ಕರ್ನಾಟಕ

karnataka

ETV Bharat / sports

ರೋಚಕ ಪಂದ್ಯದಲ್ಲಿ ಬೆಂಗಳೂರು ಬುಲ್ಸ್​​​ ಜಯಭೇರಿ... ಬೆಂಗಾಲ್​​​​ ವಾರಿಯರ್ಸ್​ ಮೇಲೆ ಬುಲ್ಸ್​​ ಸವಾರಿ ! - ಬೆಂಗಾಲ್​ ವಾರಿಯರ್ಸ್​​​

ರೋಚಕ ಪಂದ್ಯದಲ್ಲಿ ಬೆಂಗಳೂರು ಬುಲ್ಸ್​ ಜಯಭೇರಿ ಬಾರಿಸಿದ್ದು, ಪ್ರೊ ಕಬಡ್ಡಿ ಪಂದ್ಯದಲ್ಲಿ ಬೆಂಗಾಲ್​​ ವಾರಿಯರ್ಸ್​​ ಮೇಲೆ ಬುಲಸ್​ ಸವಾರಿ ನಡೆಸಿದೆ.

ಬೆಂಗಳೂರು ಬುಲ್ಸ್​​​/Bengaluru bulls

By

Published : Aug 3, 2019, 10:52 PM IST

ಪಾಟಲೀಪುತ್ರ: ಇಲ್ಲಿನ ಪಾಟಲೀಪುತ್ರ ಸ್ಪೋರ್ಟ್ಸ್​​ ಕಾಂಪ್ಲೆಕ್ಸ್​​​ನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್​​ನ ಮತ್ತೊಂದು ಪಂದ್ಯದಲ್ಲಿ ಬೆಂಗಾಲ್​​​ ವಾರಿಯರ್ಸ್​ ವಿರುದ್ಧ ಬೆಂಗಳೂರು ಬುಲ್ಸ್​​ ರೋಚಕ ಗೆಲುವು ದಾಖಲು ಮಾಡಿದೆ.

ಪಂದ್ಯದ ಆರಂಭದಲ್ಲಿ ಹಾಲಿ ಚಾಂಪಿಯನ್​ ಬೆಂಗಳೂರು ಬುಲ್ಸ್​​​ ಹಿನ್ನಡೆ ಅನುಭವಿಸಿದರೂ ಪಂದ್ಯದ ಕೊನೆಯಲ್ಲಿ ಅದ್ಭುತ ಕಮ್​ಬ್ಯಾಕ್​ ಮಾಡುವ ಮೂಲಕ ಕೇವಲ 1 ಅಂಕಗಳ ಗೆಲುವು ದಾಖಲು ಮಾಡಿದೆ.

ಬುಲ್ಸ್​ ತಂಡದ ಪರ ಪವನ್​​ ಅತ್ಯದ್ಭುತ ಆಟ ಪ್ರದರ್ಶಿಸಿದರು. ಇನ್ನು ವಾರಿಯರ್ಸ್​​​ 29 ರೈಡ್​ ಪಾಯಿಂಟ್​ ಪಡೆದುಕೊಂಡರೆ, ಬುಲ್ಸ್​ 31 ಪಾಯಿಂಟ್​ಗಳಿಸಿತ್ತು. ಉಳಿದಂತೆ ಬುಲ್ಸ್​ ಒಂದು ಸೂಪರ್​ ರೈಡ್​ ಪಡೆದುಕೊಂಡರೆ ಟ್ಯಾಕಲ್​​​ ಪಾಯಿಂಟ್​​ನಲ್ಲೂ ಬುಲ್ಸ್​ ಎರಡು ಅಂಕ ಹೆಚ್ಚು ಪಡೆದುಕೊಂಡಿತ್ತು. ಹೀಗಾಗಿ ಉಭಯ ತಂಡಗಳು ಕೊನೆಯಲ್ಲಿ 42-43 ಅಂಕ ಪಡೆದುಕೊಂಡವು.

ಬುಲ್ಸ್​ ತಂಡದ ಪರ ಪವನ್​ ಕುಮಾರ್​​ 26 ಸಲ ರೈಡ್​ ಮಾಡಿ ಮೂರು ಬೂನಸ್​ ಸೇರಿದಂತೆ 29 ಅಂಕಗಳಿಕೆ ಮಾಡಿ ತಂಡಕ್ಕೆ ನೀಡಿದರು. ಈ ಗೆಲುವಿನೊಂದಿಗೆ ಬುಲ್ಸ್​ ಆಡಿರುವ 4 ಪಂದ್ಯಗಳ ಪೈಕಿ ಮೂರರಲ್ಲಿ ಗೆಲುವು ದಾಖಲು ಮಾಡಿದಂತಾಗಿದೆ.

ಜೈಪುರ್​ ಪಿಂಕ್​ ಪ್ಯಾಂಥರ್ಸ್

ಮತ್ತೊಂದು ಪಂದ್ಯದಲ್ಲಿ ಪರ್ದೀಪ್​ ನರ್ವಾಲ್​ ಮಿಂಚಿನ ಪ್ರದರ್ಶನದ ಹೊರತಾಗಿ ಸಹ ಪಾಟ್ನಾ ಪೈರೇಟ್ಸ್​ ವಿರುದ್ಧ ಜೈಪುರ್​ ಪಿಂಕ್​ ಪ್ಯಾಂಥರ್ಸ್​ ಗೆಲುವು ಕಂಡಿದೆ. ಪಾಟ್ನಾ ಪೈರೇಟ್ಸ್​ 21 ಅಂಕಗಳಿಸಿದರೆ ಪೈರೇಟ್ಸ್​​ 34 ಅಂಕ ಗಳಿಕೆ ಮಾಡಿ ಗೆಲುವು ಕಂಡಿದೆ.

ABOUT THE AUTHOR

...view details