ಕರ್ನಾಟಕ

karnataka

ETV Bharat / sports

ವಿಶ್ವಕಪ್​ ಚಾಂಪಿಯನ್ಸ್​ ಅರ್ಜೆಂಟೀನಾ, ಗೆಲುವಿಗೆ ಹೋರಾಡಿದ ಫ್ರಾನ್ಸ್​ಗೆ ಅಭಿನಂದನೆಗಳು: ಪ್ರಧಾನಿ ಮೋದಿ - ಅರ್ಜೆಂಟೀನಾ ಗೆಲುವಿನ ಬಳಿಕ ಟ್ವೀಟ್​ ಮಾಡಿರುವ ಪ್ರಧಾನಿ

ಭಾನುವಾರ ದೋಹಾದ ಲುಸೇಲ್ ಸ್ಟೇಡಿಯಂನಲ್ಲಿ ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವೆ ನಡೆದ ಫುಟ್ಬಾಲ್ ವಿಶ್ವಕಪ್ 2022ರ ಸೂಪರ್ ಥ್ರಿಲ್ಲಿಂಗ್ ಫೈನಲ್‌ನಲ್ಲಿ ಕೊನೆಗೂ ಅರ್ಜೆಂಟೀನಾ ತಂಡ ಗೆಲುವು ಸಾಧಿಸಿದೆ. ಅರ್ಜೆಂಟೀನಾ ಗೆಲುವಿಗೆ ಪ್ರಧಾನಿ ಮೋದಿ ಟ್ವೀಟ್​ ಮೂಲಕ ಅಭಿನಂದಿಸಿದ್ದಾರೆ.

PM Modi congratulates Argentina  PM Modi congratulates Argentina on victory  FIFA World Cup final  FIFA World Cup  ಚಾಂಪಿಯನ್ಸ್ ಕಿರೀಟವನ್ನು ಅಲಂಕರಿಸಿದ ಅರ್ಜೆಂಟೀನಾ  ಕಿರೀಟವನ್ನು ಅಲಂಕರಿಸಿದ ಅರ್ಜೆಂಟೀನಾಗೆ ಅಭಿನಂದನೆ  ಪ್ರಧಾನಿ ಮೋದಿ ಟ್ವೀಟ್​ ಫುಟ್ಬಾಲ್ ವಿಶ್ವಕಪ್‌ನಲ್ಲಿ ಜಯಗಳಿಸಿದ ಅರ್ಜೆಂಟೀನಾ  ಅರ್ಜೆಂಟೀನಾವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿ  ಅರ್ಜೆಂಟೀನಾ ಗೆಲುವಿನ ಬಳಿಕ ಟ್ವೀಟ್​ ಮಾಡಿರುವ ಪ್ರಧಾನಿ  ಫುಟ್ಬಾಲ್ ವಿಶ್ವಕಪ್ 2022 ರ ಸೂಪರ್ ಥ್ರಿಲ್ಲಿಂಗ್ ಫೈನಲ್
ಚಾಂಪಿಯನ್ಸ್ ಕಿರೀಟವನ್ನು ಅಲಂಕರಿಸಿದ ಅರ್ಜೆಂಟೀನಾಗೆ ಅಭಿನಂದನೆಗಳು

By

Published : Dec 19, 2022, 8:16 AM IST

ದೋಹಾ, ಕತಾರ್​:ಫುಟ್ಬಾಲ್ ವಿಶ್ವಕಪ್‌ನಲ್ಲಿ ಜಯಗಳಿಸಿದ ಅರ್ಜೆಂಟೀನಾವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಇದು ಅತ್ಯಂತ ರೋಚಕ ಫುಟ್ಬಾಲ್ ಪಂದ್ಯಗಳಲ್ಲಿ ಒಂದಾಗಿ ನೆನಪಿನಲ್ಲಿ ಉಳಿಯುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಅರ್ಜೆಂಟೀನಾ ಗೆಲುವಿನ ಬಳಿಕ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಫಿಫಾ ವಿಶ್ವಕಪ್ ಗೆದ್ದು​ ಚಾಂಪಿಯನ್ಸ್ ಕಿರೀಟವನ್ನು ಅಲಂಕರಿಸಿದ ಅರ್ಜೆಂಟೀನಾಗೆ ಅಭಿನಂದನೆಗಳು!, ಟೂರ್ನಿಯುದ್ದಕ್ಕೂ ಅವರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಅರ್ಜೆಂಟೀನಾ ಮತ್ತು ಮೆಸ್ಸಿಯ ಲಕ್ಷಾಂತರ ಭಾರತೀಯ ಅಭಿಮಾನಿಗಳು ಮಹಾನ್ ಗೆಲುವಿಗಾಗಿ ಸಂತೋಷಪಟ್ಟಿದ್ದಾರೆ ಎಂದು ಟ್ವೀಟ್​ ಮಾಡಿದ್ದಾರೆ.

ಫ್ರಾನ್ಸ್ ತಂಡವನ್ನು ಉಲ್ಲೇಖಿಸಿ ಮತ್ತೊಂದು ಟ್ವೀಟ್‌ ಮಾಡಿರುವ ಮೋದಿ, ಫಿಫಾ ವಿಶ್ವಕಪ್​ನಲ್ಲಿ ಉತ್ಸಾಹಭರಿತ ಪ್ರದರ್ಶನ ನೀಡಿದ ಫ್ರಾನ್ಸ್‌ ತಂಡಕ್ಕೆ ಅಭಿನಂದನೆಗಳು!, ಫೈನಲ್‌ಗೆ ಪಂದ್ಯದಲ್ಲಿ ತಮ್ಮ ಕೌಶಲ್ಯ ಮತ್ತು ಕ್ರೀಡಾ ಮನೋಭಾವದಿಂದ ಫುಟ್ಬಾಲ್ ಅಭಿಮಾನಿಗಳನ್ನು ಸಂತೋಷಪಡಿಸಿದರು ಎಂದು ಬರೆದಿದ್ದಾರೆ.

ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವೆ ಭಾನುವಾರ ದೋಹಾದ ಲುಸೇಲ್ ಸ್ಟೇಡಿಯಂನಲ್ಲಿ ನಡೆದ ಫುಟ್ಬಾಲ್ ವಿಶ್ವಕಪ್ 2022ರ ಸೂಪರ್ ಥ್ರಿಲ್ಲಿಂಗ್ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಗೆದ್ದಿದೆ. ಪಂದ್ಯದಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್​ನಲ್ಲಿ ಫ್ರಾನ್ಸ್ ತಂಡವನ್ನು 4-2 ಗೋಲುಗಳಿಂದ ಮಣಿಸಿ ಮೂರನೇ ಬಾರಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಓದಿ:ಫ್ರಾನ್ಸ್ ಸೋಲಿನಿಂದ ಭಾವುಕರಾದ ​ಎಂಬೆಪ್ಪೆ.. ಫೈನಲ್​ ಹೀರೋಗೆ ಸಮಾಧಾನಪಡಿಸಿದ ಫ್ರೆಂಚ್​ ಅಧ್ಯಕ್ಷ

ABOUT THE AUTHOR

...view details