ನವದೆಹಲಿ:ಭಾರತ ಮತ್ತು ರಷ್ಯಾ ಜಂಟಿಯಾಗಿ ಆನ್‌ಲೈನ್ ಚೆಸ್ ಒಲಿಂಪಿಯಾಡ್ ಗೆದ್ದಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಭಿನಂದಿಸಿದ್ದಾರೆ.
ಆಟಗಾರರ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಶ್ಲಾಘನೀಯ. ಅವರ ಯಶಸ್ಸು ಇತರ ಆಟಗಾರರನ್ನು ಪ್ರೇರೇಪಿಸುತ್ತದೆ ಎಂದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
'ಫಿಡೆ ಆನ್‌ಲೈನ್ ಚೆಸ್ ಒಲಿಂಪಿಯಾಡ್ ಗೆದ್ದ ನಮ್ಮ ಚೆಸ್ ಆಟಗಾರರಿಗೆ ಅಭಿನಂದನೆಗಳು. ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಶ್ಲಾಘನೀಯ. ಅವರ ಯಶಸ್ಸು ಖಂಡಿತವಾಗಿಯೂ ಇತರ ಚೆಸ್ ಆಟಗಾರರನ್ನು ಪ್ರೇರೇಪಿಸುತ್ತದೆ. ರಷ್ಯಾದ ತಂಡವನ್ನೂ ನಾನು ಅಭಿನಂದಿಸುತ್ತೇನೆ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
'ಫಿಡೆ ಆನ್‌ಲೈನ್ ಚೆಸ್ ಒಲಿಂಪಿಯಾಡ್ ಗೆದ್ದ ಭಾರತೀಯ ಚೆಸ್ ತಂಡಕ್ಕೆ ಅಭಿನಂದನೆಗಳು. ನಿಮ್ಮ ಪ್ರದರ್ಶನದಿಂದ ಭಾರತವು ಸಂತೋಷವಾಗಿದೆ. ನಾವೆಲ್ಲರೂ ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಪಡುತ್ತೇವೆ. ರಷ್ಯಾದ ತಂಡಕ್ಕೂ ಅಭಿನಂದನೆಗಳು' ಎಂದು ರಾಷ್ಟ್ರಪತಿ ರಾಮನಾ್ಥ ಕೋವಿಂದ್ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಟ್ವೀಟ್ ಮೂಲಕ ಭಾರತ ತಂಡದ ಗೆಲುವನ್ನು ಅಭಿನಂದಿಸಿದ್ದಾರೆ. 'ಆನ್‌ಲೈನ್ ಫಿಡೆ ಚೆಸ್ ಒಲಿಂಪಿಯಾಡ್ ಗೆದ್ದ ಭಾರತೀಯ ತಂಡಕ್ಕೆ ಅಭಿನಂದನೆಗಳು. ನೀವು ದೇಶ ಹೆಮ್ಮೆ ಪಡುವಂತೆ ಮಾಡಿದ್ದೀರಿ. ರಷ್ಯಾದ ತಂಡಕ್ಕೂ ಅಭಿನಂದನೆಗಳು' ಎಂದಿದ್ದಾರೆ.
ಫೈನಲ್ ಪಂದ್ಯದ ವೇಳೆ ಸರ್ವರ್ ಕೈಕೊಟ್ಟಿದೆ. ಈ ವೇಳೆ ಭಾರತದ ನಿಹಾಲ್ ಸರೀನ್ ಮತ್ತು ದಿವ್ಯಾ ದೇಶ್‌ಮುಖ್ ಅವರ ಸೋಲಿನೊಂದಿಗೆ ರಷ್ಯಾವನ್ನು ವಿಜೇತ ತಂಡ ಎಂದು ಘೋಷಿಸಲಾಗಿತ್ತು. ಆದರೆ ಭಾರತ ಮೇಲ್ಮನವಿ ಸಲ್ಲಿಸಿತು ಮತ್ತು ತನಿಖೆಯ ನಂತರ, ಭಾರತ ಮತ್ತು ರಷ್ಯಾ ಎರಡನ್ನೂ ಜಂಟಿ ವಿಜೇತ ತಂಡಗಳು ಎಂದು ಘೋಷಿಸಲಾಯಿತು.