ಜೈಪುರ:ಪ್ರೋ ಕಬಡ್ಡಿ ಲೀಗ್ನಲ್ಲಿ ಮುಂಚೂಣಿ ತಂಡ ದಬಾಂಗ್ ಡೆಲ್ಲಿ ವಿರುದ್ಧ ಪವನ್ ಶೆರಾವತ್ ಭರ್ಜರಿ ರೈಡಿಂಗ್ ನೆರವಿನಿಂದ ಬೆಂಗಳೂರು ಬುಲ್ಸ್ ಪಂದ್ಯ ಟೈ ಮಾಡಿಕೊಂಡಿದೆ.
ಈ ಪಂದ್ಯವನ್ನು ಪವನ್ ಶೆರಾವತ್ ಹಾಗೂ ನವೀನ್ ಕುಮಾರ್ ನಡುವಿನ ಯುದ್ದ ಎಂದೇ ಪರಿಗಣಿಸಲಾಗಿದ್ದು ಮೊದಲಾರ್ಧದಲ್ಲಿ ಬುಲ್ಸ್ 19-22 ಅಂಕಗಳ ಹಿನ್ನಡೆ ಅನುಭವಿಸಿತ್ತು. ಪಂದ್ಯದ ದ್ವಿತೀಯಾರ್ಧದಲ್ಲಿ ಮತ್ತೆ ಆರ್ಭಟಿಸಿದ ಡೆಲ್ಲಿ ಕೇವಲ 12 ನಿಮಿಷದಲ್ಲಿ ಬುಲ್ಸ್ ತಂಡವನ್ನು ಆಲೌಟ್ ಮಾಡಿ 34-23 ರಲ್ಲಿ ಮುನ್ನಡೆ ಕಾಯ್ದುಕೊಂಡಿತು.
ಕೊನೆಯ 8 ನಿಮಿಷದ ಆಟದಲ್ಲಿ ಕಮಾಲ್ ಮಾಡಿದ ಪವನ್ 7 ರೈಡಿಂಗ್ ಪಾಯಿಂಟ್ ಸಂಪಾದಿಸಿದರು. ಇವರ ರೈಡಿಂಗ್, ಡಿಫೆಂಡರ್ಗಳ ನೆರವಿನಿಂದ 23-34 ಇದ್ದ ಅಂಕಗಳ ಅಂತರ ಇನ್ನು 5 ನಿಮಿಷದ ಆಟ ಬಾಕಿ ಇರುವಾಗಲೇ 36-35 ರಲ್ಲಿ ಮುನ್ನಡೆ ಪಡೆಯಿತು. ಆದರೆ ಡೆಲ್ಲಿ ಮತ್ತೆ ತಿರುಗಿ ಬಿದ್ದು 39-36 ರಲ್ಲಿ ಮುನ್ನಡೆ ಸಾಧಿಸಿತು. ಕೊನೆಯಲ್ಲಿ ಒಂದು ನಿಮಿಷದ ಆಟ ಬಾಕಿಯಿದ್ದಾಗ ಬುಲ್ಸ್ 3 ಅಂಕ ಸಂಪಾದಿಸಿ 39-39ರಲ್ಲಿ ಟೈ ಸಾಧಿಸಿತು.