ಕರ್ನಾಟಕ

karnataka

ETV Bharat / sports

ಒಲಿಂಪಿಕ್ಸ್​ ಕ್ರೀಡಾಪಟುಗಳಿಗೆ ಸಪೂರ್ಣ ಬೆಂಬಲ ನೀಡಲು ಪ್ರಧಾನಿ ಮೋದಿ ಸೂಚನೆ

ನಮ್ಮ ಕ್ರೀಡಾಪಟುಗಳು ಸಂತೋಷವಾಗಿದ್ದು, ಟೋಕಿಯೊ ಒಲಿಂಪಿಕ್ಸ್‌ಗೆ ತಯಾರಾಗುತ್ತಿದ್ದಾರೆ. ಸಾಂಕ್ರಾಮಿಕ ಹೊರತಾಗಿಯೂ ಭಾರತಕ್ಕೆ ಗೌರವ ತಂದುಕೊಡುವ ನಮ್ಮ ಕ್ರೀಡಾಪಟುಗಳನ್ನು ಬೆಂಬಲಿಸಲು ಸರ್ಕಾರವು ಎಲ್ಲವನ್ನು ಮಾಡುತ್ತಿದೆ..

ಒಲಿಂಪಿಕ್ಸ್ 2021
ನರೇಂದ್ರ ಮೋದಿ

By

Published : May 22, 2021, 8:19 PM IST

ನವದೆಹಲಿ: ಜುಲೈನಲ್ಲಿ ಜಪಾನ್​ನಲ್ಲಿ ನಡೆಯಲಿರುವ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಅಗತ್ಯವಾದ ಎಲ್ಲಾ ರೀತಿಯ ಬೆಂಬಲ ನೀಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೂಚಿಸಿದ್ದಾರೆ ಎಂದು ಕ್ರೀಡಾ ಸಚಿವ ಕಿರಣ್ ರಿಜಿಜು ಶನಿವಾರ ತಿಳಿಸಿದ್ದಾರೆ.

2020ರಲ್ಲಿ ಕೋವಿಡ್​ನಿಂದ ಮುಂದೂಡಲ್ಪಟ್ಟ ಟೋಕಿಯೋ ಗೇಮ್ಸ್​ ಜುಲೈ 23ರಿಂದ ಆಗಸ್ಟ್​ 8ರವರೆಗೆ ನಡೆಯಲಿದೆ. ಈ ಮಹಾ ಕ್ರೀಡಾಕೂಟಕ್ಕೆ ಸುಮಾರು 148 ಕ್ರೀಡಾಪಟುಗಳು ಅರ್ಹತೆ ಪಡೆದಿದ್ದಾರೆ.

"ನಮ್ಮ ಕ್ರೀಡಾಪಟುಗಳು ಸಂತೋಷವಾಗಿದ್ದು, ಟೋಕಿಯೊ ಒಲಿಂಪಿಕ್ಸ್‌ಗೆ ತಯಾರಾಗುತ್ತಿದ್ದಾರೆ. ಸಾಂಕ್ರಾಮಿಕ ಹೊರತಾಗಿಯೂ ಭಾರತಕ್ಕೆ ಗೌರವ ತಂದುಕೊಡುವ ನಮ್ಮ ಕ್ರೀಡಾಪಟುಗಳನ್ನು ಬೆಂಬಲಿಸಲು ಸರ್ಕಾರವು ಎಲ್ಲವನ್ನು ಮಾಡುತ್ತಿದೆ.

ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಮ್ಮ ಕಿರಿಯ ಮತ್ತು ಗಣ್ಯ ಅಥ್ಲೀಟ್​ಗಳಿಗೆ ಸಂಪೂರ್ಣ ಬೆಂಬಲ ನೀಡಲು ಸ್ಪಷ್ಟ ನಿರ್ದೇಶನ ನೀಡಿದ್ದಾರೆ " ರಿಜಿಜು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಈ ಟ್ವೀಟ್​ ಜೊತೆಗೆ ಭಾರತ ತಂಡದ ಅಗ್ರಮಾನ್ಯ ಶಟ್ಲರ್​ ಪಿವಿ ಸಿಂಧು, ಚಾಂಪಿಯನ್​ ಕುಸ್ತಿಪಟು ಬಜರಂಗ್ ಪೂನಿಯಾ ಮತ್ತು ಇದೇ ಮೊದಲ ಬಾರಿಗೆ ಕತ್ತಿವರಸೆಯಲ್ಲಿ ಭಾರತಕದ ಪರ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸುತ್ತಿರುವ ಭವಾನಿ ದೇವಿ ಅವರು ಟಾಪ್​ ಒಲಿಂಪಿಕ್ಸ್​ ಪೋಟಿಯಮ್ ಸ್ಕೀಮ್​ ಮತ್ತು ಸ್ಪೋರ್ಟ್ಸ್​ ಆಥಾರಿಟಿ ಆಫ್​ ಇಂಡಿಯಾದ ಸಂಪೂರ್ಣ ಬೆಂಬಲಕ್ಕೆ ಧನ್ಯವಾದ ತಿಳಿಸಿರುವು ವಿಡಿಯೋವನ್ನು ಪೋಸ್ಟ್​ ಮಾಡಿದ್ದಾರೆ.

ಇದನ್ನು ಓದಿ: ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​ ನನ್ನ ಪಾಲಿನ ವಿಶ್ವಕಪ್ : ಉಮೇಶ್ ಯಾದವ್​

ABOUT THE AUTHOR

...view details