ಬೆಂಗಳೂರು: ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೋ ಕಬಡ್ಡಿ ಲೀಗ್ 2022 ಪಂದ್ಯಾವಳಿಯಲ್ಲಿ ಶುಕ್ರವಾರ ಮೂರು ಪಂದ್ಯಗಳು ನಡೆದಿವೆ. ಈ ಪಂದ್ಯಗಳಲ್ಲಿ ಯು ಮುಂಬಾ, ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ಗುಜರಾತ್ ಜಯಂಟ್ಸ್ ತಂಡಗಳು ಜಯಗಳಿಸಿ ಮುನ್ನಡೆ ಕಂಡಿವೆ.
ದಿನದ ಮೊದಲ ಪಂದ್ಯದಲ್ಲಿ ತಮಿಳು ತಲೈವಾಸ್ ವಿರುದ್ಧ ಯು ಮುಂಬಾ ತಂಡ 39-32 ಅಂತರದಲ್ಲಿ, ಎರಡನೆಯ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ ಜೈಪುರ ಪಿಂಕ್ ಪ್ಯಾಂಥರ್ಸ್ 44-31 ಅಂತರದಲ್ಲಿ ಹಾಗೂ ಮೂರನೇಯ ಪಂದ್ಯದಲ್ಲಿ ಪುಣೇರಿ ಪಲ್ಟನ್ ವಿರುದ್ಧ ಗುಜರಾತ್ ಜಯಂಟ್ಸ್ 47-37 ಅಂತರದಲ್ಲಿ ಜಯ ಗಳಿಸಿದವು.
ಯು ಮುಂಬಾ, ಜೈಪುರ ಪಿಂಕ್ ಪ್ಯಾಂಥರ್ಸ್, ಗುಜರಾತ್ ಜಯಂಟ್ಸ್ ತಂಡಗಳಿಗೆ ಜಯ ದಿನದ ಮೂರನೇ ಪಂದ್ಯದಲ್ಲಿ ಗುಜರಾತ್ ಜಯಂಟ್ಸ್ ಪರ ರಾಕೇಶ್ 15 ರೈಡಿಂಗ್ ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು. ಸೌರವ್ ಗುಲಿಯಾ ಟ್ಯಾಕಲ್‌ನಲ್ಲಿ 5 ಅಂಕಗಳನ್ನು ಗಳಿಸಿ ಅಮೂಲ್ಯ ಜಯಕ್ಕೆ ನೆರವಾದರು. ಪುಣೇರಿ ಪಲ್ಟನ್ ಪರ ಅಸ್ಲಾಮ್ ಇನಾಂದಾರ್ ರೈಡಿಂಗ್‌ನಲ್ಲಿ 19 ಅಂಕಗಳನ್ನು ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.
ಗುಜರಾತ್ ಜಯಂಟ್ಸ್ ತಂಡಕ್ಕೆ ಗೆಲುವು: ರಾಕೇಶ್ ಹಾಗೂ ನಾಯಕ ಚಂದ್ರನ್ ರಂಜಿತ್ ಅವರ ಉತ್ತಮ ರೈಡಿಂಗ್ ಪ್ರದರ್ಶನದ ನೆರವಿನಿಂದ ಗುಜರಾತ್ ಜಯಂಟ್ಸ್ ತಂಡ ಪುಣೇರಿ ಪಲ್ಟನ್ ವಿರುದ್ಧದ ಪಂದ್ಯದಲ್ಲಿ 19-17 ಅಂತರದಲ್ಲಿ ಮುನ್ನಡೆ ಕಂಡಿತ್ತು. ರಾಕೇಶ್ 6 ಅಂಕಗಳನ್ನು ಗಳಿಸಿದರೆ, ಚಂದ್ರನ್ 4 ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು.
ಫಜಲ್ ಅತ್ರಚಲಿ ನಾಯಕತ್ವದಲ್ಲಿ ಅಂಗಣಕ್ಕಿಳಿದ ಪುಣೇರಿ ಪಲ್ಟನ್ ಆಲ್ರೌಂಡ್ ಪ್ರದರ್ಶನ ತೋರಿ ದ್ವಿತಿಯಾರ್ಧದಲ್ಲಿ ಉತ್ತಮ ಪೈಪೋಟಿ ನೀಡುವ ಲಕ್ಷಣ ತೋರಿತು. ಅಸ್ಲಾಮ್ ಇನಾಂದಾರ್ 8 ಅಂಕಗಳನ್ನು ಗಳಿಸಿ ತಂಡಕ್ಕೆ ಆಧಾರವಾದರು. ಮೋಹಿತ್ ಗೊಯತ್ 4 ಅಂಕಗಳನ್ನು ಗಳಿಸಿ ದಿಟ್ಟ ಹೋರಾಟ ನೀಡುವಲ್ಲಿ ನೆರವಾದರು. ಗೌರವ್ ಖಾತ್ರಿ ಹಾಗೂ ಫಜಲ್ ಟ್ಯಾಕಲ್‌ನಲ್ಲಿ ತಲಾ 2 ಅಂಕಗಳನ್ನು ಗಳಿಸಿದರು.
ಯು ಮುಂಬಾ, ಜೈಪುರ ಪಿಂಕ್ ಪ್ಯಾಂಥರ್ಸ್, ಗುಜರಾತ್ ಜಯಂಟ್ಸ್ ತಂಡಗಳಿಗೆ ಜಯ ಜೈಪುರ ಪಿಂಕ್ ಪ್ಯಾಂಥರ್ಸ್‌ಗೆ ಭರ್ಜರಿ ಜಯ: ಅರ್ಜುನ್ ದೇಶ್ವಾಲ್ ರೈಡಿಂಗ್‌ನಲ್ಲಿ 14 ಅಂಕಗಳನ್ನು ಗಳಿಸುವ ಮೂಲಕ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಪ್ರೋ ಕಬಡ್ಡಿ ಲೀಗ್‌ನಲ್ಲಿ ಗೆಲುವು ಸಾಧಿಸಿತು. ತನ್ನ ಮೂರನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ 44-31 ಅಂಕಗಳ ಅಂತರದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಗೆದ್ದು ಬೀಗಿತು. ಟ್ಯಾಕಲ್‌ನಲ್ಲಿ ನಾಯಕ ಸುನೀಲ್ ಕುಮಾರ್ 8 ಅಂಕಗಳನ್ನು ಗಳಿಸುವ ಮೂಲಕ ಅತಿ ಹೆಚ್ಚು ಅಂಕ ಗಳಿಸಿದ ಸಾಧನೆ ಮಾಡಿದರು.
ಯು ಮುಂಬಾ, ಜೈಪುರ ಪಿಂಕ್ ಪ್ಯಾಂಥರ್ಸ್, ಗುಜರಾತ್ ಜಯಂಟ್ಸ್ ತಂಡಗಳಿಗೆ ಜಯ ಸತತ ಎರಡು ಜಯ ಗಳಿಸಿದ ಆತ್ಮವಿಶ್ವಾಸದಲ್ಲಿದ್ದ ಹರಿಯಾಣ ಸ್ಟೀಲರ್ಸ್ ಈ ಸೀಸನ್ನಲ್ಲಿ ಮೊದಲ ಸೋಲನುಭವಿಸಿತು. ಆದರೆ, ತಂಡದ ಪರ ಮೀತು ರೈಡಿಂಗ್‌ನಲ್ಲಿ 16 ಅಂಕಗಳನ್ನು ಗಳಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಅರ್ಜುನ್ ದೆಶ್ವಲಾ (8) ಹಾಗೂ ನಾಯಕ ಸುನಿಲ್ ಕುಮಾರ್ (4) ಅನುಕ್ರಮಾಗಿ ಅದ್ಭುತ ರೈಡಿಂಗ್ ಹಾಗೂ ಟ್ಯಾಕಲ್ ಪ್ರದರ್ಶನದಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಹರಿಯಾಣ ಸ್ಟೀಲರ್ಸ್ ವಿರುದ್ಧ 20-12 ಅಂತರದಲ್ಲಿ ಮುನ್ನಡೆ ಕಂಡಿತ್ತು.
ಯು ಮುಂಬಾ, ಜೈಪುರ ಪಿಂಕ್ ಪ್ಯಾಂಥರ್ಸ್, ಗುಜರಾತ್ ಜಯಂಟ್ಸ್ ತಂಡಗಳಿಗೆ ಜಯ ಒಂದು ಹಂತದಲ್ಲಿ ಹರಿಯಾಣ ಸ್ಟೀಲರ್ಸ್ 3-9 ರಿಂದ ಹಿನ್ನಡೆ ಕಂಡಿತ್ತು. ಆದರೆ ದಿಟ್ಟ ಹೋರಾಟ ನೀಡಿ 9-9 ರಲ್ಲಿ ಸಮಬಲ ಸಾಧಿಸಿತು. ಕೊನೆಯ ಕ್ಷಣದಲ್ಲಿ ಪಿಂಕ್ ಪ್ಯಾಂಥರ್ಸ್ ಎದುರಾಳಿಯನ್ನು ಆಲೌಟ್ ಮಾಡುವ ಮೂಲಕ ಪಂದ್ಯದ ಮೇಲೆ ಪ್ರಭುತ್ವ ಸಾಧಿಸಿತು.
ಯು ಮುಂಬಾ, ಜೈಪುರ ಪಿಂಕ್ ಪ್ಯಾಂಥರ್ಸ್, ಗುಜರಾತ್ ಜಯಂಟ್ಸ್ ತಂಡಗಳಿಗೆ ಜಯ ತಮಿಳು ತಲೈವಾಸ್ ವಿರುದ್ಧ ಯು ಮುಂಬಾಗೆ ಗೆಲುವು: ಗುಮಾನ್ ಸಿಂಗ್ (12) ಮತ್ತು ಆಶೀಶ್ (10) ಆಕರ್ಷಕ ಸೂಪರ್ ಟೆನ್ ರೈಡಿಂಗ್ ಅಂಕಗಳ ನೆರವಿನಿಂದ ಯು ಮುಂಬಾ ತಂಡ ತಮಿಳು ತಲೈವಾಸ್ ವಿರುದ್ಧದ ಪಂದ್ಯದಲ್ಲಿ 39-32 ಅಂಕಗಳ ಅಂತರದಲ್ಲಿ ಜಯ ಗಳಿಸಿತು. ನಾಯಕನಿಲ್ಲದೇ ಕಂಗೆಟ್ಟಿದ್ದ ತಮಿಳು ತಲೈವಾಸ್ ಪರ ನರೇಂದರ್ 15 ರೈಡಿಂಗ್ ಅಂಕಗಳನ್ನು ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ಪ್ರಥಮಾರ್ಧದಲ್ಲಿ ಕೇಲವ 1 ಅಂಕದಿಂದ ಮುನ್ನಡೆ ಕಂಡಿದ್ದ ತಮಿಳು ತಲೈವಾಸ್ ದ್ವಿತಿಯಾರ್ಧಲ್ಲಿ ಆ ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಯಿತು.
ನರೇಂದರ್ ಸೂಪರ್ 10 ನೆರವಿನಿಂದ ತಮಿಳು ತಲೈವಾಸ್ ತಂಡ ಯು ಮುಂಬಾ ವಿರುದ್ಧ 16-15 ಅಂಕಗಳ ಅಂತರದಲ್ಲಿ ಮುನ್ನಡೆ ಕಂಡಿತ್ತು. ನಾಯಕ ಪವನ್ ಶೆರಾವತ್ ಇಲ್ಲದೇ ಕಂಗೆಟ್ಟಿರುವ ತಮಿಳು ತಲೈವಾಸ್ ಆಡಿದ ಎರಡು ಪಂದ್ಯಗಳಲ್ಲಿ ಒಂದು ಸೋಲನುಭವಿಸಿದರೆ, ಇನ್ನೊಂದು ಪಂದ್ಯದಲ್ಲಿ ಸಮಬಲ ಸಾಧಿಸಿದೆ. ಯು ಮುಂಬಾ ತಂಡ ಆರಂಭದಲ್ಲಿ ಬೃಹತ್ ಹಿನ್ನಡೆ ಕಂಡಿತ್ತು. ಆದರೆ ಗುಮಾನ್ ಸಿಂಗ್, ಜೈ ಭಗವಾನ್ ಹಾಗೂ ಆಶೀಶ್ ಉತ್ತಮ ಪ್ರದರ್ಶನ ತೋರಿ ತಂಡ ತಕ್ಕ ತಿರುಗೇಟು ನೀಡುವಲ್ಲಿ ಪ್ರಮುಖ ಪಾತ್ರವಹಿಸಿದರು.
ಓದಿ:ಪ್ರೊ ಕಬಡ್ಡಿ ಲೀಗ್ 2022 : ಯೋಧಾಸ್‌ಗೆ ಸೋಲು, ರೋಚಕ ಪಂದ್ಯ ಗೆದ್ದ ದಬಾಂಗ್ ಡೆಲ್ಲಿ