ಮುಂಬೈ: ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಅತ್ಯುತ್ತಮ ರೈಡರ್ ಆಗಿರುವ ಪರ್ದೀಪ್ ನರ್ವಾಲ್ ಇಂದು ನಡೆದ ಪಿಕೆಎಲ್ ಹರಾಜಿನಲ್ಲಿ 1.65 ಕೋಟಿ ರೂ. ದಾಖಲೆ ಬೆಲೆಗೆ ಯುಪಿ ಯೋಧ ಪಾಲಾಗಿದ್ದಾರೆ. ಇದು ಪಿಕೆಎಲ್ ಇತಿಹಾಸದಲ್ಲೇ ಆಟಗಾರನೊಬ್ಬ ಪಡೆದ ಗರಿಷ್ಠ ಬೆಲೆಯಾಗಿದೆ.
ಸೋಮವಾರ ನಡೆದ ಪ್ರೊ ಕಬಡ್ಡಿ ಲೀಗ್ ಹರಾಜಿನಲ್ಲಿ ಪಾಟ್ನಾ ನಾಯಕನನ್ನು ಖರೀದಿಸಲು ಹಲವಾರು ಫ್ರಾಂಚೈಸಿಗಳು ಪೈಪೋಟಿ ನಡೆಸಿದವು. ಜೈಪುರ್ ಪಿಂಕ್ ಪ್ಯಾಂಥರ್ಸ್, ತೆಲುಗು ಟೈಟಾನ್ಸ್, ಯುಪಿ ಯೋಧ ಸೇರಿದಂತೆ ಹಲವಾರು ಫ್ರಾಂಚೈಸಿಗಳು ಪರ್ದೀಪ್ರನ್ನು ಖರೀದಿಸಲು ಸತಪ್ರಯತ್ನ ಮಾಡಿದರು. 30 ಲಕ್ಷ ಮೂಲ ಬೆಲೆಯ ಪರ್ದೀಪ್ರನ್ನು ಯುಪಿ ತಂಡ 1.65 ಕೋಟಿ ರೂ.ಗೆ ಖರೀದಿಸಿತು.
ಸಿದ್ಧಾರ್ಥ್ ದೇಸಾಯಿಗೂ ಬಂಪರ್
ಕಳೆದ ಬಾರಿ ತೆಲುಗು ಟೈಟಾನ್ಸ್ನಲ್ಲಿದ್ದ ಸಿದ್ಧಾರ್ಥ್ ದೇಸಾಯಿಗೂ ಹಲವು ಫ್ರಾಂಚೈಸಿಗಳು ಬಾರಿ ಪೈಪೋಟಿ ನಡೆಸಿ 1.30 ಕೋಟಿ ರೂಗೆ ಯುಪಿ ಯೋಧ ಖರೀದಿಸಿತ್ತು. ಆದರೆ ಟೈಟಾನ್ಸ್ ತನ್ನ FBM ಬಳಸಿ ಅಷ್ಟೇ ಮೊತ್ತಕ್ಕೆ ತನ್ನಲ್ಲೇ ಉಳಿಸಿಕೊಂಡಿತು.
ಈ ಬಾರಿ ಪರ್ದೀಪ್ ಮತ್ತು ದೇಸಾಯಿ ಮಾತ್ರ ಮಾತ್ರ ಕೋಟಿ ದಾಟಿದ ಆಟಗಾರರಾದರು. ಇವರನ್ನು ಬಿಟ್ಟರೆ ರೈಡರ್ ಮನ್ಜೀತ್ 92 ಲಕ್ಷಕ್ಕೆ ತಮಿಳು ತಲೈವಾಸ್, ಸಚಿನ್ 84 ಲಕ್ಷ ರೂ.ಗೆ ಪಾಟ್ನಾ ಪೈರೇಟ್ಸ್ ಹಾಗೂ ಚಂದ್ರನ್ ರಂಜಿತ್ 80 ಲಕ್ಷ ರೂಗೆ ಬೆಂಗಳೂರು ಬುಲ್ಸ್ ಪಾಲಾದರು. ಇನ್ನು ಬುಲ್ಸ್ ತಂಡದಲ್ಲಿದ್ದ ರೋಹಿತ್ ಕುಮಾರ್ 36 ಲಕ್ಷಕ್ಕೆ ತೆಲುಗು ಟೈಟನ್ಸ್ ಪಾಲಾದರು.
ಕನ್ನಡಿಗ ಪ್ರಶಾಂತ್ ಕುಮಾರ್ ರೈ 55 ಲಕ್ಷಕ್ಕೆ ಪಾಟ್ನಾ ಪೈರೇಟ್ಸ್ ಸೇರಿದರು. ಶ್ರೀಕಾಂತ್ ಜಾಧವ್ರನ್ನು ಯುಪಿ ಯೋಧ 72 ಲಕ್ಷಕ್ಕೆ ತನ್ನಲ್ಲೇ ಉಳಿಸಿಕೊಂಡಿತು.
ಗರಿಷ್ಠ ಬೆಲೆ ಪಡೆದ ಆಟಗಾರರು