ಕರ್ನಾಟಕ

karnataka

ETV Bharat / sports

ಸತತ 2ನೇ ಸೋಲು ಕಂಡ ಬುಲ್ಸ್​.. ಪವನ್​ ಶೆರಾವತ್​ ಏಕಾಂಗಿ ಹೋರಾಟ ವ್ಯರ್ಥ.. - ಪ್ರೋ ಕಬಡ್ಡಿ ಲೀಗ್​

ಇಡೀ ಟೂರ್ನಿಯಲ್ಲಿ ಬೆಂಗಳೂರಿನ ಪರ ಪವನ್​ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ. ಗೆಲುವಿಗಾಗಿ ಹೆಚ್ಚು ಅವರನ್ನೇ ನಂಬಿಕೊಂಡಿರುವುದೇ ತಂಡಕ್ಕೆ ಹಿನ್ನಡೆಯಾಗುತ್ತಿದೆ. ಶನಿವಾರ ಹರಿಯಾಣ ವಿರುದ್ಧ ಮುಗ್ಗರಿಸಿದ್ದ ಬುಲ್ಸ್​ ಯೋಧ ವಿರುದ್ಧವೂ 33-30ರ ಅಂತರದಿಂದ ಮತ್ತೆ ಸೋಲುಕಂಡಿದೆ.

PKL 7

By

Published : Aug 13, 2019, 8:07 AM IST

ಅಹಮದಾಬಾದ್‌: ಬೆಂಗಳೂರು ಬುಲ್ಸ್​ನ ಪವನ್​ ಶೆರಾವತ್​ ಅವರ ಭರ್ಜರಿ ಪ್ರದರ್ಶನದ ಹೊರತಾಗಿಯೂ ಸೋಮವಾರ ನಡೆದ ಯುಪಿ ಯೋಧ ವಿರುದ್ಧ 35-33 ಅಂಕಳಿಂದ ಸೋಲು ಕಂಡಿದೆ.

ಇಡೀ ಟೂರ್ನಿಯಲ್ಲಿ ಬೆಂಗಳೂರಿನ ಪರ ಪವನ್​ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ. ಗೆಲುವಿಗಾಗಿ ಹೆಚ್ಚು ಅವರನ್ನೇ ನಂಬಿಕೊಂಡಿರುವುದೇ ತಂಡಕ್ಕೆ ಹಿನ್ನಡೆಯಾಗುತ್ತಿದೆ. ಶನಿವಾರ ಹರಿಯಾಣ ವಿರುದ್ಧ ಮುಗ್ಗರಿಸಿದ್ದ ಬುಲ್ಸ್​ ಯೋಧ ವಿರುದ್ಧವೂ 33-30ರ ಅಂತರದಿಂದ ಮತ್ತೆ ಸೋಲುಕಂಡಿದೆ.

ಬೆಂಗಳೂರು ತಂಡದ ಪರ ನಾಯಕ ರೋಹಿತ್‌ ಕುಮಾರ್‌ ವೈಫಲ್ಯವೇ ಸೋಲಿಗೆ ಪ್ರಮುಖ ಕಾರಣವಾಯಿತು. ಲೀಗ್‌ನ ಅತ್ಯುತ್ತಮ ರೇಡರ್‌ಗಳಲ್ಲಿ ಒಬ್ಬರಾದ ರೋಹಿತ್‌ ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಹರಿಯಾಣ ಪಂದ್ಯದಲ್ಲಿ 12 ಅಂಕಗಳಿಸಿದ್ದ ರೋಹಿತ್​ ಯೋಧ ವಿರುದ್ಧ ಕೇವಲ 4 ಅಂಕ ಮಾತ್ರ ಸಂಪಾದಿಸಿದರು. ಆದರೆ, ಪವನ್ ತಮ್ಮ ಭರ್ಜರಿ ಪ್ರದರ್ಶನ ಮುಂದುವರಿಸಿ 6 ರೈಡಿಂಗ್​, 6 ಬೋನಸ್‌ ಹಾಗೂ ಮತ್ತೆರಡು ಟ್ಯಾಕಲ್‌ ಅಂಕಗಳೊಂದಿಗೆ ಒಟ್ಟಾರೆ 14 ಅಂಕಗಳ ಕಾಣಿಕೆ ನೀಡಿ ತಂಡಕ್ಕೆ ಜಯ ತಂದುಕೊಡಲು ಪ್ರಯತ್ನಿಸಿ ವಿಫಲರಾದರು.

ಬುಲ್ಸ್​ ವಿರುದ್ಧ ಉತ್ತಮ ಪ್ರದರ್ಶನ ತೋರಿದ ಯೋಧ ಟೂರ್ನಿಯಲ್ಲಿ ಎರಡನೇ ಜಯ ಸಾಧಿಸಿತು. ತಂಡದ ಸ್ಟಾರ್​ ರೈಡರ್​ ಶ್ರೀಕಾಂತ್​ ಯಾದವ್​ 9, ಮೋನು ಗೋಯಟ್​ 8, ಸುಮಿತ್​ 5,ಅಮಿತ್​ 3 ಅಂಕ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಮತ್ತೊಂದು ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್​ ಹಾಗೂ ತೆಲುಗು ಟೈಟನ್ಸ್​ ನಡುವಿನ ಪಂದ್ಯ 29-29 ಅಂಕಗಳಿಂದ ಟೈನಲ್ಲಿ ಅಂತ್ಯಗೊಂಡಿತು.

ABOUT THE AUTHOR

...view details