ನವದೆಹಲಿ: ಪ್ರೋ ಕಬಡ್ಡಿ ಲೀಗ್ನ 7ನೇ ಆವೃತ್ತಿ 49ನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ 30-27 ಅಂಕಗಳ ಅಂತರದಲ್ಲಿ ಯು ಮುಂಬಾ ತಂಡವನ್ನು ಬಗ್ಗುಬಡಿದಿದೆ.
ಆರಂಭದಿಂದಲೂ ಉತ್ತಮ ದಾಳಿ ನಡೆಸಿದ ಸ್ಟೀಲರ್ಸ್ ಮೊದಲಾರ್ಧದ ವೇಳೆಗೆ 16-8 ಅಂಕಗಳಿಂದ ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲೂ ಸ್ಟೀಲರ್ಸ್ ಉತ್ತಮ ಪ್ರದರ್ಶನ ಮುಂದುವರಿಸಿ ಮುನ್ನಡೆಯನ್ನು 25-17ಕ್ಕೆ ಮುನ್ನಡೆ ಕಾಯ್ದುಕೊಂಡಿತು. ಆದರೆ, ಕೊನೆಯ 6 ನಿಮಿಷಗಳಲ್ಲಿ ತಿರುಗಿ ಬಿದ್ದ ಮುಂಬೈ ಹರಿಯಾಣ ತಂಡವನ್ನು ಆಲೌಟ್ ಮಾಡಿತು. ಕೊನೆಗೆ 27-30ರ ಅಂತರದಿಂದ ಸೋಲೊಪ್ಪಿಕೊಳ್ಳಲೇಬೇಕಾಯಿತು.
ಹರಿಯಾಣ ಪರ ವಿಕಾಶ್ ಖಂಡೋಲಾ 9, ರವಿ ಕುಮಾರ್ ಹಾಗೂ ಸುನಿಲ್ ತಲಾ 3, ಚಂದ್ ಸಿಂಗ್ 3 , ಸೆಲ್ವಮಣಿ 3 ಅಂಕ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಯು ಮುಂಬಾ ಪರ ಅಭಿಷೇಕ್ ಸಿಂಗ್ 6, ಸಂದೀಪ್ ನರ್ವಾಲ್ 5, ಫಜಲ್ ಅಟ್ರಾಚಲಿ 4,ಅರ್ಜುನ್ 3, ಅತುಲ್ 3, ಹರೀಂದರ್ ಕುಮಾರ್ 2 ಅಂಕ ಪಡೆದರು.
ಯುಪಿ ಯೋಧ ತಂಡಕ್ಕೆ 2ನೇ ಗೆಲುವು
ಲೀಗ್ನ 50ನೇ ಪಂದ್ಯದಲ್ಲಿ ಯುಪಿ ಯೋಧಾ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು 31-24ರ ಅಂತರದಲ್ಲಿ ಮಣಿಸಿ ಟೂರ್ನಿಯಲ್ಲಿ 2ನೇ ಗೆಲುವು ಪಡೆಯಿತು. ಸುರೇಂದರ್ ಗಿಲ್ 8, ಶ್ರಿಕಾಂತ್ ಜಾಧವ್ 7, ರಿಶಾಂಕ್ ದೇವಾಡಿಗ 4, ಸುಮಿತ್ 4, ನಿತೇಶ್ ಕುಮಾರ್ 2 ಮೊಹ್ಸೆನ್ ಮಘ್ಸೌದ್ಲು 2 ಅಂಕ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಅಗ್ರಸ್ಥಾನಿ ಜೈಪುರ ಪರ ನಾಯಕ ದೀಪಕ್ ನಿವಾಸ್ ಹೂಡ 9, ವಿಶಾಲ್ 4, ನಿತಿನ್ ನರ್ವಾಲ್ 4 ಅಂಕ ಪಡೆದು ಕೊನೆಯವರೆಗೂ ಗೆಲುವಿಗಾಗಿ ನಡೆಸಿದರಾದರೂ ಅವರ ಹೋರಾಟ ವಿಫಲವಾಯಿತು.