ಬೆಂಗಳೂರು: ಇಂದಿನಿಂದ ಪ್ರೋ ಕಬ್ಬಡ್ಡಿ 8ನೇ ಸೀಸನ್ ಆರಂಭಗೊಂಡಿದೆ. ಇಂದು ನಡೆದ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ಯೂ ಮುಂಬಾ ತಂಡಗಳು ಅಖಾಡಕ್ಕಿಳಿದಿದ್ದವು. ಈ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ 46-30 ಅಂತರದಿಂದ ಸೋಲು ಕಾಣುವ ಮೂಲಕ ತನ್ನ ಅಭಿಯಾನವನ್ನ ಆರಂಭಿಸಿದೆ.
ಪ್ರೋ ಕಬ್ಬಡ್ಡಿ ಸೀಸನ್ 8: ಸೋಲಿನೊಂದಿಗೆ ಅಭಿಯಾನ ಆರಂಭಿಸಿದ ಬೆಂಗಳೂರು ಬುಲ್ಸ್
ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಯೂ ಮುಂಬಾ ಮೊದಲಾರ್ಧದಲ್ಲೇ ಬೆಂಗಳೂರು ತಂಡವನ್ನು 1 ಬಾರಿ ಆಲೌಟ್ ಮಾಡಿ 24-17 ರಲ್ಲಿ ಮುನ್ನಡೆ ಕಾಪಾಡಿಕೊಂಡಿತು. ಆದರೆ, ದ್ವಿತೀಯಾರ್ಧದಲ್ಲಿ ಪವನ್ ಆಕ್ರಮಣಕಾರಿ ಆಟ ತೋರಿಸಿ ಅಂತಿಮವಾಗಿ 46-30ಕ್ಕೆ ತಂದು ನಿಲ್ಲಿಸಿದರು.
ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಯೂ ಮುಂಬಾ ಮೊದಲಾರ್ಧದಲ್ಲೇ ಬೆಂಗಳೂರು ತಂಡವನ್ನು 1 ಬಾರಿ ಆಲೌಟ್ ಮಾಡಿ 24-17 ರಲ್ಲಿ ಮುನ್ನಡೆ ಕಾಪಾಡಿಕೊಂಡಿತ್ತು. ಆದರೆ, ದ್ವಿತೀಯಾರ್ಧದಲ್ಲಿ ಪವನ್ ಆಕ್ರಮಣ ಆಟ ತೋರಿ ಅಂತಿಮವಾಗಿ 46-30 ಅಂಕಗಳಿಗೆ ತಂದು ನಿಲ್ಲಿಸಿದರು.
ಎಂದಿನಂತೆ ಏಕಾಂಗಿ ಹೋರಾಟ ನಡೆಸಿದ ಪವನ್ಗೆ ಬೆಂಗಳೂರು ಬುಲ್ಸ್ ತಂಡದಿಂದ ಸರಿಯಾದ ಬೆಂಬಲ ಸಿಗಲಿಲ್ಲ. ಅದ್ಭುತ ರೈಡಿಂಗ್ ನಡೆಸಿದ ಪವನ್ 12 ಅಂಕಗಳಿಸಿದರು. ಇನ್ನೂ ಚಂದ್ರನ್ ರಂಜಿತ್ 12 ಅಂಕ ಗಳಿಸಿದರು. ಇನ್ನು, ಯೂ ಮುಂಬಾ ಪರ ಉತ್ತಮ ಆಟ ಪ್ರದರ್ಶನ ತೋರಿದ ರೈಡರ್ ಅಭಿಷೇಕ್ ಸಿಂಗ್ 16 ಅಂಕ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.