ಹೈದರಾಬಾದ್: ಬುಧವಾರ ತೆಲುಗು ಟೈಟನ್ಸ್ ವಿರುದ್ಧ ಕೇವಲ ಒಂದು ಅಂಕದಿಂದ ಗೆಲುವು ಸಾಧಿಸಿದ್ದ ದಬಾಂಗ್ ಡೆಲ್ಲಿ ಇಂದು ನಡೆದ ತಮಿಳ್ ತಲೈವಾಸ್ ವಿರುದ್ಧವೂ ಒಂದು ಅಂಕ ಅಂತರದ ರೋಚಕ ಜಯ ಸಾಧಿಸಿದೆ.
ಮೊದಲಾರ್ಧದಲ್ಲಿ ಆರ್ಭಟಿಸಿದ ತಮಿಳ್ ತಲೈವಾಸ್ ದಬಾಂಗ್ ವಿರುದ್ಧ 18-11ರ ಮುನ್ನಡೆ ಕಾಯ್ದುಕೊಂಡಿತು. ಆದರೆ ದ್ವಿತೀಯಾರ್ಧದಲ್ಲಿ ತಿರುಗಿ ಬಿದ್ದ ದಬಾಂಗ್ ಡೆಲ್ಲಿ ಕೊನೆಯ ರೈಡ್ನಲ್ಲಿ ತಲೈವಾಸ್ ತಂಡದ ಮಂಜಿತ್ ಚಿಲ್ಲರ್ ಕೋರ್ಟ್ನ ಕೊನೆಯ ಗೆರೆಯನ್ನು ತುಳಿದರು. ಪರಿಣಾಮ ಎದುರಾಳಿಯನ್ನು ಹಿಡಿದರೂ ಅಂಕ ಸಿಗದೆ ಗೆಲ್ಲುವ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಯಿತು.