ಬೆಂಗಳೂರು:ನಾಯಕ ಮಣೀಂದರ್ ಸಿಂಗ್ ಮತ್ತು ಆಲ್ರೌಂಡರ್ ಮೊಹಮ್ಮದ್ ನಬೀಬಕ್ಷ್ ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ 31-28ರಲ್ಲಿ ಫ್ರೊ ಕಬಡ್ಡಿ ಲೀಗ್ನ 30 ಪಂದ್ಯದಲ್ಲಿ ಗೆದ್ದು ಬೀಗಿದೆ.
ಮಣೀಂದರ್ ಸಿಂಗ್ 13 ಅಂಕ ಪಡೆದರೆ, ನಬೀಬಕ್ಷ್ ಕೊನೆ ನಿಮಿಷದಲ್ಲಿ ಸೂಪರ್ ಟ್ಯಾಕಲ್ ಸೇರಿದಂತೆ 10 ಪಡೆದು ಜೈಪುರ್ ವಿರುದ್ಧ ಮೇಲುಗೈ ಸಾಧಿಸಲು ನೆರವಾದರು. ಅಬ್ಜೋರ್ 2 ಟ್ಯಾಕಲ್ ಅಂಕಪಡೆದರು.
ಇನ್ನು ಪಿಂಕ್ ಪ್ಯಾಂಥರ್ಸ್ ಪರ ಇಂದಿನ ಪಂದ್ಯದಲ್ಲೂ ಅರ್ಜುನ್ ದೇಸ್ವಾಲ್ಏಕಾಂಗಿ ಹೋರಾಟ ನಡೆಸಿದರು. ಅವರು ಒಟ್ಟು 16 ಅಂಕ ಪಡೆದರಾದರೂ ಉಳಿದೆಲ್ಲಾ ಆಟಗಾರರು ಸೇರಿ ಕೇವಲ 12 ಅಂಕ ಮಾತ್ರಗಳಿಸಲು ಶಕ್ತವಾದರು. ನಾಯಕ ದೀಪಕ್ ನಿವಾಸ್ ತಮ್ಮ ನೈಜ ಆಟವನ್ನು ತೋರುವಲ್ಲಿ ವಿಫಲರಾದದ್ದು ಸೋಲಿಗೆ ಕಾರಣವಾಯಿತು.
ಗೆಲುವು ಕೈಚಲ್ಲಿದ ಟೈಟನ್ಸ್:
ಸೋಮವಾರ ನಡೆದ ಮತ್ತೊಂದು ಪಂದ್ಯದಲ್ಲಿ ತೆಲುಗು ಟೈಟನ್ಸ್ ಕೈಗೆ ಬಂದ ತುತ್ತನ್ನು ಬಾಯಿಗೆ ಬರಬಂದೆ ಮಾಡಿಕೊಂಡರು. ಪಾಟ್ನಾ ವಿರುದ್ಧ 31-20ರಲ್ಲಿ ರೋಚಕ ಸೋಲು ಕಂಡು ನಿರಾಸೆಯನುಭವಿಸಿದರು.
ಮೊದಲಾರ್ಧದಲ್ಲಿ ಹಿನ್ನಡೆ ಅನುಭವಿಸಿದರೂ ದ್ವಿತೀಯಾರ್ಧದಲ್ಲಿ ಅದ್ಭುತವಾಗಿ ತಿರುಗಿಬಿದ್ದಿದ್ದ ಟೈಟನ್ಸ್ ಕೊನೆಯ 6 ಸೆಕೆಂಡ್ ಇರುವಾಗ 30-30ರಲ್ಲಿ ಸಮಬಲ ಸಾಧಿಸಿತ್ತು. ಕೊನೆಯ ರೈಡ್ ಪಾಟ್ನಾಗೆ ಸಿಕ್ಕಿತ್ತಾದರೂ ಎದುರಾಳಿ ತಂಡದಲ್ಲಿ ಒಬ್ಬನೇ ಆಟಗಾರನಿದ್ದ ಆ ಕೊನೆ ರೈಡ್ ಕೂಡ ಡು ಆರ್ ಡೈ ರೈಡ್ ಆಗಿತ್ತು.
ತೆಲುಗು ಟೈಟನ್ಸ್ ರೈಡಿಂಗ್ ಬಂದಿದ್ದ ಸಚಿನ್ರನ್ನು ಹಿಡಿಯುವ ಅವಕಾಶವಿತ್ತು. ಆದರೆ ಸಚಿನ್ ಬಾಕ್ ಲೈನ್ ಹತ್ತಿರವಿದ್ದಾಗಲೇ ಸಂದೀಪ್ ಕೊಂಡೋಲಾ ಹಿಡಿಯಲು ಯತ್ನಿಸಿ ಸುಲಭವಾಗಿ ಒಂದು ಅಂಕ ನೀಡಿದರು. ಪಾಟ್ನಾ 1 ಅಂಕದಿಂದ ರೋಚಕ ಜಯ ಸಾಧಿಸಿತು.
ಸಚಿನ್ಗೆ ಪಾಲಿಗೆ ಕೊನೆಯ ರೈಡಿಂಗ್ ಡು ಆರ್ ಡೈ ಆಗಿದ್ದರಿಂದ ಒಳಗೆ ಬರಲು ಬಿಟ್ಟು ಹಿಡಿದಿದ್ದರೆ ಪಾಟ್ನಾ ಆಲೌಟ್ ಆಗುತ್ತಿತ್ತು. ಟೈಟನ್ಸ್ 33-30ರಿಂದ ಗೆಲ್ಲಬಹುದಿತ್ತು. ಆದರೆ ಸಂದೀಪ್ ಮಾಡಿದ ದುಡುಕಿನ ಯತ್ನದಿಂದ ಟೈಟನ್ಸ್ ಮೊದಲ ಗೆಲುವು ಪಡೆಯುವ ಅವಕಾಶ ತಪ್ಪಿಸಿಕೊಂಡಿತು. ಟೈಟನ್ಸ್ ಅಂಕಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದೆ. ಆದರೆ ಇಲ್ಲಿಯವರಗೆ ಒಂದೂ ಪಂದ್ಯವನ್ನು ಗೆಲ್ಲಲಾಗಿಲ್ಲ. ಆಡಿರುವ 5 ಪಂದ್ಯಗಳಲ್ಲಿ 3 ಟೈ ಮತ್ತು 2 ಸೋಲು ಕಂಡಿದೆ. ಸೋಲುಕಂಡ ಎರಡೂ ಪಂದ್ಯದಲ್ಲೂ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತ್ತು.
ಇದನ್ನೂ ಓದಿ:IND vs SA 2nd Test: 202 ರನ್ಗಳಿಗೆ ರಾಹುಲ್ ಪಡೆ ಆಲೌಟ್, ದಿನದಾಟದ ಅಂತ್ಯಕ್ಕೆ ಆಫ್ರಿಕಾ 35/1