ಕರ್ನಾಟಕ

karnataka

ETV Bharat / sports

ಪವನ್ ಮಿಂಚಿನ ದಾಳಿಗೆ ಬೆದರಿದ ಜೈಪುರ್: ಅಗ್ರ ಸ್ಥಾನಕ್ಕೇರಿದ ಬೆಂಗಳೂರು ಬುಲ್ಸ್

ಬೆಂಗಳೂರು ಬುಲ್ಸ್​​ ತಂಡದ ನಾಯಕ ಪವನ್​ ಕುಮಾರ್​ ಭರ್ಜರಿ ರೈಡಿಂಗ್ ನೆರವಿನಿಂದ ಬೆಂಗಳೂರು ಬುಲ್ಸ್​ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು, ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

Bengaluru bulls beat pink panthers
Bengaluru bulls beat pink panthers

By

Published : Jan 6, 2022, 10:20 PM IST

Updated : Jan 6, 2022, 10:46 PM IST

ಬೆಂಗಳೂರು: ಪ್ರೊ ಕಬಡ್ಡಿ ಟೂರ್ನಿಯ 8ನೇ ಆವೃತ್ತಿಯ ಇಂದಿನ ಪಂದ್ಯದಲ್ಲಿ ಜೈಪುರ್​ ಪಿಂಕ್​ ಪ್ಯಾಂಥರ್ಸ್​ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡುವ ಮೂಲಕ ಅಗ್ರಸ್ಥಾನಕ್ಕೆ ಲಗ್ಗೆ ಹಾಕಿದೆ. ಬುಲ್ಸ್ ತಂಡ ಆಡಿರುವ 7ಪಂದ್ಯಗಳಿಂದ 1 ಸೋಲು, 1 ಪಂದ್ಯದಲ್ಲಿ ಡ್ರಾ ಸಾಧಿಸಿದ್ದು, ಐದು ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿ 28 ಅಂಕ ಗಳಿಕೆ ಮಾಡಿದೆ.

ತಾನು ಆಡಿದ ಮೊದಲ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಸೋಲು ಕಂಡಿದ್ದ ಬುಲ್ಸ್​ ತಂಡ ತಂದನಂತರ ಪುಟಿದೆದ್ದು, ಉಳಿದ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿತು. ಇಂದಿನ ಪಂದ್ಯದಲ್ಲಿ ಜೈಪುರ್​ ವಿರುದ್ಧ 38-31 ಅಂಕಗಳ ಅಂತರದಿಂದ ಗೆಲುವಿನ ನಗೆ ಬೀರಿದೆ.

ಜೈಪುರ್​ ವಿರುದ್ಧ ಭರ್ಜರಿ ಜಯ ಸಾಧಿಸಿದ ಬುಲ್ಸ್​​​

ಬೆಂಗಳೂರು ತಂಡ ರೈಡಿಂಗ್​​ನಲ್ಲಿ 21 ಅಂಕ, ಟ್ಯಾಕಲ್​ನಲ್ಲಿ 12 ಹಾಗೂ ಆಲ್​ಔಟ್​ನಲ್ಲಿ 4 ಪಾಯಿಂಟ್​ ಪಡೆದುಕೊಂಡಿತು.

ಮಿಂಚಿನ ರೈಡಿಂಗ್ ಮಾಡಿದ ಪವನ್​

ಬೆಂಗಳೂರು ಬುಲ್ಸ್​ ತಂಡದ ಕ್ಯಾಪ್ಟನ್​​ ಪವನ್​ ಕುಮಾರ್​ ಭರ್ಜರಿ ರೈಡಿಂಗ್ ಮಾಡುವ ಮೂಲಕ ಎದುರಾಳಿ ತಂಡಕ್ಕೆ ಮಾರಕವಾದರು. 13 ರೈಡ್​​ ಮಾಡುವ ಮೂಲಕ 1 ಟ್ಯಾಕಲ್​, 4 ಬೋನಸ್​ ಪಾಯಿಂಟ್​ ಸೇರಿ 18 ಅಂಕ ಗಳಿಕೆ ಮಾಡಿದರು. ಇವರಿಗೆ ಸಾಥ್​ ನೀಡಿದ ದೀಪಕ್ ನರ್ವಾಲ್​​ 4 ಪಾಯಿಂಟ್​, ಸೌರಭ್​ ನಡಲ್​ ಹಾಗೂ ಮೋರೆ ತಲಾ 3 ಪಾಯಿಂಟ್​ ಗಳಿಕೆ ಮಾಡಿದರು.

26 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದ ಡೆಲ್ಲಿ ತಂಡ ಇದೀಗ ಎರಡನೇ ಸ್ಥಾನಕ್ಕೆ ಕುಸಿದಿದೆ. ಪಾಟ್ನಾ ತಂಡ 24 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿ ಮುಂದುವರೆದಿದೆ.

ಇಂದಿನ ಮತ್ತೊಂದು ಪಂದ್ಯದಲ್ಲಿ ತಮಿಳ್ ತಲೈವಾಸ್​ ಹಾಗೂ ಪಾಟ್ನಾ ಪೈರೆಟ್ಸ್​​​ 30-30 ಅಂಕಗಳಿಂದ ಡ್ರಾ ಸಾಧಿಸಿದೆ.

Last Updated : Jan 6, 2022, 10:46 PM IST

ABOUT THE AUTHOR

...view details