ಕರ್ನಾಟಕ

karnataka

ETV Bharat / sports

ಮುಂದಿನ ವಾರ ಒಲಿಂಪಿಕ್ ಕ್ರೀಡಾಕೂಟದ ಹೊಸ ದಿನಾಂಕ ಘೋಷಣೆ - ಟೋಕಿಯೊ ಒಲಿಂಪಿಕ್ಸ್ ಸಂಘಟನಾ ಸಮಿತಿ

ಮುಂದಿನ ವಾರಂತ್ಯದೊಳಗೆ ಒಲಿಂಪಿಕ್ ಕ್ರೀಡಾಕೂಟದ ಪರಿಷ್ಕೃತ ದಿನಾಂಕಗಳನ್ನು ಘೋಷಣೆ ಮಾಡಲಾಗುವುದು ಎಂದು ಒಲಿಂಪಿಕ್​ ಸಂಘಟನಾ ಸಮಿತಿ ಮುಖ್ಯಸ್ಥರು ತಿಳಿಸಿದ್ದಾರೆ.

Olympic Games dates could be announced next week'
ಒಲಿಂಪಿಕ್ ಕ್ರೀಡಾಕೂಟದ ನೂತನ ದಿನಾಂಕ ಘೋಷಣೆ

By

Published : Mar 29, 2020, 8:09 AM IST

ಟೋಕಿಯೋ:ಮುಂದೂಡಲ್ಪಟ್ಟ ಒಲಿಂಪಿಕ್ ಕ್ರೀಡಾಕೂಟದ ನೂತನ ದಿನಾಂಕಗಳನ್ನು ಮುಂದಿನ ವಾರಂತ್ಯದೊಳಗೆ ಪ್ರಕಟಿಸಬಹುದು ಎಂದು ಟೋಕಿಯೊ ಒಲಿಂಪಿಕ್ಸ್ ಸಂಘಟನಾ ಸಮಿತಿ ಮುಖ್ಯಸ್ಥ ಯೋಶಿರೋ ಮೋರಿ ತಿಳಿಸಿದ್ದಾರೆ.

2021ರಲ್ಲಿ ಜಪಾನ್‌ನಲ್ಲಿ ನಡೆಯಲಿರುವ ಜಾಗತಿಕ ಮಟ್ಟದ ಕ್ರೀಡಾಕೂಟವು ಜೂನ್ ಮತ್ತು ಸೆಪ್ಟೆಂಬರ್ ನಡುವೆ ನಡೆಯುವ ಸಾಧ್ಯತೆಯಿದೆ ಎಂದು ಜಪಾನ್​ ಸುದ್ದಿ ವಾಹಿನಿಯೊಂದು ಪ್ರಸಾರ ಮಾಡಿದ ಕಾರ್ಯಕ್ರಮದಲ್ಲಿ ಮೋರಿ ಹೇಳಿದ್ದಾರೆ.

ಕ್ರೀಡಾಕೂಟವನ್ನು ಮುಂದೂಡುವುದರಿಂದ ಬರುವ ಹೆಚ್ಚುವರಿ ವೆಚ್ಚಗಳನ್ನು ಸರಿದೂಗಿಸುವುದು ಸವಾಲಾಗಿದೆ ಎಂದು 33 ಅಂತರರಾಷ್ಟ್ರೀಯ ಕ್ರೀಡಾ ಫೆಡರೇಶನ್‌ ದೇಶಗಳಿಗೆ ಬರೆದ ಪತ್ರದಲ್ಲಿ ಅವರು ತಿಳಿಸಿದ್ದಾರೆ. ಈ ವೆಚ್ಚಗಳನ್ನು ಯಾರು ಭರಿಸುತ್ತಾರೆ ಎಂಬುದನ್ನು ನಿರ್ಧರಿಸುವುದು ದೊಡ್ಡ ಪ್ರಶ್ನೆ ಎಂದು ಐಒಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಜಪಾನ್ ಪ್ರಧಾನಿ ಶಿಂಜೊ ಅಬೆ ಅವರೊಂದಿಗೆ ಒಲಿಂಪಿಕ್ ಸಮಿತಿ ಅಧ್ಯಕ್ಷ ಥಾಮಸ್ ಬಾಚ್ ದೂರವಾಣಿ ಸಂಭಾಷಣೆ ನಡೆಸಿದ ನಂತರ ಟೋಕಿಯೋ ಒಲಿಂಪಿಕ್​ ಕ್ರೀಡಾಕೂಟವನ್ನು ಮುಂದೂಡಲಾಗಿತ್ತು.

ABOUT THE AUTHOR

...view details