಧಿ ಕ್ಯಾಪ್ಟನ್​ ಆಗಿ ನೇಮಕ ಮಾಡಲಾಗಿದೆ. ಇವರ ಜೊತೆಗೆ ಉಪನಾಯಕನಾಗಿ ಮಹೇಂದ್ರ ಸಿಂಗ್​​ ಆಯ್ಕೆಯಾಗಿದ್ದಾರೆ.

ಕಳೆದ ಎಂಟು ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಬೆಂಗಳೂರು ಬುಲ್ಸ್​​​​ ಸೀಸನ್​​ 6ರಲ್ಲಿ ಗುಜರಾತ್​​ ಫಾರ್ಚೂನ್​ಜೈಂಟ್ಸ್​​​ ತಂಡವನ್ನ ಸೋಲಿಸುವ ಮೂಲಕ ಪ್ರಶಸ್ತಿ ಗೆದ್ದಿದೆ. ಕಳೆದ ಋತುವಿನಲ್ಲಿ ಅತ್ಯಂತ ಯಶಸ್ವಿ ರೈಡರ್​​ ಆಗಿ ಹೊರಹೊಮ್ಮಿರುವ ಪವನ್​​, ಇದೀಗ ತಂಡವನ್ನ ಚಾಂಪಿಯನ್​​ ಪಟ್ಟಕ್ಕೇರಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಬುಲ್ಸ್​ ತಂಡದ ನಾಯಕ ಪವನ್​​ ಇಲ್ಲಿಯವರೆಗೆ 80 ಪಂದ್ಯಗಳಿಂದ 716 ಅಂಕ ಗಳಿಸಿದ್ದು, ರೇಡಿಂಗ್​ನಲ್ಲಿ 682 ಹಾಗೂ ಟ್ಯಾಕಲ್​ನಲ್ಲಿ 34 ಅಂಕ ಗಳಿಸಿದ್ದಾರೆ. ಡಿಸೆಂಬರ್​​ 22ರಿಂದ ಈ ಸಲದ ಪ್ರೊ ಕಬಡ್ಡಿ ಲೀಗ್​​ ಆರಂಭಗೊಳ್ಳಲಿದ್ದು, ಮೊದಲ ಪಂದ್ಯದಲ್ಲಿ ಬುಲ್ಸ್​​​​​-ಯು ಮುಂಬಾ ಸೆಣಸಾಟ ನಡೆಸಲಿವೆ.

ABOUT THE AUTHOR

...view details