ಕರ್ನಾಟಕ

karnataka

ETV Bharat / sports

ಪ್ರೋ ಕಬಡ್ಡಿ ಲೀಗ್​ ಗೆದ್ದವರಿಗೆ ಸಿಗಲಿರುವ ಮೊತ್ತ ಎಷ್ಟು ಕೋಟಿ ಗೊತ್ತಾ? - ಪ್ರೊ ಕಬಡ್ಡಿ ರನ್ನರ್​ ಅಪ್​ಗೆ 1.8 ಕೋಟಿ

ಬರೋಬ್ಬರಿ 3 ತಿಂಗಳ ಟೂರ್ನಿ 138 ಪಂದ್ಯಗಳು ಅಂತಿಮ ಹಂತಕ್ಕೆ ತಲುಪಿವೆ. ಈಗಾಗಲೇ 4 ಬಲಿಷ್ಠ ತಂಡಗಳಾದ ಹಾಲಿ ಚಾಂಪಿಯನ್​ ಬೆಂಗಳೂರು ಬುಲ್ಸ್​, ಯು ಮುಂಬಾ, ಬೆಂಗಾಲ್​ ವಾರಿಯರ್ಸ್​ ಹಾಗೂ ದಬಾಂಗ್​ ಡೆಲ್ಲಿ ಸೆಮಿಫೈನಲ್​ ಪ್ರವೇಶಿಸಿವೆ.

Pro Kabaddi League 2019

By

Published : Oct 15, 2019, 5:02 PM IST

Updated : Oct 15, 2019, 5:09 PM IST

ಮುಂಬೈ:ಕಬಡ್ಡಿ ಚಾಂಪಿಯನ್​ಶಿಪ್​​ನಲ್ಲಿ ಬಹುದೊಡ್ಡ ಅಲೆಯನ್ನೇ ಎಬ್ಬಿಸಿರುವ ಭಾರತ ಪ್ರೋ ಕಬಡ್ಡಿ ಲೀಗ್​ ಸೆಮಿಫೈನಲ್​ ಹಂತಕ್ಕೆ ತಲುಪಿದ್ದು, ಒಟ್ಟಾರೆ ಟೂರ್ನಿಯಲ್ಲಿ ಸಿಗುವ ಬಹುಮಾನದ ಮೊತ್ತದ ವಿವರ ಇಲ್ಲಿದೆ.

ಬರೋಬ್ಬರಿ 3 ತಿಂಗಳ ಟೂರ್ನಿ 138 ಪಂದ್ಯಗಳು ಅಂತಿಮ ಹಂತಕ್ಕೆ ತಲುಪಿವೆ. ಈಗಾಗಲೇ 4 ಬಲಿಷ್ಠ ತಂಡಗಳಾದ ಹಾಲಿ ಚಾಂಪಿಯನ್​ ಬೆಂಗಳೂರು ಬುಲ್ಸ್​, ಯು ಮುಂಬಾ, ಬೆಂಗಾಲ್​ ವಾರಿಯರ್ಸ್​ ಹಾಗೂ ದಬಾಂಗ್​ ಡೆಲ್ಲಿ ಸೆಮಿಫೈನಲ್​ ಪ್ರವೇಶಿಸಿವೆ.

ಈ ಟೂರ್ನಿಯಲ್ಲಿ ಒಟ್ಟಾರೆ 8 ಕೋಟಿ ರೂ. ಬಹುಮಾನ ಮೊತ್ತವನ್ನು ಕಾಯ್ದಿರಿಸಿದ್ದು, ಗೆಲ್ಲುವ ತಂಡಕ್ಕೆ ಬರೋಬ್ಬರಿ 3 ಕೋಟಿ ರೂ. ಸಿಗಲಿದೆ. ರನ್ನರ್​ ಅಪ್​ ತಂಡಕ್ಕೆ 1.8 ಕೋಟಿ ಹಾಗೂ 3 ಮತ್ತು 4ನೇ ಸ್ಥಾನ ಪಡೆಯುವ ತಂಡಗಳಿಗೆ ತಲಾ 90 ಲಕ್ಷ ಸಿಗಲಿದೆ. 5 ಮತ್ತು 6ನೇ ಸ್ಥಾನ ಪಡೆಯುವ ತಂಡ ತಲಾ 45 ಲಕ್ಷ ರೂಪಾಯಿ ಸಿಗಲಿದೆ.

ಉಳಿದ 50 ಲಕ್ಷ ರೂ. ಮೊತ್ತವನ್ನು ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ರೈಡರ್​, ಡಿಫೆಂಡರ್​, ಟೂರ್ನಿ ಶ್ರೇಷ್ಠ ಆಟಗಾರ ರೆಫ್ರಿ ಹಾಗೂ ಈ ವರ್ಷ ಡೆಬ್ಯೂಟ್​ ಮಾಡಿ ಉತ್ತಮ ಪ್ರದರ್ಶನ ತೋರಿದ ಆಟಗಾರರಿಗೆ ಹಂಚಲಾಗುತ್ತದೆ. ಕಳೆದ ಬಾರಿ ಬೆಂಗಳೂರು ಬುಲ್ಸ್ ಚಾಂಪಿಯನ್​ ಆಗಿ ಹೊರಹೊಮ್ಮಿತ್ತು. ಗುಜರಾತ್​ ಫಾರ್ಚೂನ್​ ಜೇಂಟ್ಸ್​ ತಂಡವನ್ನು ಮಣಿಸಿ ಚಾಂಪಿಯನ್​ ಆಗಿ ಹೊರ ಹೊಮ್ಮಿತ್ತು.

Last Updated : Oct 15, 2019, 5:09 PM IST

ABOUT THE AUTHOR

...view details