ಕರ್ನಾಟಕ

karnataka

ETV Bharat / sports

ಜಿದ್ದಾಜಿದ್ದಿನ ಪಂದ್ಯದಲ್ಲಿ ಡೆಲ್ಲಿಗೆ ಸೋಲು... ಚೊಚ್ಚಲ ಪ್ರೋ ಕಬಡ್ಡಿ ಟೈಟಲ್​ಗೆ ಮುತ್ತಿಕ್ಕಿದ ಬೆಂಗಾಲ್​! - ಬೆಂಗಾಲ್​ ವಾರಿಯರ್ಸ್

7ನೇ ಆವೃತ್ತಿ ಪ್ರೋ ಕಬಡ್ಡಿ ರೋಚಕ ಫೈನಲ್​ ಪಂದ್ಯದಲ್ಲಿ ಬೆಂಗಾಲ್​ ವಾರಿಯರ್ಸ್​ ಚೊಚ್ಚಲ ಬಾರಿಗೆ ಚಾಂಪಿಯನ್​ ಆಗಿ ಹೊರಹೊಮ್ಮಿದ್ದು, ಎದುರಾಳಿ ತಂಡಕ್ಕೆ ಸೋಲಿನ ರುಚಿ ತೋರಿಸಿದೆ.

ಫೈನಲ್​ ಪಂದ್ಯ ಗೆದ್ದ ಬೆಂಗಾಲ್​​

By

Published : Oct 19, 2019, 9:36 PM IST

Updated : Oct 19, 2019, 9:54 PM IST

ಅಹಮದಾಬಾದ್​​:ಪ್ರಸಕ್ತ ಸಾಲಿನ ಪ್ರೋ ಕಬಡ್ಡಿ ಲೀಗ್​​ನಲ್ಲಿ ದಬಾಂಗ್​​​ ಡೆಲ್ಲಿಗೆ ಸೋಲಿನ ರುಚಿ ತೋರಿಸಿರುವ ಬೆಂಗಾಲ್​ ವಾರಿಯರ್ಸ್​ ಚೊಚ್ಚಲ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದ್ದು, ಹೊಸ ಚಾಂಪಿಯನ್​ ಆಗಿ ಹೊರಹೊಮ್ಮಿದೆ.

ಚೊಚ್ಚಲ ಪ್ರೋ ಕಬಡ್ಡಿ ಟೈಟಲ್​ಗೆ ಮುತ್ತಿಕ್ಕಿದ ಬೆಂಗಾಲ್

ಅಹಮದಾಬಾದ್​​ನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಬಲಿಷ್ಠ ತಂಡಗಳಾದ ದಬಾಂಗ್​​​ ಡೆಲ್ಲಿ ಹಾಗೂ ಬೆಂಗಾಲ್​ ವಾರಿಯರ್ಸ್​ ಮುಖಾಮುಖಿಯಾಗಿದ್ದವು. ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದ ಎರಡು ತಂಡಗಳಿಂದಲೂ ಆರಂಭದಿಂದಲೂ ಜಿದ್ದಾಜಿದ್ದಿನ ಹೋರಾಟ ಮೂಡಿ ಬಂತು. ಆದರೆ, ಕೊನೆಯದಾಗಿ ಡೆಲ್ಲಿ ವಿರುದ್ಧ 39-34 ಅಂಕಗಳ ಅಂತರದಿಂದ ಸೋಲಿನ ರುಚಿ ತೋರಿಸುವ ಮೂಲಕ ಟ್ರೋಫಿಗೆ ಮುತ್ತಿಕ್ಕಿದೆ.

ರೋಚಕ ಪಂದ್ಯ

ಆರಂಭದಲ್ಲಿ ಡೆಲ್ಲಿ ತಂಡ ಬೆಂಗಾಲ್​ ಮೇಲೆ ಹಿಡಿತ ಸಾಧಿಸಿ, 14-9 ಅಂತರದ ಮುನ್ನಡೆ ಪಡೆದುಕೊಂಡಿತ್ತು. ಆದರೆ ಇದಾದ ಬಳಿಕ ಅಂಕ ಸಮ ಮಾಡಿಕೊಂಡ ಬೆಂಗಾಲ್​ ತದನಂತರ ಎದುರಾಳಿ ತಂಡದ ಮೇಲೆ ತಿರುಗಿ ಬಿತ್ತು. ಈ ನಂತರ ಅದ್ಭುತ ಪ್ರದರ್ಶನ ನೀಡಿದ ಬೆಂಗಾಲ್​ ಎದುರಾಳಿ ತಂಡಕ್ಕೆ ಸೋಲಿನ ರುಚಿ ತೋರಿಸಿತು.

ಬೆಂಗಾಲ್​ ವಾರಿಯರ್ಸ್​ ಅಭಿಮಾನಿಗಳ ಸಂಭ್ರಮ

ಇದೇ ವೇಳೆ ಬೆಸ್ಟ್​ ರೈಡರ್​ ಹಾಗೂ ಸ್ಟೈಲೀಶ್​ ಪ್ಲೇಯರ್​ ಆಫ್​​ ದಿ ಮ್ಯಾಚ್​​​ ನವೀನ್​ ಕುಮಾರ್​, ಬೆಸ್ಟ್​ ಡಿಪೆಂಡರ್​ ಆಫ್​ ದಿ ಮ್ಯಾಚ್​ ಜೀವ್​ ಕುಮಾರ್​ಗೆ ಸಿಕ್ಕರೆ, ಗೇಮ್​ ಚೇಂಜರ್​​ ಅವಾರ್ಡ್​ ಮೊಹಮದ್​​ಗೆ ಸಿಕ್ಕಿತ್ತು. ಈ ಸಲ ಫೈನಲ್​ ಗೆದ್ದ ತಂಡ ಬರೋಬ್ಬರಿ 3 ಕೋಟಿ ರೂಪಾಯಿಗೆ ಮುತ್ತಿಕ್ಕಲಿದೆ. ಇನ್ನು ಸೆಮಿಫೈನಲ್​ ಪಂದ್ಯದಲ್ಲಿ ಬೆಂಗಳೂರು ಸೋಲಿಸಿ ದಬಾಂಗ್​​​​​ ಡೆಲ್ಲಿ ಫೈನಲ್​ಗೆ ಅರ್ಹತೆ ಪಡೆದುಕೊಂಡಿತ್ತು.

Last Updated : Oct 19, 2019, 9:54 PM IST

ABOUT THE AUTHOR

...view details