ಅಸ್ಟನಾ(ಕಜಕಿಸ್ತಾನ): ಭಾರತದ ಯುವ ಬಾಕ್ಸರ್ ಶಿವ ಥಾಪ ಕಜಕಿಸ್ತಾನ್ದಲ್ಲಿ ನಡೆದ ಪ್ರೆಸಿಡೆನ್ಸ್ ಕಪ್ ಬಾಕ್ಸಿಂಗ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಬಾಕ್ಸಿಂಗ್ ಇತಿಹಾಸದಲ್ಲಿ ಈ ಟೂರ್ನಿಯಲ್ಲಿ ಚಿನ್ನ ಗೆದ್ದ ಮೊದಲ ಬಾಕ್ಸರ್ ಎನಿಸಿದ್ದಾರೆ.
60 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಶಿವ ಥಾಪ ಫೈನಲ್ ಪಂದ್ಯದಲ್ಲಿ ಗಾಯದ ಕಾರಣ ಎದುರಾಳಿಯಾದ ಕಜಕಿಸ್ತಾನದ ಜಾಕೀರ್ ಸಫಿಯುಲಿನ್ ಫೈನಲ್ನಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಭಾರತದ ವಿಕಾಶ್ಗೆ ಚಿನ್ನದ ಪದಕ ಒಲಿದು ಬಂದಿದೆ.