ಬೆಂಗಳೂರು :ಎರಡನೇ ಆವೃತ್ತಿಯ ರುಪೇ ಪ್ರೈಮ್ ವಾಲಿಬಾಲ್ ಲೀಗ್ ಟೂರ್ನಿಗೆ ನಾಳೆಯಿಂದ ಚಾಲನೆ ಸಿಗಲಿದೆ. ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೊಲ್ಕತ್ತಾ ಥಂಡರ್ ಬೋಲ್ಟ್ಸ್ ಹಾಗೂ ಆತಿಥೇಯ ಬೆಂಗಳೂರು ಟಾರ್ಪೆಡೋಸ್ ತಂಡಗಳು ಮುಖಾಮುಖಿಯಾಗಲಿವೆ.
ಒಟ್ಟು 31 ಪಂದ್ಯಗಳು ನಡೆಯಲಿದ್ದು, ಲೀಗ್ ಹಂತದ ಪಂದ್ಯಗಳಿಗೆ ಕ್ರಮವಾಗಿ ಬೆಂಗಳೂರು ಹೈದರಾಬಾದ್ ಹಾಗೂ ಕೊಚ್ಚಿ ಆತಿಥ್ಯ ವಹಿಸಲಿವೆ. ಮಾರ್ಚ್ 5ರಂದು ಕೊಚ್ಚಿಯಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಭಾರತದ ಯುವ ವಾಲಿಬಾಲ್ ಆಟಗಾರರ ಜೊತೆ ಆಸ್ಟ್ರೇಲಿಯಾದ ಟ್ರೆಂಟ್ ಓ 'ಡಿಯಾ, ವೆನೆಜುವೆಲಾದ ಜೋಸ್ ವೆರ್ಡಿ, ಪೆರುವಿನ ಎಡ್ಯುರೋ ರೋಮೆ ಪ್ರಮುಖ ಆಕರ್ಷಣೆಯಾಗಿರಲಿದ್ದಾರೆ.
ಇದೇ ಮೊದಲ ಬಾರಿಗೆ ಎಂಟು ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದು ಮುಂಬೈ ಮೆಟಿಯೋರ್ಸ್ ನೂತನ ತಂಡವಾಗಿ ಟೂರ್ನಿಗೆ ಪಾದಾರ್ಪಣೆ ಮಾಡಲಿದೆ. ಮೊದಲ ಆವೃತ್ತಿಯ ಪಂದ್ಯಾವಳಿಯನ್ನ ಕೋವಿಡ್ ಕಾರಣದಿಂದ ಹೈದರಾಬಾದಿನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಸಲಾಗಿತ್ತು. ಆದರೆ ಈ ಬಾರಿ ಮೂರು ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿದ್ದು ಅಭಿಮಾನಿಗಳಿಗೆ ಕ್ರೀಡಾಂಗಣಕ್ಕೆ ಪ್ರವೇಶವಿರಲಿದೆ.