ಕರ್ನಾಟಕ

karnataka

ETV Bharat / sports

6 ತಿಂಗಳಲ್ಲಿ 3ನೇ ಸಲ ವಿಶ್ವ ಚಾಂಪಿಯನ್​ ಕಾರ್ಲ್‌ಸನ್​ಗೆ ತಮಿಳುನಾಡಿನ​ ಪ್ರಗ್ನಾನಂದ್​ ಶಾಕ್​ - ETV bharat kannada news

ಮಾಸ್ಟರ್​ ಗೇಮ್​ ಚೆಸ್​ನಲ್ಲಿ ತಮಿಳುನಾಡಿನ 16 ರ ಹರೆಯದ ಹುಡುಗ ಆರ್​ ಪ್ರಜ್ಞಾನಂದ್​ ವಿಶ್ವ ಚಾಂಪಿಯನ್​ ನಾರ್ವೆಯ ಮ್ಯಾಗ್ನಸ್​ ಕಾರ್ಲ್‌ಸನ್​ರನ್ನು ಮತ್ತೊಮ್ಮೆ ಸೋಲಿಸುವ ಮೂಲಕ 6 ತಿಂಗಳ ಅವಧಿಯಲ್ಲಿ ಮೂರನೇ ಬಾರಿಗೆ ಶಾಕ್​ ನೀಡಿದ್ದಾರೆ.

pragyanand-defeated-magnus
ತಮಿಳುನಾಡಿನ​ ಪ್ರಗ್ನಾನಂದ್​ ಶಾಕ್​

By

Published : Aug 22, 2022, 1:45 PM IST

ತಮಿಳುನಾಡಿನ ಜೂನಿಯರ್​ ಗ್ರ್ಯಾಂಡ್​ಮಾಸ್ಟರ್​ ಆರ್​ ಪ್ರಗ್ನಾನಂದ್​ ಅವರು ಚೆಸ್​​ ವಿಶ್ವ ಚಾಂಪಿಯನ್​ ನಾರ್ವೆಯ ಮ್ಯಾಗ್ನಸ್​ ಕಾರ್ಲಸನ್​ ಅವರಿಗೆ ಮತ್ತೊಮ್ಮೆ ಆಘಾತ​ ನೀಡಿದ್ದಾರೆ. ಈ ವರ್ಷದಲ್ಲಿ ಮೂರನೇ ಬಾರಿಗೆ ವಿಶ್ವ ನಂ.1 ಆಟಗಾರನಿಗೆ ಸೋಲುಣಿಸಿದ್ದಾರೆ.

ಸೋಮವಾರ ನಡೆದ ಎಫ್‌ಟಿಎಕ್ಸ್ ಕ್ರಿಪ್ಟೋ ಕಪ್‌ನ ಅಂತಿಮ ಸುತ್ತಿನಲ್ಲಿ ವಿಶ್ವದ ನಂ.1 ಚೆಸ್​ ಮಾಸ್ಟರ್​ ಮ್ಯಾಗ್ನಸ್ ಕಾರ್ಲ್‌ಸನ್‌ರನ್ನು 4- 2 ಗೇಮ್​ ಅಂತರದಿಂದ ಸೋಲಿಸಿದರು. ಬ್ಲಿಟ್ಜ್ ಟೈ ಬ್ರೇಕ್‌ ಸೇರಿದಂತೆ ಮೂರು ನೇರ ಗೇಮ್‌ಗಳಲ್ಲಿ ಪ್ರಗ್ನಾನಂದ್,​ ಕಾರ್ಲ್‌ಸನ್​ ವಿರುದ್ಧ ವಿಕ್ರಮ ಸಾಧಿಸಿದರು.

ಕಾರ್ಲ್‌ಸನ್​ ವಿರುದ್ಧ ಗೆಲುವು ಸಾಧಿಸಿದಾಗ್ಯೂ ಟೂರ್ನಿಯಲ್ಲಿ ಪ್ರಗ್ನಾನಂದ್​ ಅವರು 2ನೇ ಸ್ಥಾನ ಪಡೆದರು. ಅಂಕಗಳ ಆಧಾರದ ಮೇಲೆ ಮುಂದಿರುವ ಮ್ಯಾಗ್ನಸ್​ 16 ಪಾಯಿಂಟ್​ಗಳೊಂದಿಗೆ ಪ್ರಶಸ್ತಿ ಜಯಿಸಿದರು. ಪ್ರಗ್ನಾನಂದ್​ 15 ಅಂಕ ಪಡೆದರು.

ಸೋಲಿನ ಬಳಿಕ ಪ್ರತಿಕ್ರಿಯಿಸಿದ ಕಾರ್ಲ್‌ಸನ್,​ "ನಾನು ದಿನವಿಡೀ ಕೆಟ್ಟದಾಗಿ ಆಟವಾಡಿದೆ. ಸೋಲುವುದು ನಿಜಕ್ಕೂ ಒಳ್ಳೆಯದಲ್ಲ. ಕೊನೆಗೂ ಅರ್ಹವಾದ ಗೆಲುವು ಸಾಧಿಸಿದ್ದೇನೆ. ಕೆಲವೊಮ್ಮೆ ಈ ರೀತಿ ನಡೆಯುವುದು ಸಹಜ" ಎಂದು ಹೇಳಿದರು.

ಪ್ರಗ್ನಾನಂದ ಈ ವರ್ಷ ಅದ್ಭುತ ಲಯದಲ್ಲಿದ್ದಾರೆ. ಈ ಹಿಂದಿನ ಎರಡು ಆನ್‌ಲೈನ್ ಟೂರ್ನಿಗಳಲ್ಲಿ ವಿಶ್ವ ಚಾಂಪಿಯನ್‌ ಕಾರ್ಲ್‌ಸನ್​ರಿಗೆ ಎರಡು ಬಾರಿ ಸೋಲುಣಿಸಿದ್ದರು. ಮಾಜಿ ವಿಶ್ವಚಾಂಪಿಯನ್​ ಭಾರತದ ವಿಶ್ವನಾಥನ್​ ಆನಂದ್​ ಬಳಿಕ ಕಾರ್ಲಸನ್​ರಿಗೆ ಮಣ್ಣುಮುಕ್ಕಿಸಿದ ಎರಡನೇ ಮತ್ತು ಮೊದಲ ಅತಿ ಕಿರಿಯ ಆಟಗಾರ ಪ್ರಗ್ನಾನಂದ್ ಎಂಬ ಹೆಗ್ಗಳಿಕೆ ಇದೆ.

ಇತ್ತೀಚೆಗೆ ಚೆನ್ನೈನಲ್ಲಿ ಮುಕ್ತಾಯವಾದ 44ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತ 'ಬಿ' ತಂಡ ಕಂಚಿನ ಪದಕ ಪಡೆಯುವಲ್ಲಿ ಪ್ರಗ್ನಾನಂದ್​ ಅವರು ನಿರ್ಣಾಯಕ ಪಾತ್ರ ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ:ಕಳೆದ 8 ಏಷ್ಯಾಕಪ್‌ ಕ್ರಿಕೆಟ್‌ ಸಮರ ಹೇಗಿತ್ತು? ಈ ಸಲವೂ ಕಪ್‌ ನಮ್ದೇನಾ? ಕಂಪ್ಲೀಟ್‌ ಡೀಟೆಲ್ಸ್‌

ABOUT THE AUTHOR

...view details